‘ಮಾಯಗಂಗೆ’ ಮೂಲಕ ಎಲ್ಲರ ಮನಸ್ಸು ಗೆದ್ದಿದ್ದ ಜಮೀರ್ ಖಾನ್ ಅವರ ಪುತ್ರನಿಂತ ಹೊಸ ಟ್ರೋಲ್

ಮಾಯಗಂಗೆ ಹಾಡಿನ ಮೂಲಕ ಸಖತ್ ಸೌಂಡ್ ಮಾಡಿದ್ದ ಬನಾರಸ್ ಸಿನಿಮಾ. ಇದೀಗ ಮತ್ತೊಂದು ಹಾಡಿನ ಮೂಲಕ ಸಖತ್ ಟ್ರೋಲ್ ಆಗ್ತಿದೆ. ಈ ಸಾಂಗ್ ಟೈಟಲ್ ಲಿರಿಕಲ್ಲೇ ಟ್ರೋಲು ಎಲ್ಲಾ ಟ್ರೋಲು, ಸಿಕ್ಕಾಪಟ್ಟೆ ಕೊಲೆಸ್ಟ್ರಾಲು. ಈ ಸಾಲುಗಳು ಯುವ ಪೀಳಿಗೆಯವರಿಗೆ ಸಖತ್ ಇಷ್ಟ ಆಗಿದೆ. ಟ್ರೋಲು ಟ್ರೋಲು ಲಿರಿಕ್ಸ್ ಸಖತ್ ಕ್ಯಾಚಿಯಾಗಿದ್ದು, ಯುಟ್ಯೂಬ್ ನಲ್ಲಿ ದಾಖಲೆಯ ವೀಕ್ಷಣೆ ಪಡೆಯುತ್ತಿದ್ದು, ಟ್ರೆಂಡಿಂಗ್ ನಲ್ಲಿದೆ. ಈ ಬನರಾಸ್ ಸಿನಿಮಾ ಇದೇ ನವೆಂಬರ್ 4ರಂದು ಅದ್ದೂರಿಯಾಗಿ ದೇಶಾದ್ಯಂತ ಬಿಡುಗಡೆ ಆಗುತ್ತಿದೆ. ಬನಾರಸ್ ಸಿನಿಮಾ ಪ್ಯೂರ್ ಲವ್ ಸ್ಟೋರಿ ಎಂಬಂತೆ ಕಾಣ್ತಿದೆ. ಅದಕ್ಕೆ ಒಂದು ಸಣ್ಣ ನಿದರ್ಶನ ಅಂದ್ರೆ ಮಾಯಗಂಗೆ ಎಂಬ ಮೆಲೋಡಿ ಸಾಂಗ್. ಈ ಬನರಾಸ್ ಚಿತ್ರಕ್ಕೆ ಮ್ಯೂಸಿಕ್ ಮಾಡಿರೋದು ಅಜನೀಶ್ ಲೋಕನೋಥ್.

ಅಜನೀಶ್ ಲೋಕನಾಥ್ ಅವರ ರಾಗ ಸಂಯೋಜನೆಗೆ ಡಾವಿ ನಾಗೇಂದ್ರ ಪ್ರಸಾದ್ ಅವರು ಸಾಹಿತ್ಯ ರಚನೆ ಮಾಡಿದ್ದಾರೆ. ನಾಗೇಂದ್ರ ಪ್ರಸಾದ್ ಬರೆದಿರೋ ಈ ಟ್ರೋಲು ಟ್ರೋಲು ಕೊಲೆಸ್ಟ್ರಾಲು ಹಾಡಿಗೆ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರೇ ದನಿಯಾಗಿದ್ದಾರೆ. ಶಾಸಕ ಜಮೀರ್ ಅಹ್ಮದ್ ಖಾನ್ ಅವರ ಪುತ್ರ ಝೈದ್ ಖಾನ್ ಅವರ ಚೊಚ್ಚಲ ಸಿನಿಮಾ ಈ ಬನಾರಸ್. ಈ ಬನಾರಸ್ ಸಿನಿಮಾಗೆ ಆಕ್ಷನ್ ಕಟ್ ಹೇಳಿರೋದು ಬೇರಾರು ಅಲ್ಲ. ಒಲವೇ ಮಂದಾರ, ಟೋನಿ, ಬ್ಯುಟಿಫುಲ್ ಮನಸುಗಳು ಅಂತಹ ಸೂಪರ್ ಹಿಟ್ ಚಿತ್ರ ನೀಡಿರುವ ಖ್ಯಾತ ನಿರ್ದೇಶಕ ಜಯತೀರ್ಥ. ತಿಲಕ್ ರಾಜ್ ಬಲ್ಲಾಳ್ ಎಂಬುವವರು ಬನಾರಸ್ ಸಿನಿಮಾವನ್ನು ಬಹಳ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ.

ಝೈದ್ ಖಾನ್ ಅವರಿಗೆ ಜೋಡಿಯಾಗಿ ಸಯೋನ್ ರೋನ್ ಅವರು ನಟಿಸಿದ್ದು ಪ್ರಮುಖ ಪಾತ್ರಗಳಲ್ಲಿ ಹಿರಿಯ ನಟ ದೇವರಾಜ್, ಸುಜಯ್ ಶಾಸ್ತ್ರಿ, ಅಚ್ಯುತ್ ಕುಮಾರ್, ಸ್ವಪ್ನಾ ಸೇರಿದಂತೆ ಮುಂತಾದ ಕಲಾವಿದರು ನಟಿಸಿದ್ದಾರೆ. ಚೊಚ್ಚಲ ಬಾರಿಗೆ ನಟಿಸಿರೋ ಸಿನಿಮಾನೇ ಪ್ಯಾನ್ ಇಂಡಿಯಾ ಆಗಿ ಪಂಚ ಭಾಷೆಗಳಲ್ಲಿ ರಿಲೀಸ್ ಆಗುತ್ತಿರೊದು ಝೈದ್ ಖಾನ್ ಅವರಿಗೆ ಸಖತ್ ಖುಷಿಯ ಜೊತೆಗೆ ಎಕ್ಸೈಟ್ ಕೂಡ ನೀಡುತ್ತಿದೆ. ಬನಾರಸ್ ಸಿನಿಮಾದಲ್ಲಿ ಝೈದ್ ಖಾನ್ ಅವರು ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದು, ಚಂದನವನಕ್ಕೆ ಒಬ್ಬ ಭರವಸೆಯ ನಟ ಸಿಕ್ಕಿದ್ದಾರೆ ಅಂತಾನೇ ಹೇಳಲಾಗ್ತಿದೆ. ಮಾಯಾಗಂಗೆ ಎಂಬ ಮನಮೋಹಕ ಹಾಡಿನ ಮೂಲಕ ಸದ್ದು ಮಾಡಿದ್ದ ಬನಾರಸ್ ಸಿನಿಮಾ ಇದೀಗ ಟ್ರೋಲು ಟ್ರೋಲು ಕೊಲೆಸ್ಟ್ರಾಲು ಹಾಡಿನ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಸೌಂಡ್ ಮಾಡ್ತಿದೆ.