ಮಗಳ ಮುದ್ದಾದ ಪೋಟೋ ಹಂಚಿಕೊಂಡ ಸ್ಟಾರ್ ನಟಿ ಪ್ರಿಯಾಂಕಾ ಚೋಪ್ರಾ

ಈ ಸಿನಿಮಾ ತಾರೆಯರು ಒಂದು ರೀತಿಯ ಎವರ್ಗ್ರೀನ್ ಟಾಪಿಕ್ಸ್ ಹಾಗೇ ಇರ್ತಾರೆ ಅಂತ ಹೇಳ್ಬೋದು. ಯಾಕಪ್ಪಾ ಅಂದ್ರೆ ಈ ನಟಿ ಮಣಿಯರು ಸಿನಿಮಾ ಮಾಡ್ಲಿ ಬಿಡ್ಲಿ ಒಂದಲ್ಲ ಒಂದು ವಿಚಾರವಾಗಿ ಸುದ್ದಿಯಾಗುತ್ತಾರೆ. ಅದು ಅವರ ವೈಯಕ್ತಿಕ ಜೀವನ, ಫೋಟೋ ಶೂಟ್ ಅಥವಾ ಇನ್ನಿತರ ವಿಷಯಗಳಿಗೆ ನಟಿಯರು ಸಾರ್ವಜನಿಕವಾಗಿ ಒಂದಷ್ಟು ಸುದ್ದಿ ಆಗುತ್ತಾರೆ. ಅದೇ ರೀತಿಯಾಗಿ ಇದೀಗ ಬಾಲಿವುಡ್ ಟಾಪ್ ಒನ್ ನಟಿಯಾಗಿ ಮಿಂಚಿದ್ದ ಪ್ರಿಯಾಂಕಾ ಚೋಪ್ರಾ ಅವರು ಕೂಡ ಸುದ್ದಿಯಾಗಿದ್ದಾರೆ. ಪ್ರಿಯಾಂಕಾ ಚೋಪ್ರಾ ಅವರು ನಟಿಯಾಗುವುದಕ್ಕೆ ಮುನ್ನ ಮಾಡ್ಲೆಂಗ್ ಕ್ಷೇತ್ರದಲ್ಲಿ ಮಿಂಚಿ ಇಪ್ಪತರ ದಶಕದಲ್ಲಿ ಮಿಸ್ ವರ್ಲ್ಡ್ ಆಗಿ ಮಿಂಚಿದವರು. 2002ರಲ್ಲಿ ತಮಿಳನ್ ಎಂಬ ತಮಿಳು ಚಿತ್ರದ ಮೂಲಕ ಬೆಳ್ಳಿತೆರೆಗೆ ಹೆಜ್ಜೆ ಇಟ್ಟರು.

ಬಳಿಕ 2003ರಲ್ಲಿ ಅನಿಲ್ ಶರ್ಮಾ ಅವರ ದಿಹೀರೋ ಲವ್ ಸ್ಟೋರಿ ಆಫ್ ಎಸ್ಪೈ ಎಂಬ ಚಿತ್ರದ ಮೂಲಕ ಹಿಂದಿ ಚಿತ್ರದಲ್ಲಿ ನಟಿಸಲು ಆರಂಭಿಸಿದರು. ಕೃಷ್ ಸಿನಿಮಾ ಪ್ರಿಯಾಂಕಾ ಚೋಪ್ರಾ ಅವರಿಗೆ ಬಹುದೊಡ್ಡ ಬ್ರೇಕ್ ಮತ್ತು ಅಪಾರ ಜನಪ್ರಿಯತೆ ತಂದುಕೊಟ್ಟಿತು. ತನ್ನ ನಟನೆಯ ಮೂಲಕ ಬಾಲಿವುಡ್ ನಲ್ಲಿ ಸ್ಟಾರ್ ಬೇಡಿಕೆಯ ನಟಿಯಾಗಿ ಮಿಂಚಿದ ಪ್ರಿಯಾಂಕಾ ಚೋಪ್ರಾ ಅವರಿಗೆ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನ ನೀಡಿ ಗೌರವಿಸಿದೆ. ಇನ್ನು 2018ರಲ್ಲಿ ನಿಕ್ ಜೋನ್ಸ್ ಅವರನ್ನ ಮದುವೆಯಾದ ನಟಿ ಪ್ರಿಯಾಂಕಾ ಚೋಪ್ರಾ ಅವರು ಸಿನಿಮಾ ರಂಗದಿಂದ ಅಂತರ ಕಾಯ್ದುಕೊಂಡು ದಾಂಪತ್ಯ ಜೀವನದಲ್ಲಿ ಮುಳುಗಿದ್ದಾರೆ. ಇತ್ತೀಚೆಗೆ ಕಳೆದ ಏಳು ತಿಂಗಳ ಹಿಂದೆ ನಟಿ ಪ್ರಿಯಾಂಕಾ ಚೋಪ್ರಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

ಆ ಮಗುವಿಗೆ ಮಾಲ್ತಿ ಮೇರಿ ಎಂದು ಹೆಸರಿಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರೋ ಪ್ರಿಯಾಂಕಾ ಚೋಪ್ರಾ ಅವರು ಇದೀಗ ತಮ್ಮ ಏಳು ತಿಂಗಳ ಮಗಳು ಮಾಲ್ತಿ ಮೇರಿ ಫೋಟೋವನ್ನ ಇದೇ ಮೊದಲ ಬಾರಿಗೆ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮಗಳು ಮಾಲ್ತಿ ಮೇರಿಯನ್ನ ಅಪ್ಪಿಕೊಂಡು ಲುಕ್ ಕೊಟ್ಟಿರುವ ಪ್ರಿಯಾಂಕಾ ಚೋಪ್ರಾ ಅವರ ಈ ಫೋಟೋ ಇದೀಗ ಸೋಶಿಯಲ್ ಮೀಡಿಯಾ ಪೂರ ಭಾರಿ ವೈರಲ್ ಆಗಿದೆ. ಈ ಫೋಟೋಗೆ ಪ್ರಿಯಾಂಕಾ ಚೋಪ್ರಾ ಅವರು ಇತರರಂತೆ ಪ್ರೀತಿಸಿ ಎಂದು ಕ್ಯಾಪ್ಶನ್ ಬರೆದುಕೊಂಡಿದ್ದಾರೆ. ಸದ್ಯಕ್ಕೆ ಹೋಟೆಲ್ ರೆಸ್ಟೋರೆಂಟ್ ವೊಂದನ್ನ ಆರಂಭ ಮಾಡಿರೋ ಪ್ರಿಯಾಂಕಾ ಚೋಪ್ರಾ ಸಾಂಸಾರಿಕ ಜೀವನದಲ್ಲಿ ಬಿಝಿ಼ ಆಗಿದ್ದಾರೆ.

Leave a Reply

%d bloggers like this: