ಮದುವೆ ಬಗ್ಗೆ ಹೀಗೆ ಪ್ರತಿಕ್ರಿಯಿಸಿದ ಬಿಗ್ ಬಾಸ್ ಸ್ಪರ್ಧಿ ಸಾನ್ಯ ಐಯ್ಯರ್ ಅವರು

ರೂಪೇಶ್ ಶೆಟ್ಟಿ ಅವರನ್ನ ಮದುವೆ ಆಗ್ತಾರಾ ಪುಟ್ಟಗೌರಿ ಖ್ಯಾತಿಯ ಸಾನ್ಯಾ ಅಯ್ಯರ್. ಈ ಬಗ್ಗೆ ಸ್ವತಃ ಸಾನ್ಯಾ ಹೀಗ್ಯಾಕೇಳಿದ್ರು. ಒಂದು ವೇಳೆ ರೂಪೇಶ್ ಶೆಟ್ಟಿ ಅವರ ಮನೆಯಿಂದ ಆಫರ್ ಬಂದ್ರೆ ಏನ್ ಮಾಡ್ತೀರಾ ಅಂದಿದ್ದಕ್ಕೆ ಸಾನ್ಯಾ ಅಯ್ಯರ್ ಕೊಟ್ಟ ಉತ್ತರ ಏನು ಅಂತ ಗೊತ್ತಾ. ಈ ಬಗ್ಗೆ ಕಂಪ್ಲೀಟ್ ಮಾಹಿತಿ ಈ ಲೇಖನದಲ್ಲಿದೆ. ಬಿಗ್ ಬಾಸ್ ಸೀಸನ್9 ಆರಂಭ ಆಗೋದಕ್ಕೂ ಮುನ್ನ ಬಿಗ್ ಬಾಸ್ ಓಟಿಟಿಯಲ್ಲಿ ಮಿನಿ ಬಿಗ್ ಬಾಸ್ ಆರಂಭವಾಗಿ ಅದರಲ್ಲಿ ಒಂದಷ್ಟು ಜನ ಇದ್ದು ರಂಜಿಸಿದ್ದರು. ಅವರಲ್ಲಿ ಪುಟ್ಟಗೌರಿ ಮದುವೆ ಧಾರಾವಾಹಿ ಖ್ಯಾತಿಯ ನಟಿ ಸಾನ್ಯಾ ಅಯ್ಯರ್ ಅವರು ಸಹ ಒಬ್ಬರು. ಅದೇ ರೀತಿಯಾಗಿ ತುಳು ಚಿತ್ರರಂಗದ ಖ್ಯಾತ ನಟ ರೂಪೇಶ್ ಶೆಟ್ಟಿ ಸಹ ಇದ್ದರು. ರೂಪೇಶ್ ಶೆಟ್ಟಿ ತಮ್ಮ ವ್ಯಕ್ತಿತ್ವ ಮತ್ತು ಉತ್ತಮವಾಗಿ ಆಟ ಆಡುವ ಮೂಲಕ ಬಿಗ್ ಬಾಸ್ ಓಟಿಟಿಯಲ್ಲಿ ಗೆದ್ದು ಬಿಗ್ ಬಾಸ್ ಸೀಸನ್ 9ಕ್ಕೆ ಗ್ರ್ಯಾಂಡ್ ಎಂಟ್ರಿ ಕೂಡಾ ಕೊಟ್ಟರು.

ಅವರ ಜೊತೆಗೆ ಸಾನ್ಯ ಅಯ್ಯರ್ ಸಹ ಬಂದ್ರು. ಓಟಿಟಿಯಲ್ಲಿ ಇದ್ದಾಗಿನಿಂದ ಒಂದೊಳ್ಳೆ ಭಾಂಧವ್ಯ ಹೊಂದಿದ್ದ ಈ ಜೋಡಿಗಳು ಬೆಸ್ಟ್ ಕ್ಯೂಟ್ ಫೇರ್ ಅಂತಾನೇ ಕರೆಸಿಕೊಳ್ಳುತ್ತಿದ್ದರು. ಅದರಂತೆ ಬಿಗ್ ಬಾಸ್ ಸೀಸನ್ 9ರಲ್ಲಿ ರೂಪೇಶ್ ಶೆಟ್ಟಿ ಮತ್ತು ಸಾನ್ಯ ಮೊದಲಿಗಿಂತ ಮತ್ತಷ್ಟು ಆಪ್ತತೆ, ಆತ್ಮೀಯತೆಯಿಂದಾಗಿ ಜೊತೆಯಾಗಿ ಆಟವಾಡ್ತಿದ್ದರು. ಸಾನ್ಯ ಅಯ್ಯರ್ ಅವರನ್ನ ತುಂಬಾ ಅಚ್ಕೊಂಡಿದ್ದ ರೂಪೇಶ್ ಶೆಟ್ಟಿ ಅವರು ದೊಡ್ಮನೆಯಲ್ಲಿ ಸಾನ್ಯ ಅವರೊಟ್ಟಿಗೆ ಒಂದು ಸ್ಪೆಷಲ್ ಎಮೋಶನ್ ಹೊಂದಿದ್ದರು. ಆದರೆ ಸಾನ್ಯ ಅಯ್ಯರ್ ಎಲಿಮಿನೇಟ್ ಆಗಿ ದೊಡ್ಮನೆಯಿಂದ ಹೊರ ಬರುವಾಗ ಅತ್ತರು. ಇದಕ್ಕೂ ಮುನ್ನ ಕೆಲವು ಬಾರಿ ಭಾವುಕರಾಗಿದ್ದು ಉಂಟು. ತದ ನಂತರ ಸಾನ್ಯ ಅಯ್ಯರ್ ಅವರು ದೊಡ್ಮನೆಯಿಂದ ಹೊರ ಬರುವಾಗ ರೂಪೇಶ್ ಶೆಟ್ಟಿ ನೀನು ಪ್ರತಿವಾರ ನನಗೆ ಕೆಂಪು ಬಣ್ಣದ ಟೀ ಶರ್ಟ್ ಕಳುಹಿಸಬೇಕು. ಅದರಲ್ಲಿ ತುಂಬು ಪ್ರೀತಿ ಇರ್ಬೆಕು ಅಂತ ಆಣೆ ಮಾಡಿಸಿಕೊಂಡಿದ್ದರು. ಸದ್ಯಕ್ಕೆ ದೊಡ್ಮನೆಯಲ್ಲಿ ರೂಪೇಶ್ ಶೆಟ್ಟಿ ತುಂಬಾ ಚೆನ್ನಾಗಿಯೇ ಆಟ ಆಡುತ್ತಿದ್ದಾರೆ.

ಇತ್ತ ದೊಡ್ಮನೆಯಿಂದ ಹೊರ ಬಂದಿರೋ ನಟಿ ಸಾನ್ಯಾ ಅವರು ತಮ್ಮ ಕನಸಿನಂತೆ ಸಿನಿಮಾಗಳಲ್ಲಿ ಅವಕಾಶ ಪಡೆದುಕೊಂಡು ಒಂದಷ್ಟು ಸಿನಿಮಾಗಳಿಗೆ ಸಹಿ ಮಾಡಿದ್ದಾರಂತೆ. ಇದರ ನಡುವೆ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ತಮ್ಮ ಮತ್ತು ರೂಪೇಶ್ ಶೆಟ್ಟಿ ಅವರ ನಡುವಿನ ಸಂಬಂಧ ಮತ್ತು ತಮ್ಮ ಮದುವೆಯ ಬಗ್ಗೆ ಒಂದಷ್ಟು ಮಾತುಗಳನ್ನಾಡಿದ್ದಾರೆ. ನನಗೆ ಹೀರೋಯಿನ್ ಆಗಬೇಕು ಅನ್ನೋದು ಗುರಿ. ಇನ್ನೂ ಐದು ವರ್ಷಗಳಲ್ಲಿ ನನ್ನ ಗುರಿಯನ್ನ ನಾನು ತಲುಪಬೇಕು. ನನಗೆ ಸದ್ಯಕ್ಕೆ ಮದುವೆಯ ಬಗ್ಗೆ ಅಷ್ಟಾಗಿ ಆಸಕ್ತಿ ಇಲ್ಲ. ಹಾಗಂತ ನಾನು ರೂಪೇಶ್ ಶೆಟ್ಟಿ ಅವರೊಂದಿಗಿನ ಒಡನಾಟ ಸ್ನೇಹ ಬಿಡುವುದಿಲ್ಲ. ಅವರ ಜೊತೆ ಸಂಪರ್ಕದಲ್ಲಿ ಇರುತ್ತೇನೆ. ಮುಂದಿನ ದಿನಗಳಲ್ಲಿ ನಮ್ಮಿಬ್ಫರ ಭಾಂಧವ್ಯ ಹೇಗೆ ಆಗುತ್ತದೆ ಅನ್ನೋದು ನನಗೆ ಗೊತ್ತಿಲ್ಲ. ರೂಪೇಶ್ ಶೆಟ್ಟಿ ಬಿಗ್ ಬಾಸ್ ಮನೆಯಲ್ಲಿ ನನಗಾಗಿ ಆಟ ಆಡ್ತಿದ್ದೀನಿ ಎಂದು ಹೇಳಿದ್ದರು. ಅವರು ಸದ್ಯಕ್ಕೆ ಗೇಮ್ ನಲ್ಲಿ ಸ್ಮಾರ್ಟ್ ಆಗಿ ಆಟ ಆಡುತ್ತಿದ್ದು , ಅವರ ಹೊರ ಬಂದ ಬಳಿಕ ನಮ್ಮಿಬ್ಬರ ಸ್ನೇಹ ಮುಂದುವರಿಯುತ್ತದೆ. ಒಂದು ವೇಳೆ ಸಿನಿಮಾಗಳಲ್ಲಿ ನಮ್ಮಿಬ್ಬರಿಗೆ ಅವಕಾಶ ಸಿಕ್ಕರೆ ಒಟ್ಟಿಗೇ ನಟಿಸುತ್ತೇವೆ ಎಂದು ಸಾನ್ಯ ಅಯ್ಯರ್ ಅವರು ತಮ್ಮ ಮನದಾಳದ ಮಾತುಗಳನ್ನು ತಿಳಿಸಿದ್ದಾರೆ.

Leave a Reply

%d bloggers like this: