ಮಗಳ ವಯಸ್ಸಿನ ನಟಿಯನ್ನು ಮದುವೆಯಾಗುತ್ತಿರುವ ಅಮೀರ್ ಖಾನ್! ನಟಿ ಯಾರು ಗೊತ್ತಾ?

ಬಾಲಿವುಡ್ ಮಿಸ್ಟರ್ ಪರ್ಫೆಕ್ಟ್ ನಟ ಅಮೀರ್ ಖಾನ್ ಅವರು ಮೂರನೇ ಮದುವೆ ಆಗುತ್ತಿದ್ದಾರಂತೆ…! ಬಾಲಿವುಡ್ ನಲ್ಲಿ ಅನೇಕ ಸ್ಟಾರ್ ನಟ-ನಟಿಯರು ತಮ್ಮ ಸಿನಿಮಾಗಳ ಜೊತೆ ಜೊತೆಗೆ ತಮ್ಮ ವೈಯಕ್ತಿಕ ವಿಚಾರಗಳ ಬಗ್ಗೆಯೂ ಕೂಡ ಭಾರಿ ಸುದ್ದಿ ಆಗುತ್ತಾರೆ. ಅಂತೆಯೇ ಬಾಲಿವುಡ್ ನ ಬಹು ಬೇಡಿಕೆಯ ನಟರಲ್ಲಿ ಒಬ್ಬರಾಗಿರುವ ಜನಪ್ರಿಯ ನಟ ಅಮೀರ್ ಖಾನ್ ಕೂಡ ಒಬ್ಬರು. ಹಿಂದಿ ಚಿತ್ರರಂಗದಲ್ಲಿ ಸಾಮಾಜಿಕ ಸಂದೇಶ ಸಾರುವ ಸಿನಿಮಾ ಮಾಡುವ ನಟರಲ್ಲಿ ಪ್ರಮುಖರಾಗಿರುವ ನಟ ಅಮೀರ್ ಖಾನ್ ಹಿಂದಿ ಚಿತ್ರರಂಗದ ಯಶಸ್ವಿ ನಟ. ಸಿನಿಮಾದಲ್ಲಿ ಯಶಸ್ಸು ಪಡೆದ ನಟ ಅಮೀರ್ ಖಾನ್ ತಮ್ಮ ವೈಯಕ್ತಿಕ ಬದುಕಿನಲ್ಲಿ ಮಾತ್ರ ಎಡವಿದ್ದಾರೆ. ಹೌದು ನಟ ಅಮೀರ್ ಖಾನ್ ಇಬ್ಬರನ್ನು ಮದುವೆಯಾಗಿ ಇಬ್ಬರೊಂದಿಗೆ ವಿಚ್ಚೇದನ ಪಡೆದಿದ್ದಾರೆ. ಇದೀಗ ಮೂರನೇ ಮದುವೆ ಆಗಲು ಹೊರಟಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದೆ.

ಹೌದು ನಟ ಅಮೀರ್ ಖಾನ್ ಅವರು ಕೇವಲ ನಟ ಮಾತ್ರ ಅಲ್ಲ. ಅವರು ನಿರ್ದೇಶನ, ಗಾಯನ ಮತ್ತು ನಿರೂಪಕರಾಗಿಯೂ ಕೂಡ ಯಶಸ್ವಿಯಾಗಿದ್ದಾರೆ. 1986 ರಲ್ಲಿ ರೀನಾ ದತ್ತ ಎಂಬುವರನ್ನ ಮದುವೆ ಆದ ಅಮೀರ್ ಖಾನ್ 2002 ರಲ್ಲಿ ಅವರಿಗೆ ವಿಚ್ಚೇದನ ನೀಡುತ್ತಾರೆ. ತದ ನಂತರ 2005 ರಲ್ಲಿ ಕಿರಣ್ ರಾವ್ ಎಂಬುವರೊಟ್ಟಿಗೆ ಎರಡನೇ ಮದುವೆ ಆಗಿ ಹೀರಾ ಖಾನ್ ಮತ್ತು ಜೈದ್ ಖಾನ್ ಎಂಬ ಇಬ್ಬರು ಮುದ್ದಾದ ಮಕ್ಕಳೊಂದಿಗೆ ಸಾಂಸಾರಿಕ ಜೀವನ ನಡೆಸುತ್ತಿದ್ದ ಅಮೀರ್ ಖಾನ್ ಇತ್ತೀಚೆಗೆ ಕೆಲವು ತಿಂಗಳ ಹಿಂದೆಯಷ್ಟೇ ಕಿರಣ್ ರಾವ್ ಅವರಿಗೂ ಕೂಡ ಡಿವೋರ್ಸ್ ನೀಡುತ್ತಾರೆ.

ಇದೀಗ ತಮ್ಮ ನಟನೆಯ ದಂಗಲ್ ಸಿನಿಮಾದಲ್ಲಿ ಮಗಳ ಪಾತ್ರ ನಿರ್ವಹಿಸಿದ್ದ ನಟಿ ಫಾತಿಮಾ ಸನ್ ಶೇಕ್ ಅವರನ್ನು ವಿವಾಹವಾಗಲಿದ್ದಾರೆ ಎಂಬ ಸುದ್ದಿ ಬಿ-ಟೌನ್ ನಲ್ಲಿ ಭಾರಿ ಸುದ್ದಿಯಾಗಿದೆ. ಇನ್ನು ನಟ ಅಮೀರ್ ಖಾನ್ ಅವರ ಲಾಲ್ ಸಿಂಗ್ ಛಡ್ಡಾ ಸಿನಿಮಾ 2022 ಏಪ್ರಿಲ್ 14 ರಂದು ರಿಲೀಸ್ ಆಗಲಿದ್ದು, ಈ ಚಿತ್ರಕ್ಕಾಗಿ ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ ಮತ್ತು ಲೈಕ್ ಮಾಡಿ. ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.