ಮದುವೆಯ ನಂತರ ನಾವಿಬ್ಬರು ಗಂಡ ಹೆಂಡತಿ ಅಲ್ಲವೇ ಅಲ್ಲ ಎಂದ ನಾಗಿಣಿ ನಟಿ! ಅಸಲಿಗೆ ಆಗಿದ್ದೇನು ಗೊತ್ತಾ

ಕನ್ನಡ ಕಿರುತೆರೆಯ ಜನಪ್ರಿಯ ವಾಹಿನಿಗಳಲ್ಲಿ ಒಂದಾಗಿರುವ ಜೀ಼ ಕನ್ನಡ ವಾಹಿನಿ ಅನೇಕ ಹೊಸ ಹೊಸ ಬಗೆಯ ಧಾರಾವಾಹಿಗಳನ್ನು ಪ್ರಸಾರ ಮಾಡುವ ಮೂಲಕ ನಾಡಿನಾದ್ಯಂತ ಅಪಾರ ಪ್ರಸಿದ್ದತೆ ಪಡೆದುಕೊಂಡಿದೆ.ಅಂತೆಯೇ ಜೀ಼ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಅನೇಕ ರಿಯಾಲಿಟಿ ಶೋ ಗಳು,ಸೀರಿಯಲ್ ಗಳು ಕೂಡ ಮನೆ ಮಾತಾಗಿವೆ.ಅಂತಹ ಮನೆ ಮಾತಾಗಿರುವ ಧಾರಾವಾಹಿಗಳಲ್ಲಿ ನಾಗಿಣಿ 2 ಧಾರಾವಾಹಿ ಕೂಡ ಒಂದಾಗಿದೆ.ಈ ನಾಗಿಣಿ 2 ಧಾರಾವಾಹಿ ಜೀ಼ ಕನ್ನಡ ವಾಹಿನಿಯ ಅತ್ಯಂತ ಜನಪ್ರಿಯ ಧಾರಾವಾಹಿಯಾಗಿದೆ.ನಾಗಿಣಿ 2 ಧಾರಾವಾಹಿ ಯಾವ ಮಟ್ಟಿಗೆ ಪ್ರಸಿದ್ದಿಯಾಗಿದೆ ಅಂದರೆ ಹಿಂದಿಗೂ ಕೂಡ ಡಬ್ ಆಗುತ್ತಿದೆ.ಅಷ್ಟರ ಮಟ್ಟಿಗೆ ತನ್ನ ಉತ್ತಮ ಗುಣಮಟ್ಟದ ಮೇಕಿಂಗ್,ಕೌತುಕತೆಯ ಕಥೆಯನ್ನಾಧಾರಿಸಿದ ಈ ನಾಗಿಣಿ 2 ಧಾರಾವಾಹಿ ಕಿರುತೆರೆ ಪ್ರೇಕ್ಷರಿಗೆ ಭಾರಿ ಮನರಂಜನೆ ನೀಡುತ್ತಿದೆ.

ನಾಗಿಣಿ/ ಶಿವಾನಿ ಪಾತ್ರದಲ್ಲಿ ಪುಟ್ಟ ಗೌರಿ ಸೀರಿಯಲ್ ಖ್ಯಾತಿಯ ನಟಿ ನಮ್ರತಾ ಗೌಡ ನಟಿಸುತ್ತಿದ್ದಾರೆ.ಆದಿಶೇಷ/ನ ತ್ರಿಶೂಲ್ ಪಾತ್ರದಲ್ಲಿ ನಟ ನಿನಾದ್ ಹರಿತ್ಸಾ ನಟಿಸುತ್ತಿದ್ದಾರೆ.ಇತ್ತೀಚೆಗೆ ನಾಗಿಣಿ 2 ಧಾರಾವಾಹಿಯಲ್ಲಿ ಶಿವಾನಿ ಮತ್ತು ತ್ರಿಶೂಲ್ ರ ಮದುವೆಯ ದೃಶ್ಯ ಸನ್ನಿವೇಶವೊಂದು ಚಿತ್ರೀಕರವಾಗಿದೆ.ಈ ದೃಶ್ಯವು ಸಾಮಾನ್ಯ ಸೀರಿಯಲ್ ಮದುವೆಗಳಂತೆ ನಡೆಯದೆ ಅದ್ದೂರಿಯಾಗಿ ಹಳ್ಳಿಯೊಂದರಲ್ಲಿ ಸಹಜ ಮದುವೆಯಂತೆ ನಡೆದಿದೆ.ಈ ಮದುವೆ ಕಾರ್ಯಕ್ರಮದ ದೃಶ್ಯದಲ್ಲಿ ನಟ ನಿನಾದ್ ಮತ್ತು ನಟಿ ನಮ್ರತಾ ನಿಜವಾದ ವಧು-ವರರಂತೆ ಮಿಂಚಿದ್ದರು.ಅದಲ್ಲದೆ ಇಬ್ಬರು ಕೂಡ ಒಂದಷ್ಟು ಸೆಲ್ಫಿಗೆ ಫೋಸ್ ನೀಡಿದ್ದರು.ಈ ಪೋಟೋಗಳು ಮೇಡ್ ಫಾರ್ ಈಚ್ ಅದರ್ ಎಂಬಂತೆ ತುಂಬಾ ಸುಂದರವಾಗಿ ಕಾಣುತ್ತಿದ್ದವು.

ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿ ನಟಿ ನಮ್ರತಾ ಗೌಡ ಮತ್ತು ನಟ ನಿನಾದ್ ನಿಜವಾಗಿಯೂ ಮದುವೆ ಆಗಿದ್ದಾರೆ ಎಂಬ ಸುದ್ದಿಯೊಂದು ಹರಿದಾಡಿದೆ.ಈ ಸುದ್ದಿ ದೊಡ್ಡದಾಗುತ್ತಿದ್ದಂತೆ ನಟಿ ನಮ್ರತಾ ಗೌಡ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಲೈವ್ ಬಂದು ನಾನು ಮತ್ತು ನಟ ನಿನಾದ್ ಮದುವೆ ಆಗಿಲ್ಲ.ನಾಗಿಣಿ 2 ಸೀರಿಯಲ್ ನ ಮದುವೆಯ ದೃಶ್ಯ ಸನ್ನಿವೇಶ ಎಂದು ಸ್ಪಷ್ಟನೆ ನೀಡಿದ್ದರು.ಒಟ್ಟಾರೆಯಾಗಿ ನಾಗಿಣಿ 2 ಧಾರಾವಾಹಿರ ಮದುವೆ ಸನ್ನಿವೇಶ ದೃಶ್ಯವೊಂದು ನಟಿ ನಮ್ರತಾ ಗೌಡ ಮತ್ತು ನಟ ನಿನಾದ್ ಅವರನ್ನ ಪೇಚಿಗೆ ಸಿಲುಕಿಸಿತ್ತು.

Leave a Reply

%d bloggers like this: