ಲೋಕ ಕಲ್ಯಾಣಕ್ಕಾಗಿ ಪರಮೇಶ್ವರ ಎತ್ತಿದ 19 ಅವತಾರಗಳು ಯಾವುವು ಗೊತ್ತಾ? ಇಂದಿಗೂ 99% ಜನರಿಗೆ ಗೊತ್ತೇ ಇಲ್ಲ

ಭಾರತದಲ್ಲಿ ಅನೇಕ ಧಾರ್ಮಿಕ ನಂಬಿಕೆಗಳಿವೆ. ಇಲ್ಲಿ ವಿವಿಧ ರೀತಿಯ ಆಚರಣೆ ಸಂಪ್ರದಾಯ ಸಂಸ್ಕೃತಿಗಳಿವೆ. ಅದರಂತೆ ಅವುಗಳನ್ನ ಪಾಲಿಸುವುದರಲ್ಲಿ ಒಂದಷ್ಟು ಜನ ನಕರಾತ್ಮಕವಾಗಿ ಇದ್ದರು ಕೂಡ ಬಹು ಸಂಖ್ಯೆಯಲ್ಲಿ ಭಾರತೀಯರು ಧಾರ್ಮಿಕ ನಂಬಿಕೆಗಳನ್ನ ಪಾಲಿಸಿಕೊಂಡು ಬರುತ್ತಿದ್ದಾರೆ. ಧಾರ್ಮಿಕ ಪುರಾಣಗಳಲ್ಲಿ ಜಗತ್ತಿನಲ್ಲಿ ಅಪಾಯ ಎದುರಾದಾಗ ಸಾಕ್ಷಾತ್ ಭಗವಂತನೇ ವಿವಿಧ ರೀತಿಯ ರೂಪ ತಾಳಿ ಮನುಕುಲವನ್ನು ರಕ್ಷಣೆ ಮಾಡತ್ತಾನೆ ಎಂದು ಹೇಳುತ್ತಾರೆ. ಅದರಂತೆ ಪರ್ವತ ರಾಜನ ಮಗಳು ಪಾರ್ವತಿಯು ಶಿವನನ್ನು ಪ್ರೀತಿಸುತ್ತಿರುತ್ತಾಳೆ. ಆದರೆ ಪರ್ವತರಾಜ ತನ್ನ ಮಗಳು ಪಾರ್ವತಿ ಸ್ಮಶಾನವಾಸಿ ಚಿತಾ‌ಭಸ್ಮಲೇಪಿತ ಶಿವನನ್ನ ಇಷ್ಟ ಪಡುತ್ತಿರುವುದು ಇಷ್ಟವಾಗುವುದಿಲ್ಲ. ಆದರೆ ತನ್ನ ತಂದೆಯ ವಿರೋಧದ ನಡುವೆ ಕೂಡ ಪಾರ್ವತಿ ಶಿವ ತನ್ನ ಬಾಳ ಸಂಗಾತಿಯಾಗಿ ಬರಬೇಕು ಎಂದು ತಪಸ್ಸು ಮಾಡುತ್ತಾಳೆ.

ಪಾರ್ವತಿಯ ತಪಸ್ಸು ಪರೀಕ್ಷೆ ಮಾಡಲು ಸಾಕ್ಷಾತ್ ಈಶ್ವರ ಬ್ರಹ್ಮಚಾರಿ ವೇಷದಲ್ಲಿ ಬಂದು ಪಾರ್ವತಿ ದೇವಿಯನ್ನು ಪರೀಕ್ಷೆ ಮಾಡುತ್ತಾನೆ. ಅದರಂತೆ ಲೋಕೋದ್ದಾರಕ್ಕಾಗಿ ಪರಮೇಶ್ವರನ ಬರೋಬ್ಬರಿ ಹತ್ತೊಂಬತ್ತು ರೂಪ ತಾಳಿದ್ದಾನೆ ಎಂದು ತಿಳಿಸಲಾಗಿದೆ. ಅದರಲ್ಲಿ ಕೆಲವು ಅವತಾರಗಳನ್ನು ತಿಳಿಯೋಣ. ಶಿವನು ದದೀಚಿ ಎಂಬ ಋಷಿ ಮುನಿಯ ಆಶ್ರಮದಲ್ಲಿ ಪಿಪ್ಲಾದನಾಗಿ ಹುಟ್ಟುತ್ತಾನೆ. ಶಿವನ ಇಲ್ಲಿ ಜನನವಾದ ಬಳಿಕ ದದೀಚಿ ಋಷಿಮುನಿ ಇದ್ದಕಿದ್ದಂತೆ ಮನೆ ಬಿಟ್ಟು ಹೊರ ಹೋಗುತ್ತಾನೆ. ಪಿಪ್ಲಾದ ತನ್ನ ತಂದೆ ದದೀಚೆ ಮನೆ ಬಿಟ್ಟು ಹೋಗಲು ಶನಿ ಗ್ರಹ ಕಾರಣ ಎಂಬುದನ್ನು ತಿಳಿದು ಕೊಳ್ಳುತ್ತಾನೆ.

ಆಗ ಶಿವನು ಶನಿ ಗ್ರಹಕ್ಕೆ ಹದಿನಾರು ವರ್ಷಗಳ ಮುಂಚಿತವಾಗಿ ಯಾರಿಗೂ ಯಾವುದೇ ರೀತಿಯ ತೊಂದರೆಯನ್ನು ಉಂಟು ಮಾಡಬಾರದು ಎಂಬ ಷರತ್ತಿನ ಮೇಲೆ ಶನಿಗ್ರಹವನ್ನು ಕ್ಷಮಿಸುತ್ತಾನೆ. ಇದರಿಂದ ಪಿಪ್ಲಾದ ಅವತಾರ ಹೊಂದಿರುವ ಶಿವನನ್ನು ಆರಾಧನೆ ಮಾಡುವುದರಿಂದ ಶನಿ ದೋಷ ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ. ನಂದಿ ಅವತಾರ ಶಿವನ ವಾಹನ ನಂದಿಯನ್ನು ಕೂಡ ದೇವರಂತೆಯೇ ಪೂಜಿಸಲಾಗುತ್ತದೆ. ಗೋವುಗಳ ರಕ್ಷಣೆಗಾಗಿ ರೂಪವಾಗಿ ನಂದಿಶಿವನ ಶಿವನು ನಂದಿಯ ರೂಪದಲ್ಲಿ ಕಾಣಿಸಿಕೊಳ್ಳುತ್ತಾನೆ. ಇಂದು ಭಾರತದ ಬಹುತೇಕ ಎಲ್ಲಾ ಶಿವನ ದೇವಾಲಯಗಳಲ್ಲಿ ನಂದಿಯ ವಿಗ್ರಹ ಇದ್ದೇ ಇರುತ್ತದೆ.

ಶಿವನು ತನ್ನ ಪತ್ನಿ ದಾಕ್ಷಾಯಿಣಿ ದಕ್ಷಯಜ್ಞದಲ್ಲಿ ಅಗ್ನಿಗೆ ಹಾರಿ ದಹಿಸಿದಾಗ ಶಿವನು ಕೋಪೋದ್ರಿಕ್ತನಾಗಿ ಭೂಮಿಗೆ ಶಿವನು ತನ್ನ ತಲೆ ಕೂದಲಿನ ಒಂದು ಎಳೆಯನ್ನು ಕಿತ್ತು ಬಿಸಾಡುತ್ತಾನೆ. ಇದರ ಪರಿಣಾಮ ವೀರಭದ್ರ ಮತ್ತು ರುದ್ರಕಾಳಿ ರೂಪದಲ್ಲಿ ಭೂ ಮಂಡಲದಲ್ಲಿ ಶಿವನು ಪ್ರತ್ಯಕ್ಷ ಗೊಳ್ಳುತ್ತಾನೆ. ಇನ್ನು ವಿಷ್ಣು ಮತ್ತು ಬ್ರಹ್ಮ ದೇವರುಗಳು ತಮ್ಮಿಬ್ಬರಲ್ಲಿ ಯಾರು ಶ್ರೇಷ್ಠರು ಎಂಬ ಚರ್ಚೆಯಲ್ಲಿ ತೊಡಗಿರುವಾಗ ಶಿವನು ಆ ಸಂಧರ್ಭದಲ್ಲಿ ಪ್ರವೇಶ ಪಡೆಯುತ್ತಾರೆ. ಈ ಸಂಧರ್ಭದಲ್ಲಿ ಬ್ರಹ್ಮನ ವಿರುದ್ದ ಕೋಪಗೊಂಡು ಬ್ರಹ್ಮನ ಐದನೇ ತಲೆಯನ್ನು ಕತ್ತರಿಸಿ ಬಿಡುತ್ತಾನೆ. ಈ ಬ್ರಹ್ಮಹತ್ಯೆದ ದೋಷದಿಂದಾಗಿ ಶಿವನು ಬರೋಬ್ಬರಿ ಹನ್ನೆರಡು ವರ್ಷಗಳ ಕಾಲ ಕಪಾಲನ್ನು ಹಿಡಿದುಕೊಂಡು ಭಿಕ್ಷೆ ಬೇಡುವ ಶಿಕ್ಷೆ ಎದುರಾಗುತ್ತದೆ.

ಅರ್ಧ ಮುಖ ಸಿಂಹದ ಅವತಾರ ಮತ್ತು ಇನ್ನರ್ಧ ಮುಖ ಪಕ್ಷಿಯ ಅವತಾರ ತಾಳಿರುವ ಶಿವನನ್ನು ಶರಭ ಎಂದು ಕರೆಯಲಾಗುತ್ತದೆ. ಶಿವನು ಈ ಅವತಾರ ತಾಳಲು ಪ್ರಮುಖ ಕಾರಣ ಅಂದರೆ ವಿಷ್ಣು ದೇವರು ನರಸಿಂಹನ ಅವತಾರ ತಾಳಿ ಉದ್ರಿಕ್ತನಾಗಿದ್ದಾಗ ವಿಷ್ಣುವನ್ನು ಸಮಾಧಾನಗೊಳಿಸಲು ಶಿವನು ಶರಭ ಅವತಾರ ತಾಳುತ್ತಾನಂತೆ. ಒಟ್ಟಾರೆಯಾಗಿ ಶಿವನು ಜಗೋದ್ದಾರಕ್ಕಾಗಿ ಹತ್ತು ಹಲವು ರೂಪತಾಳಿ ಸದಾ ಮನುಕುಲವನ್ನು ರಕ್ಷಣೆ ಮಾಡುತ್ತಾನೆ ಎಂದು ಪುರಾಣದಲ್ಲಿ ಹೇಳಲಾಗಿದೆ.

Leave a Reply

%d bloggers like this: