ಲೈಗರ್ ಚಿತ್ರತಂಡ ಎಡವಿದ್ದು ಇಲ್ಲೇ, ಸಣ್ಣ ಪಾತ್ರಕ್ಕಾಗಿ ಮೈಕ್ ಟೈಸನ್ ಅವರಿಗೆ ಇಷ್ಟೊಂದು ದೊಡ್ಡ ಮೊತ್ತದ ಸಂಭಾವನೆ ಕೊಟ್ಟದ್ದು

ಕಳೆದ ವಾರ ಅಭಿಮಾನಿಗಳಿಗೆ ಭಾರಿ ನಿರಾಶೆ ಮೂಡಿಸಿದ್ದ ಲೈಗರ್ ಚಿತ್ರ ಇಲ್ಲಿ ಎಡವಿದೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ಮೈಕ್ ಟೈಸನ್ ಅವರು ಪಡೆದ ಸಂಭಾವನೆ ಎಷ್ಟು ಗೊತ್ತಾ, ಅವರ ಸಂಭಾವನೆಯೇ ಇಡೀ ಚಿತ್ರದ ಬಜೆಟ್ ಶೇಕಡ 25ರಷ್ಟಂತೆ. ಈ ಸುದ್ದಿ ಇದೀಗ ಟಾಲಿವುಡ್ ನಲ್ಲಿ ಸಖತ್ ಟಾಕ್ ಆಗಿದೆ. ಹೌದು ಇತ್ತೀಚೆಗೆ ತಾನೇ ಪುರಿ ಜಗನ್ನಾಥ್ ಅವರ ಸಹ ನಿರ್ಮಾಣದ ಜೊತೆಗೆ ನಿರ್ದೇಶನ ಮಾಡಿದ ಈ ಲೈಗರ್ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿ ರಿಲೀಸ್ ಆಗಿತ್ತು. ಈ ಲೈಗರ್ ಚಿತ್ರ ಬಾಕ್ಸಿಂಗ್ ಕ್ರೀಡಾಧಾರಿತ ಸಿನಿಮಾವಾದ ಕಾರಣ ವಿಜಯ್ ದೇವರಕೊಂಡ ಅವರು ಕೂಡ ತಮ್ಮ ಪಾತ್ರಕ್ಕೆ ತುಂಬಾ ಶ್ರಮವಹಿಸಿ ಈ ಸಿನಿಮಾದಲ್ಲಿ ನಟಿಸಿದ್ದರು. ಆದರೆ ಈ ಸಿನಿಮಾ ರಿಲೀಸ್ ಆದ ನಂತರ ಸಿನಿ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತು.

ಅದರಂತೆ ನಟ ವಿಜಯ್ ದೇವರಕೊಂಡ ಅವರು ಸಹ ಥಿಯೇಟರ್ ನಲ್ಲಿ ಲೈಗರ್ ಸಿನಿಮಾ ನೋಡಿ ಬೇಸರವಾಗಿದ್ದರು. ಇದೀಗ ಇದೆಲ್ಲದರ ನಡುವೆ ಲೈಗರ್ ಚಿತ್ರದ ಮತ್ತೊಂದು ಹೊಸ ಸುದ್ದಿ ಹೊರ ಬಿದ್ದಿದೆ. ಅದೇನಪ್ಪಾ ಅಂದರೆ ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಮಾಜಿ ಬಾಕ್ಸರ್ ಮೈಕ್ ಟೈಸನ್ ಅವರ ಸಂಭಾವನೆ ವಿಚಾರ. ಮೈಕ್ ಟೈಸನ್ ಅವರು ಲೈಗರ್ ಚಿತ್ರದಲ್ಲಿ ಪುಟ್ಟದೊಂದು ಪಾತ್ರ ಮಾಡಿದ್ದಾರೆ. ಇದಕ್ಕಾಗಿ ಅವರು ಬರೋಬ್ಬರಿ 25 ಕೋಟಿ ಸಂಭಾವನೆ ಪಡೆದಿದ್ದಾರಂತೆ. ಇದು ನೂರು ಕೋಟಿ ಬಜೆಟ್ ನಲ್ಲಿ ತಯಾರಾದ ಇಡೀ ಲೈಗರ್ ಚಿತ್ರದ ಶೇಕಡ 25ರಷ್ಟು. ಆದರೆ ಮೈಕ್ ಟೈಸನ್ ಅವರಿಂದ ಸಿನಿಮಾಗೆ ಯಾವುದೇ ರೀತಿ ಪ್ಲಸ್ ಆಗಿಲ್ಲ ಅನ್ನೋದು ಹಲವರ ಅಭಿಪ್ರಾಯ. ಯಾಕಂದ್ರೆ ಮಾಜಿ ಬಾಕ್ಸರ್ ಮೈಕ್ ಟೈಸನ್ ಅವರು 85-2000 ದಶಕದಲ್ಲಿ ಪ್ರಖ್ಯಾತರಾಗಿದ್ದವರು.

ಆದರೆ ಈಗ ಅವರ ಬಗ್ಗೆ ಅಷ್ಟಾಗಿ ಯುವ ಪೀಳಿಗೆಯವರಿಗೆ ಮಾಹಿತಿ ಇಲ್ಲ. ಹೀಗಿರೋವಾಗ ಮೈಕ್ ಟೈಸನ್ ಅವರನ್ನ ಕರೆತರುವುದು ಚಿತ್ರಕ್ಕೆ ಲಾಭವಾಗಲ್ಲ ಅನ್ನೋದನ್ನ ಸ್ವತಃ ಸಹ ನಿರ್ಮಾಪಕರಾಗಿದ್ದ ಕರಣ್ ಜೋಹಾರ್ ಅವರು ಕೂಡ ನಿರ್ದೇಶಕ ಪುರಿ ಜಗನ್ನಾಥ್ ಅವರಿಗೆ ಸಲಹೆ ನೀಡಿ ಮೈಕ್ ಟೈಸನ್ ಅವರನ್ನ ಲೈಗರ್ ಚಿತ್ರಕ್ಕೆ ಕರೆ ತರೋದಕ್ಕೆ ವಿರೋಧ ವ್ಯಕ್ತಪಡಿಸಿದ್ರು. ಆದರೆ ನಿರ್ದೇಶಕ ಪುರಿ ಜಗನ್ನಾಥ್ ಅವರು ಹಠ ಬಿದ್ದು ಮೈಕ್ ಟೈಸನ್ ಅವರನ್ನ ಲೈಗರ್ ಚಿತ್ರಕ್ಕೆ ಕರೆ ತಂದಿದ್ದರು. ಆದರೆ ಇದೀಗ 25ಕೋಟಿ ಸಂಭಾವನೆ ನೀಡಿ ಮೈಕ್ ಟೈಸನ್ ಅವರನ್ನ ಲೈಗರ್ ಸಿನಿಮಾದಲ್ಲಿ ನಟಿಸುವಂತೆ ಮಾಡಿದ್ದು ಅನಗತ್ಯ ನಷ್ಟವಾಯ್ತಾ ಎಂದು ನಿರ್ದೇಶಕರು ಆಲೋಚನೆ ಮಾಡುತ್ತಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದೆ.