ಲೈಗರ್ ಸೋಲಿನಿಂದ ನಿರ್ಮಾಪಕರಿಗೆ ನಷ್ಟ, ನಟ ವಿಜಯ್ ದೇವರಕೊಂಡ ನಿರ್ಮಾಪಕರಿಗೆ ಎಷ್ಟು ಹಣ ವಾಪಸ್ ನೀಡಿದ್ದಾರೆ ಗೊತ್ತಾ

ಟಾಲಿವುಡ್ ನಲ್ಲಿ ಅಭಿಮಾನಿಗಳಿಂದ ರೌಡಿ ಅಂತಾನೇ ಕರೆಸಿಕೊಳ್ಳೋ ಸ್ಟಾರ್ ನಟ ವಿಜಯ್ ದೇವರಕೊಂಡ ಅವರು ತಮ್ಮ ಚೊಚ್ಚಲ ಪ್ಯಾನ್ ಇಂಡಿಯಾ ಸಿನಿಮಾ ಲೈಗರ್ ಸೋಲಿನ ನೈತಿಕ ಹೊಣೆಯನ್ನ ತಾವೇ ಹೊತ್ತಿಕೊಂಡಿದ್ದಾರೆ. ಹಾಗಾಗಿ ತಾವು ಪಡೆದಿದ್ದ ಸಂಭಾವನೆಯನ್ನ ನಿರ್ಮಾಪಕರಿಗೆ ಹಿಂದಿರುಗಿಸಿದ್ದಾರಂತೆ. ವಿಜಯ್ ದೇವರಕೊಂಡ ಅವರು ತಾವು ಪಡೆದಿರೋ ಸಂಪೂರ್ಣ ಸಂಭಾವನೆಯನ್ನ ವಾಪಸ್ ನೀಡುತ್ತೇನೆ ಎಂದು ಹೇಳಿದ್ರು. ಆದ್ರೇ ವಿಜಯ್ ದೇವರಕೊಂಡ ನಿರ್ಮಾಪಕರಿಗೆ ರಿಟರ್ನ್ ಕೊಟ್ಟಿರೋದು ಎಷ್ಟು ಹಣ ಎಂಬ ಸ್ಪಷ್ಟ ಮಾಹಿತಿ ಇದೀಗ ಸಿಕ್ಕಿದೆ. ಪುರಿ ಜಗನ್ನಾಥ್ ಮತ್ತು ವಿಜಯ್ ದೇವರಕೊಂಡ ಕಾಂಬಿನೇಶನ್ ನಲ್ಲಿ ಮೂಡಿ ಬಂದ ಪ್ಯಾನ್ ಇಂಡಿಯಾ ಲೈಗರ್ ಸಿನಿಮಾ ಕಳೆದ ತಿಂಗಳು ಆಗಸ್ಟ್ 25ರಂದು ದೇಶಾದ್ಯಂತ ಅದ್ದೂರಿಯಾಗಿ ರೀಲಿಸ್ ಆಗಿದೆ.

ಟ್ರೇಲರ್ ಮೂಲಕ ಭಾರಿ ನಿರೀಕ್ಷೆ ಹುಟ್ಟು ಹಾಕಿದ್ದ ಲೈಗರ್ ಚಿತ್ರ ಬಿಡುಗಡೆಯಾದ ಒಂದೇ ದಿನಕ್ಕೆ ಬರೋಬ್ಬರಿ ಮೂವತ್ತು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಆದರೆ ಪ್ರೇಕ್ಷಕರು ಲೈಗರ್ ಚಿತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಚಿತ್ರದ ಕಥೆ ಗಟ್ಟಿ ಇಲ್ಲ, ನಾಯಕಿ ಬಾಲಿವುಡ್ ನಟಿ ಅನನ್ಯಾ ಪಾಂಡೆ ಅವರ ನಟನೆ ಚೆನ್ನಾಗಿಲ್ಲ ಎಂಬ ಮಾತುಗಳು ಕೇಳಿ ಬಂದವು. ಅದಕ್ಕಿಂತ ಹೆಚ್ಚಾಗಿ ಲೈಗರ್ ಸಿನಿಮಾ ಪುರಿ ಜಗನ್ನಾಥ್ ಸ್ಟೈಲ್ ಸಿನಿಮಾ ಅಲ್ಲ ಎಂಬ ಅಂಶ ಕೂಡ ಇದರಲ್ಲಿ ಕೇಳಿ ಬಂತು. ಈ ಚಿತ್ರಕ್ಕೆ ನಿರ್ದೇಶನದ ಜೊತೆಗೆ ಪುರಿ ಜಗನ್ನಾಥ್ ಅವರು ನಟಿ ಚಾರ್ಮಿ ಅವರನ್ನು ಸೇರಿದಂತೆ ಬಂಡವಾಳ ಹೂಡಿಕೆ ಮಾಡಿದ್ದರು.

ಸರಿ ಸುಮಾರು ತೊಂಭತ್ತು ಕೋಟಿಗೂ ಅಧಿಕ ವೆಚ್ಚದಲ್ಲಿ ತಯಾರಾಗಿದ್ದ ಲೈಗರ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಲು ಸೋತಿತು. ಈ ಚಿತ್ರದಲ್ಲಿ ನಟಿಸಲು ವಿಜಯ್ ದೇವರಕೊಂಡ ಬರೋಬ್ಬರಿ 25 ಕೋಟಿ ಸಂಭಾವನೆ ಪಡೆದಿದ್ದರು ಎಂದು ಹೇಳಲಾಗಿತ್ತು. ಆದರೆ ಲೈಗರ್ ಸಿನಿಮಾ ಫ್ಲಾಪ್ ಆದ ಕಾರಣ ನಟ ವಿಜಯ್ ದೇವರಕೊಂಡ ಚಿತ್ರದ ಸೋಲಿಗೆ ನೈತಿಕ ಹೊಣೆ ಹೊತ್ತು ನಿರ್ಮಾಪಕರಿಗೆ ತಾವು ಪಡೆದ ಸಂಭಾವನೆಯಲ್ಲಿ ಆರು ಕೋಟಿಯನ್ನ ಹಿಂದಿರುಗಿಸಿದ್ದಾರಂತೆ. ಆದರೆ ಇತ್ತೀಚೆಗೆ ಕೇಳಿ ಬಂದ ವಿಚಾರ ಅಂದ್ರೆ ಲೈಗರ್ ಸಿನಿಮಾ ಓಟಿಟಿ ಪ್ಲಾಟ್ ಫಾರ್ಮ್ ಸಂಸ್ಥೆಗೆ ಭರ್ಜರಿ ಮೊತ್ತಕ್ಕೆ ಮಾರಾಟ ಆಗಿರೋದ್ರಿಂದ ನಿರ್ಮಾಪಕರಿಗೆ ಯಾವುದೇ ರೀತಿ ನಷ್ಟ ಆಗಿಲ್ಲ ಎಂಬ ಮಾತುಗಳು ಕೂಡ ಕೇಳಿ ಬರ್ತಿವೆ.

Leave a Reply

%d bloggers like this: