ಲಾ ಓದಿದ ಈ ಮಹಿಳೆ ತನ್ನ ಬದುಕು ಕಟ್ಟಿಕೊಳ್ಳಲು ಲಾರಿ ಸ್ಟೇರಿಂಗ್ ಹಿಡಿದು ಕತ್ತಲಲ್ಲಿ ಒಬ್ಬಂಟಿ ಜೀವನ ನಡೆಸುತ್ತಿದ್ದಾರೆ.

ಲಾ ಓದಿದ ಈ ಮಹಿಳೆ ತನ್ನ ಬದುಕಲ್ಲಿ ಆದ ಕೆಟ್ಟ ಘಟನೆಗಳಿಂದ ನೊಂದು ಬದುಕು ಕಟ್ಟಿಕೊಳ್ಳಲು ಲಾರಿ ಸ್ಟೇರಿಂಗ್ ಹಿಡಿದು ಒಬ್ಬಂಟಿ ಜೀವನ ನಡೆಸುತ್ತಿದ್ದಾರೆ.ಪ್ರತಿಯೊಬ್ಬರ ಬದುಕಲ್ಲಿ ಯಾವಾಗ ಹೇಗೆ ದುರಂತ ಸಂಭವಿಸುತ್ತದೆ ಎಂದು ನಿರೀಕ್ಷೆ ಮಾಡಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಬದುಕಲ್ಲಿ ಎಲ್ಲವೂ ಸುಂದರವಾಗಿದ್ದಾಗ ಆಕಸ್ಮಿಕವಾಗಿ ಎದುರಾಗುವ ಸಮಸ್ಯೆ ತೊಂದರೆಗಳು ಮನುಷ್ಯನನ್ನ ಯಾವ ಪರಿಸ್ಥಿತಿಗೆ ಬೇಕಾದರು ತಳ್ಳಬಹುದು. ಅಂತದ್ದೇ ಪರಿಸ್ಥಿತಿಗೆ ಸಿಲುಕಿ ಜೀವನದಲ್ಲಿ ಹಲವು ಕಷ್ಟ ನೋವುಗಳನ್ನು ಅನುಭವಿಸಿ ಇಂದು ಮಾದರಿ ಬದುಕನ್ನ ಕಟ್ಟಿಕೊಂಡಿರುವ ಯೋಗಿತಾ ರಘುವಂಶಿ ಅವರು ನಿಜಕ್ಕೂ ಕೂಡ ಒಬ್ಬ ಸಾಹಸಿ ಮಹಿಳೆಯೇ ಸರಿ.ಇಂದು ಮಹಿಳೆ ಎಲ್ಲಾ ಕ್ಷೇತ್ರದಲ್ಲಿಯೂ ಕೂಡ ತನ್ನ ಶಕ್ತಿ ಸಾಮರ್ಥ್ಯವನ್ನು ನಿರೂಪಿಸಿದ್ದಾಳೆ.ಮನೆ ಮತ್ತು ಹೊರಗೆ ಎರಡೂ ಕಡೆ ಕೂಡ ದುಡಿದು ಸಂಸಾರವನ್ನು ನಡೆಸುತ್ತಿದ್ದಾಳೆ.ಮಹಿಳೆ ಪುರುಷರಷ್ಟೇ ಸಮರ್ಥಳು ಎಂಬುದನ್ನು ಈಗಾಗಲೇ ಸಾಕಷ್ಟು ಬಾರಿ ನಿರೂಪಿಸಿದ್ದಾಳೆ.

ಅಂತೆಯೇ ಭೂಪಾಲ್ ನ ಯೋಗಿತಾ ರಘುವಂಶಿ ಎಂಬುವವರು ಓದಿದ್ದು ಕಾನೂನು ಪದವಿ.ಜೊತೆಗೆ ಅಡಿಶನಲ್ ಆಗಿ ಬ್ಯೂಟಿಶಿಯನ್ ಕೋರ್ಸ್ ಕೂಡ.ತನ್ನ ಇಚ್ಚೆಗೆ ತಕ್ಕಂತೆ ನಡೆಯುವ ಗಂಡ ಸುಂದರ ಸಂಸಾರ ಜೀವನಕ್ಕೆ ಸಾಕ್ಷಿಯಾಗಿ ಇಬ್ಬರು ಮುದ್ದಾದ ಮಕ್ಕಳು.ಸುಂದರ ಮನೆ.ಅಪ್ಪ ಅಮ್ಮ,ತಮ್ಮ ಅಂತ ಸುಂದರ ತುಂಬ ಕುಟುಂಬವನ್ನು ಹೊಂದಿದ್ದ ಯೋಗಿತಾ ಅವರಿಗೆ ಒಂದು ದಿನ ಬಿರುಗಾಳಿ ಆಘಾತಕಾರಿ ಸುದ್ದಿಯೊಂದು ಕೇಳಿ ಬರುತ್ತದೆ.ಅದೂ ಅವರ ಗಂಡ ರಸ್ತೆ ಅಪಘಾತವಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದಾರೆ ಎಂದು.ತನ್ನ ಗಂಡ ಅಪಘಾತವಾಗಿ ಸಾವನ್ನಪ್ಪಿದರು,ಇನ್ನು ಅವರು ತನ್ನ ಜೊತೆಗೆ ಇರುವುದಿಲ್ಲ ಎಂದು ಅರಿತ ಯೋಗಿತಾ ಆ ಕ್ಷಣ ಕುಸಿದು ಬೀಳುತ್ತಾರೆ.

ಇತ್ತ ತನ್ನ ಅಕ್ಕನ ಗಂಡ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ ಎಂದು ತಿಳಿದು ದೂರದ ಊರಿಂದ ಬರುತ್ತಿದ್ದಾಗ ಆತನು ಕೂಡ ಅಪಘಾತವಾಗಿ ಮರಣ ಹೊಂದುತ್ತಾನೆ.ಇತ್ತ ಪ್ರೀತಿಯ ಗಂಡ ಅತ್ತ ಮಮತೆಯಿಂದ ಸಾಕಿ ಬೆಳೆಸಿದ ತಮ್ಮ ಸಾವನ್ನಪ್ಪಿದ್ದು ಯೋಗಿತಾ ರಘುವಂಶಿ ಅವರಿಗೆ ಜೀವನವೇ ಮುಗಿದು ಹೋಯಿತು ಎನ್ನುವಷ್ಟರ ಮಟ್ಟಿಗೆ ತಂದು ನಿಲ್ಲಿಸುತ್ತದೆ.ಆಗ ಅವರಿಗೆ ಬದುಕಬೇಕು ಎಂಬ ಅನಿವಾರ್ಯ ಸೃಷ್ಟಿಯಾಗಿದ್ದು ತನ್ನ ಮಕ್ಕಳನ್ನು ಕಂಡು.ತನ್ನ ಮಕ್ಕಳನ್ನ ಸಾಕಲು ತಾನು ಓದಿದಿ ಕಾನೂನು,ಬ್ಯುಟಿಶಿಯನ್ ಕೋರ್ಸ್ ಗಳು ಆರ್ಥಿಕವಾಗಿ ಕೈ ಹಿಡಿಯದ ಕಾರಣ ಆಕಸ್ಮಿಕವಾಗಿ ಲಾರಿ ಡ್ರೈವರ್ ಆಗುತ್ತಾರೆ.

ತಮ್ಮ ಮೂವತ್ತೈದನೇ ವಯಸ್ಸಿನಲ್ಲಿ ಲಾರಿ ಸ್ಟೇರಿಂಗ್ ಹಿಡಿದ ಯೋಗಿತಾ ಅವರಿಗೆ ಇದೀಗ ಐವತ್ತು ವರ್ಷ.ಕಳೆದ ಹದಿನೈದು ವರ್ಷಗಳಿಂದ ಲಾರಿ ಓಡಿಸಿ ತಮ್ಮ ಇಬ್ಫರ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಿ,ತಾನೂ ಕೂಡ ಸಮಾಜದಲ್ಲಿ ಗೌರವ ಘನತೆಯಿಂದ ಜೀವನ ನಡೆಸುತ್ತಿದ್ದಾರೆ.ಇವರ ಒಬ್ಬಂಟಿತನದ ಜೀವನಗಾಥೆ ತಿಳಿದು ಮಹೀಂದ್ರಾ ಮೋಟಾರ್ಸ್ ಕಂಪನಿಯ ಮುಖ್ಯಸ್ಥರಾದ ಆನಂದ್ ಮಹೀಂದ್ರಾ ಅವರು ಯೋಗಿತಾ ರಘುವಂಶಿ ಅವರಿಗೆ ಲಾರಿಯೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ.ಯೋಗಿತಾ ಅವರು ಇಂದು ದೇಶದ ಮೂಲೆ ಮೂಲೆ ಸುತ್ತಿದ್ದಾರೆ.

ಅದೆಂತಹ ರಾಷ್ಟ್ರೀಯ ಹೆದ್ದಾರಿಗಳಲ್ಲಿಯೂ ಕೂಡ ಆತಂಕ ಭಯಕ್ಕೆ ಒಳಗಾಗದೇ ಧೈರ್ಯ ಆತ್ಮವಿಶ್ವಾಸದಿಂದ ಹಗಲು ಇರುಳು ಎನ್ನದೇ ಲಾರಿ ಚಾಲನೆ ಮಾಡುತ್ತಾರೆ. ತನ್ನ ಐವತ್ತನೇ ವಯಸ್ಸಿನಲ್ಲಿಯೂ ಕೂಡ ಯೋಗಿತಾ ರಘುವಂಶಿ ಅವರು ತನ್ನ ಚಾಲನಾ ವೃತ್ತಿಯನ್ನ ಬಿಡದೇ ದುಡಿಯುತ್ತಿದ್ದಾರೆ.ಇಂತಹ ಛಲಗಾತಿ ಯೋಗಿತಾ ರಘುವಂಶಿ ಅವರು ಪ್ರತಿಯೊಬ್ಬ ಮಹಿಳೆರಿಗೂ ಕೂಡ ಮಾದರಿಯಾಗಿದ್ದಾರೆ. ಈ ನಮ್ಮ ಲೇಖನ ಇಷ್ಟವಾದಲ್ಲಿ ಲೈಕ್ ಮಾಡಿ ಮತ್ತು ಶೇರ್ ಮಾಡಿ. ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.