ಮಗಳ ಅದ್ದೂರಿ ಹುಟ್ಟುಹಬ್ಬದ ಫೋಟೋಗಳನ್ನು ಹಂಚಿಕೊಂಡ ನಟಿ ರಾಧಿಕಾ ಪಂಡಿತ್ ಅವರು

ವಾವ್ ಯಶ್ ರಾಧಿಕಾ ಪಂಡಿತ್ ಪುತ್ರಿ ಪಕ್ಕಾ ಫ್ಯೂಚರ್ ಹೀರೋಯಿನ್ ಆಗ್ತಾರಂತೆ. ಅರೇ ಇದೇನಪ್ಪಾ ಈ ಥರಾ ಸುದ್ದಿ ಅಂತ ನೀವು ಗೊಂದಲ ಆಗ್ಬೋದು. ಆದ್ರೇ ಈ ರೀತಿ ಒಂದು ಸುದ್ದಿಯಾಗೋಕೆ ಬೇರಾರು ಕಾರಣ ಅಲ್ಲ. ನಟಿ ರಾಧಿಕಾ ಪಂಡಿತ್ ಅವರೇ ನೇರ ಕಾರಣ ಅಂತ ಹೇಳ್ಬೋದು. ಹೌದು ನಟಿ ರಾಧಿಕಾ ಪಂಡಿತ್ ಮತ್ತು ಯಶ್ ಈ ಆದರ್ಶ ದಂಪತಿಗಳಿಬ್ಬರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿಯೇ ಇರ್ತಾರೆ. ಇತ್ತೀಚೆಗೆ ಹೊರ ದೇಶದಲ್ಲಿ ಸಖತ್ ರೌಂಡ್ ಹೊಡೆದಿದ್ದ ಈ ತಾರಾ ಜೋಡಿ ತಾವು ಹೋಗಿದ್ದ ಒಂದಷ್ಟು ಸುಂದರ ತಾಣಗಳಲ್ಲಿ ನಿಂತು ತೆಗೆಸಿಕೊಂಡಿದ್ದ ಪೊಟೋಗಳನ್ನ ತಮ್ಮ ಸೊಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ರು.

ಆ ಸಮಯದಲ್ಲಿ ಅವರ ಆ ಎಲ್ಲಾ ಫೊಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದವು. ಅದರಂತೆ ಇದೀಗ ಮತ್ತೊಮ್ಮೆ ಯಶ್ ರಾಧಿಕಾ ಪಂಡಿತ್ ಸುದ್ದಿ ಆಗಿದ್ದಾರೆ. ಅದು ಯಾಕಪ್ಪಾ ಅಂದರೆ ಇತ್ತೀಚೆಗೆ ಕೆಲವು ದಿನಗಳ ಹಿಂದೆಯಷ್ಟೇ ಯಶ್ ರಾಧಿಕಾ ಪಂಡಿತ್ ಪುತ್ರಿ ಐರಾಳ ನಾಲ್ಕನೇ ವರ್ಷದ ಜನ್ಮದಿನವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗಿದೆ. ಆ ಫೋಟೋಗಳನ್ನ ನಟಿ ರಾಧಿಕಾ ಪಂಡಿತ್ ಅವರು ತಮ್ಮ ಇನ್ಸ್ಟಾ ಗ್ರಾಮ್ ಖಾತೆಯನ್ನ ಪೋಸ್ಟ್ ಮಾಡಿದ್ದಾರೆ. ಈ ಫೋಟೋದಲ್ಲಿ ಐರಾ ತುಂಬಾ ಮುದ್ದು ಮುದ್ದಾಗಿ ಗೊಂಬೆಯಂತೆ ಕಾಣುತ್ತಿದ್ದಾರೆ. ಐರಾಳನ್ನ ನೋಡಿದ ನೆಟ್ಟಿಗರು ವಾವ್ ಎಷ್ಟು ಮುದ್ದಾಗಿದ್ದಾಳೆ ಐರಾ ಪುಟ್ಟಿ ಮುಂದೆ ತನ್ನ ತಂದೆ ತಾಯಿಯನ್ನೇ ಮೀರಿಸಿ ದೊಡ್ಡ ಸ್ಟಾರ್ ಆದರೂ ಅಚ್ಚರಿ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಫೋಟೋದಲ್ಲಿ ಐರಾ ಕಲರ್ ಫುಲ್ ಫ್ರಾಕ್ ಧರಿಸಿ ತಲೆಯ ಮೇಲೆ ಯುನಾಕಾರ್ನ್ ಸ್ಟೈಲ್ ಹೇರ್ ಬ್ಯಾಂಡ್ ಕಟ್ಟಿ ಸಖತ್ ಶೈನ್ ಆಗಿ ಮಿಂಚುತ್ತಿದ್ದಾರೆ. ಐರಾಳನ್ನ ಎತ್ತಿಕೊಂಡಿರೋ ರಾಧಿಕಾ ಪಂಡಿತ್ ಸ್ಕೈ ಬ್ಲೂ ಡ್ರೆಸ್ ಧರಿಸಿ ಕೇಕ್ ಕಟ್ ಮಾಡಿ ಮುದ್ದಿನ ಮಗಳು ಐರಾಗೆ ಕೇಕ್ ತಿನ್ನಿಸುತ್ತಿದ್ದಾರೆ. ಅದೇ ರೀತಿ ಯಶ್ ಕೂಡಾ ತಮ್ಮ ಮುದ್ದು ಮಗಳ ಜನ್ಮದಿನದಂದು ತಮ್ಮ ಎಲ್ಲಾ ಕೆಲಸ ಕಾರ್ಯಗಳಿಗೆ ಬ್ರೇಕ್ ಹಾಕಿ ತಮ್ಮ ತಂಗಿ ಮತ್ತು ಕುಟುಂಬದವರೊಟ್ಟಿಗೆ ಉತ್ತಮ ಸಮಯ ಕಳೆದಿದ್ದಾರೆ. ಐರಾಳ ಬರ್ಥ್ ಡೇ ಸೆಲೆಬ್ರೇಶನ್ ಫೋಟೋಗಳು ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿವೆ.

Leave a Reply

%d bloggers like this: