ಮದುವೆಯಾದ ನಂತರ ಎಲ್ಲ ಹೆಣ್ಣು ಮಕ್ಕಳು ಇದ್ದಕಿದ್ದಂತೆ ದಪ್ಪ ಆಗುವುದು ಇದೇ ಕಾರಣಕ್ಕೆ

ನಮ್ಮಲ್ಲಿ ಮದುವೆಯಾದ ಹೆಣ್ಣು ಮಕ್ಕಳು ಇದ್ದಕಿದ್ದಂತೆ ದಪ್ಪ ಆಗುತ್ತಾರೆ.ಇದಕ್ಕೆ ಬಹುತೇಕರು ಅವರವರಿಗೆ ತಿಳಿದಂತೆ ಅಭಿಪ್ರಾಯ ಅಭಿವ್ಯಕ್ತಪಡಿಸುತ್ತಾರೆ.ಅದರಲ್ಲಿಯೂ ಕೆಲವರು ಮದುವೆಯಾದ ಬಳಿಕ ಮಹಿಳೆಯರು ದಪ್ಪ ಆಗುವುದಕ್ಕೆ ದೈಹಿಕ ಸಂಪರ್ಕವೇ ಕಾರಣ ಎಂದು ಹೇಳುತ್ತಾರೆ.ಇನ್ನೂ ಕೆಲವರು ಮದುವೆಯ ಪೂರ್ವ ದಿನಗಳಲ್ಲಿ ಶಾಸ್ತ್ರ ಸಂಪ್ರದಾಯ ಎಂಬಂತೆ ಹಲವು ಬಾರಿ ಅರಿಶಿನ ನೀರಿನ ಸ್ನಾನ ಮಾಡಿಸಿರುತ್ತಾರೆ.ಇದರ ಪರಿಣಾಮವಾಗಿಯೂ ಕೂಡ ಹೆಣ್ಣು ಮಕ್ಕಳು ದಪ್ಪವಾಗುವುದಕ್ಕೆ ಕಾರಣವಾಗುತ್ತದೆ.ಇನ್ನು ಈ ರೀತಿಯ ಕಾರಣ,ಅಭಿಪ್ರಾಯಗಳು ಎಷ್ಟರ ಮಟ್ಟಿಗೆ ನಿಜವಾಗಿರುತ್ತದೆ.ಇದಕ್ಕೆ ವೈದ್ಯರು ಹೇಳುವುದು ಏನೆಂದರೆ ಖಂಡಿತಾ ಇಂತಹ ಅಭಿಪ್ರಾಯ ನಂಬಿಕೆಗಳು ಸತ್ಯಕ್ಕೆ ದೂರವಾದವು.

ಮದುವೆಯಾದ ನಂತರ ಮಹಿಳೆಯರು ದಪ್ಪ ಆಗುವುದಕ್ಕೆ ಹಲವು ಕಾರಣಗಳಿವೆ.ಅವುಗಳಲ್ಲಿ ಒಂದಷ್ಟು ವಿಚಾರಗಳನ್ನು ಗಮನಿಸುವುದಾದರೆ ಮೊದಲನೇದಾಗಿ ಆಹಾರ ಕ್ರಮ.ಮದುವೆಗೆ ಮುನ್ನ ಇದ್ದ ಆಹಾರ ಕ್ರಮ,ಶೈಲಿ ಮದುವೆಯ ನಂತರ ಪಾಲಿಸಲಾಗುವುದಿಲ್ಲ.ಎರಡು ಮೂರು ತಿಂಗಳ ಕಾಲ ಸಂಪೂರ್ಣವಾಗಿ ಬಿಡುವು ಇದ್ದು,ಬಂಧು ಬಳಗ ಸೇರಿದಂತೆ ಆಪ್ತಿಷ್ಟರ ಮನೆಯ ಭೇಟಿ ಊಟೋಪಚಾರ ಹೆಚ್ಚಾಗಿರುತ್ತದೆ.ಈ ದಿನಗಳಲ್ಲಿ ನವ ದಂಪತಿಗಳಿಬ್ಬರಿಗೂ ವ್ಯಾಯಾಮದ ಬಗ್ಗೆ ಆಲೋಚನೆ ಕೂಡ ಬರುವುದಿಲ್ಲ.ಜೊತೆಗೆ ಕೆಲವು ದಿನಗಳ ನಂತರ ಬದುಕಿನ ಹೊಸ ಜವಾಬ್ದಾರಿಗಳು,ಕನಸುಗಳು ಒತ್ತಡದ ಜೀವನಕ್ಕೆ ಎಡೆಮಾಡಿಕೊಡುತ್ತವೆ.ಹೀಗಾಗಿ ತಮ್ಮ ದೇಹ ಸೌಂದರ್ಯದ ಬಗ್ಗೆ ಮದುವೆಗಿಂತ ಮುಂಚೆ ಇದ್ದ ಕಾಳಜಿ ಆಸಕ್ತಿ ನಂತರದ ದಿನಗಳಲ್ಲಿ ಇರುವುದಿಲ್ಲ.

ಹೀಗಾಗಿ ನವ ದಂಪತಿಗಳಲ್ಲಿ ಇಬ್ಬರೂ ಕೂಡ ದಪ್ಪ ಆಗುವುದು ಸಾಮಾನ್ಯವಾಗಿರುತ್ತದೆ.ಆದರೆ ಮದುವೆಯಾದ ನಂತರದಲ್ಲಿ ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರೇ ದಪ್ಪ ಆಗುತ್ತಾರೆ. ಹೀಗಾಗಿ ಕೇವಲ ಶಾರೀರಿಕ ಸಂಪರ್ಕದಿಂದ ದೇಹದ ಕೆಲವು ಭಾಗಗಳಲ್ಲಿ ಕೊಬ್ಬಿನಾಂಶ ಹೆಚ್ಚಾಗಿ ದೇಹದ ತೂಕದಲ್ಲಿ ಬದಲಾವಣೆ ಆಗುತ್ತದೆ ಹೊರತು ಇದೇ ಸಂಪೂರ್ಣ ದೇಹದ ತೂಕ ಹೆಚ್ಚಾಗಲು ಕಾರಣ ಆಗುವುದಿಲ್ಲ ಎಂದು ತಿಳಿಸಿದ್ದಾರೆ. ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ತಪ್ಪದೆ ಶೇರ್ ಮಾಡಿ ಮತ್ತು ಲೈಕ್ ಮಾಡಿ. ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.