ಲಕ್ಕಿಮ್ಯಾನ್ ಚಿತ್ರದಲ್ಲಿ ಅಪ್ಪು ಕೂತಿರುವ ಛೇರ್ ನನಗೆ ಕೊಟ್ಟು ಬಿಡಿ, ಪ್ರತಿದಿನ ಪೂಜಿಸ್ತೀನಿ, ರಾಘವೇಂದ್ರ ರಾಜಕುಮಾರ್

ನನಗೆ ಅಪ್ಪು ಕೂತಿದ್ದ ಆ ಛೇರ್ ಕೊಟ್ಬಿಡಿ, ನಾನು ಜೀವ ಇರೋವರ್ಗೂ ಅದನ್ನ ಪೂಜೆ ಮಾಡ್ತೀನಿ ಎಂದು ಭಾವುಕ ನುಡಿಗಳನ್ನ ನುಡಿದಿದ್ದಾರೆ ನಟ ರಾಘವೇಂದ್ರ ರಾಜ್ ಕುಮಾರ್. ನಿನ್ನೆ ರಿಲೀಸ್ ಆದ ಲಕ್ಕಿ ಮ್ಯಾನ್ ಸಿನಿಮಾ ನೋಡಲು ರಾಘವೇಂದ್ರ ರಾಜ್ ಕುಮಾರ್ ಅವರು ತಮ್ಮ ಕುಟುಂಬ ಸಮೇತ ಬೆಂಗಳೂರಿನ ನರ್ತಕಿ ಥಿಯೇಟರ್ ಗೆ ಆಗಮಸಿದ್ರು. ಲಕ್ಕಿ ಮ್ಯಾನ್ ಸಿನಿಮಾ ಡಾರ್ಲಿಂಗ್ ಕೃಷ್ಣ ಮತ್ತು ಸಂಗೀತಾ ಶೃಂಗೇರಿ ಮುಖ್ಯ ಭೂಮಿಕೆಯ ಸಿನಿಮಾ. ಈ ಲಕ್ಕಿ ಮ್ಯಾನ್ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರು ಕೂಡ ನಟಿಸಿದ್ದಾರೆ. ಇದರಲ್ಲಿ ಅಪ್ಪು ಅವರು ದೇವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಘಣ್ಣ ಅವರು ಮೊದಲಿಂದಾನೂ ಅಪ್ಪು ಅವರ ಎಲ್ಲಾ ಸಿನಿಮಾಗಳನ್ನ ಥಿಯೇಟರ್ ನಲ್ಲಿ ನೋಡಿಕೊಂಡು ಬಂದಿದ್ದಾರೆ. ಅದೇ ರೀತಿಯಾಗಿ ಅಪ್ಪು ಅವರು ನಟಿಸಿರೋ ಲಕ್ಕಿ ಮ್ಯಾನ್ ಸಿನಿಮಾ ನೋಡಲು ತಮ್ಮ ಪತ್ನಿ ಮಂಗಳಾ, ಮಗ ನಟ ಯುವ ರಾಜ್ ಕುಮಾರ್, ಸೊಸೆ ಶ್ರೀ ದೇವಿ ಅವರೊಟ್ಟಿಗೆ ಕೂತು ಸಿನಿಮಾ ನೋಡಿದ್ದಾರೆ.

ಥಿಯೇಟರ್ ನಲ್ಲಿ ಅಪ್ಪು ಬರ್ತಿದ್ದಂತೆ ಶಿಳ್ಳೆ ಹೊಡೆದು ತುಂಬಾ ಸಂತೋಷ ಪಟ್ಟ ರಾಘಣ್ಣ ಸಿನಿಮಾ ನೋಡಿದ ನಂತರ ಕೊಂಚ ಭಾವುಕರಾಗಿ ಮಾತನಾಡಿದರು. ನನ್ನ ತಮ್ಮ ಅಪ್ಪು ದೊಡ್ಮನೆಯನ್ನ ದೇವರ ಮನೆಯನ್ನಾಗಿ ಮಾಡಿದ. ಪ್ರತಿ ಬಾರಿ ತನ್ನ ಸಿನಿಮಾಗಳು ರಿಲೀಸ್ ಆದಾಗ ಕರೆದುಕೊಂಡು ಬರುತ್ತಿದ್ದ. ಅದೇ ರೀತಿಯಾಗಿ ಈಗ ತನ್ನ ಸಿನಿಮಾ ನೋಡಲು ಕರೆಸಿಕೊಂಡಿದ್ದಾನೆ. ನನಗೆ ಅವನು ಮಗುವಾಗಿದ್ದ. ನನ್ನ ಕಾಲಿಗೆ ನಮಸ್ಕಾರ ಮಾಡ್ತಿದ್ದ. ಇದೊಂದು ಉತ್ತಮ ಸಿನಿಮಾ. ಇದು ನನ್ನ ತಮ್ಮನ ಸಿನಿಮಾ ಅನ್ನೋದಕ್ಕಿಂತ ಒಂದು ಒಳ್ಳೆಯ ಸಿನಿಮಾದಲ್ಲಿ ದೇವರಾಗಿ ನಟಿಸಿದ್ದಾನೆ. ಈಗ ನಿಜವಾಗಲು ಅವನು ದೇವರಾಗಿದ್ದಾನೆ. ನಾವೆಲ್ಲಾ ಅಪ್ಪುನನ್ನ ಪ್ರೀತಿಸೋದಕ್ಕಿಂತ ಪೂಜಿಸಬೇಕು ಎಂದು ರಾಘಣ್ಣ ಅವರು ಲಕ್ಕಿ ಮ್ಯಾನ್ ಸಿನಿಮಾದಲ್ಲಿ ಅಪ್ಪು ಅವರನ್ನ ಕಂಡು ಭಾವುಕರಾಗಿ ಮಾತನಾಡಿದರು.

ಜೊತೆಗೆ ಲಕ್ಕಿ ಮ್ಯಾನ್ ಸಿನಿಮಾದಲ್ಲಿ ಅಪ್ಪು ಅವರು ಒಂದು ಛೇರ್ ಮೇಲೆ ಕೂತು ನಟಿಸಿರೋ ದೃಶ್ಯವಿದೆ. ಈ ದೃಶ್ಯ ಅಪ್ಪು ಅವರಿಗೆ ತುಂಬಾನೇ ಕಾಡಿದೆ ಎಂದು ಹೇಳ್ಭೋದು. ಹಾಗಾಗಿಯೇ ರಾಘಣ್ಣ ಅವರು ಅಪ್ಪು ಕೂತಿದ್ದ ಆ ಛೇರ್ ಅನ್ನ ನನಗೆ ಕೊಟ್ಬಿಡಿ. ಅದನ್ನ ನಾನು ಪೂಜಿಸುತ್ತೇನೆ ಎಂದು ನುಡಿದರು. ಚಿತ್ರತಂಡ ರಾಘಣ್ಣನವರ ಆಸೆಯನ್ನ ಈಡೇರಿಸುತ್ತಾರಾ ಅನ್ನೋದನ್ನ ಕಾದು ನೋಡಬೇಕು. ಇನ್ನು ಈ ಲಕ್ಕಿ ಮ್ಯಾನ್ ಸಿನಿಮಾವನ್ನ ಪ್ರಭುದೇವ ಅವರ ಸೋದರ ನಾಗೇಂದ್ರ ಪ್ರಸಾದ್ ನಿರ್ದೇಶನ ಮಾಡಿದ್ದರು. ಲಕ್ಕಿ ಮ್ಯಾನ್ ಸಿನಿಮಾ ನೋಡಿದ ಸಿನಿ ಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಅಪ್ಪು ಅವರನ್ನ ಕಣ್ತುಂಬಿಕೊಂಡ ಅಭಿಮಾನಿಗಳು ಕಣ್ಣೀರಾಕುತ್ತಲೇ ಹೊರ ಬಂದದ್ದು ನಿಜಕ್ಕೂ ಕೂಡ ಎಲ್ಲರ ಮನಸ್ಸಿಗೆ ತುಂಬಾನೇ ನೋವುಂಟು ಮಾಡಿತು.

Leave a Reply

%d bloggers like this: