ಮದುವೆಗೆ ಮುನ್ನ ತಾಯಿ ಆಗುವ ಆಸೆ ಇದೆ, ತಪ್ಪೇನಿಲ್ಲ ಎಂದ ಸೌತ್ ಸಿನಿಮಾ ಇಂಡಸ್ಟ್ರಿಯ ಖ್ಯಾತ ನಟಿ…!

ಮದುವೆಗೆ ಮುನ್ನ ತಾಯಿಯಾದರೆ ತಪ್ಪೇನಿಲ್ಲ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ ಸೌತ್ ಸಿನಿಮಾ ಇಂಡಸ್ಟ್ರಿಯ ಖ್ಯಾತ ನಟಿ…! ಕೆಲವು ನಟ-ನಟಿಯರಿಗೆ ವಿವಾದ ಎಂಬುದು ಮಾತಿಗೆ ಅಂಟಿಕೊಂಡೇ ಬಂದಿರುತ್ತದೆ ಅನಿಸುತ್ತದೆ. ಸಾಮಾನ್ಯವಾಗಿ ಈ ರಾಜಕೀಯ, ಕ್ರೀಡೆ, ಸಿನಿಮಾ ಹೀಗೆ ಸಾರ್ವಜನಿಕ ಕ್ಷೇತ್ರದಲ್ಲಿರುವವರು ಯಾವುದಾದರೊಂದು ಹೇಳಿಕೆ ನೀಡಬೇಕಾದಾಗ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ.ಏಕೆಂದರೆ ಅವರು ಆಡುವ ಮಾತುಗಳು ಸಮಾಜದ ಮೇಲೆ ಅಷ್ಟು ಗಂಭೀರ ಪರಿಣಾಮ ಬೀರುತ್ತದೆ. ಆದರೆ ಕೆಲವೊಮ್ಮೆ ಬಾಯ್ತಪ್ಪಿ ಆಡಿದ ಮಾತು ಅವರ ವ್ಯಕ್ತಿತ್ವಕ್ಕೆ ಕುಂದು ತರುವಂತಹದ್ದಾಗಿ ಬಿಡುತ್ತದೆ. ಇದೀಗ ಅಂತಹದ್ದೇ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದು ತಮಿಳು ಚಿತ್ರರಂಗದ ಸುಪ್ರಸಿದ್ದ ನಟ ಕಮಲ್ ಹಾಸನ್ ಮಗಳು ನಟಿ ಶೃತಿ ಹಾಸನ್.

ಶೃತಿ ಹಾಸನ್ ತೆಲುಗು,ತಮಿಳು ಮತ್ತು ಹಿಂದಿ ಸಿನಿಮಾಗಹಲ್ಲಿ ಬಿಗ್ ಸ್ಟಾರ್ ನಟರೊಂದಿಗೆ ನಟಿಸಿ ಅಪಾರ ಜನಪ್ರಿಯತೆ ಗಳಿಸಿದ್ದಾರೆ. ದಕ್ಷಿಣ ಭಾರತದಲ್ಲಿರುವ ಬೇಡಿಕೆಯ ನಟಿಯರ ಪೈಕಿ ನಟಿ ಶೃತಿ ಹಾಸನ್ ಕೂಡ ಮೊದಲಿನ ಸಾಲಿನಲ್ಲಿ ನಿಲ್ಲುತ್ತಾರೆ. ಶೃತಿ ಹಾಸನ್ ತನ್ನ ತಂದೆ ಕಮಲ್ ಹಾಸನ್ ಅವರ ಜೊತೆ ಉತ್ತಮ ಭಾಂಧವ್ಯ ಹೊಂದಿದ್ದಾರೆ. ಆದರೂ ಕೂಡ ಇವರಿಗೂ ಕಾಡುವ ನೋವು ಅಂದರೆ ತನ್ನ ಪೋಷಕರು ಬೇರೆ ಬೇರೆ ಆಗಿದ್ದು. ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಶೃತಿ ಹಾಸನ್ ಮಾತನಾಡುತ್ತಾ ನನ್ನ ತಂದೆ-ತಾಯಿ ತುಂಬ ಒಳ್ಳೆಯವರು. ಅವರೊಂದಿಗೆ ನಾನು ಉತ್ತಮ ಸಮಯ ಕಳೆದಿದ್ದೇನೆ.

ನಾನು ಅವರೊಂದಿಗೆ ಕಳೆದ ಸಮಯ ಅಧ್ಭುತವಾಗಿತ್ತು. ನಮ್ಮ ತಂದೆ-ತಾಯಿಗೆ ಮದುವೆಗೆ ಮುನ್ನ ತನ್ನ ತಾಯಿ ಗರ್ಭಿಣಿಯಾಗಿದ್ದರು. ಅದು ತಪ್ಪು ಎಂದು ಹೇಳಲು ಆಗುವುದಿಲ್ಲ ಎಂದು ಹೇಳಿದ್ದರು. ಹೀಗೆ ಸಂದರ್ಶನದಲ್ಲಿ ಮಾತು ಮುಂದುವರಿಸುತ್ತಾ ನಟಿ ಶೃತಿ ಹಾಸನ್ ಅವರು ನಾನು ಕೂಡ ಮದುವೆಗೆ ಮುನ್ನ ತಾಯಿ ಆಗುವ ಆಸೆ ಹೊಂದಿದ್ದೆ ಇದು ತಪ್ಪೇನಲ್ಲ ಎಂದು ಹೇಳುವ ಮೂಲಕ ವಿವಾದಕ್ಕೀಡಾದರು. ಶೃತಿ ಹಾಸನ್ ಅವರ ಈ ಒಂದು ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿತ್ತು. ಅಲ್ಲಿಯವರೆಗೆ ನಟಿ ಶೃತಿ ಹಾಸನ್ ಅವರಿಗಿದ್ದ ಫ್ಯಾನ್ ಫಾಲೋವರ್ಸ್ ಸಂಖ್ಯೆ ಈ ಹೇಳಿಕೆ ನೀಡಿದ ನಂತರದ ದಿನಗಳಲ್ಲಿ ಅವರ ಅಭಿಮಾನಿಗಳ ಸಂಖ್ಯೆ ಕೂಡ ಕಡಿಮೆ ಆಯಿತು. ಅವರ ನಟನೆಯ ಸಿನಿಮಾಗಳು ಕೂಡ ಸೋಲನ್ನು ಕಂಡವು.

Leave a Reply

%d bloggers like this: