ಲಲೀತ್ ಮೋದಿ ಹಾಗೂ ನಟಿ ಸುಶ್ಮಿತಾ ಸೇನ್ ವಿಚಾರ, ಲಲೀತ್ ಮೋದಿಯ ಮಗ ಅಪ್ಪನ ಬಗ್ಗೆ ಏನಂದ್ರು ಗೊತ್ತೇ

ಈ ಬಗ್ಗೆ ಮಗ ರುಚೀರ್ ಮೋದಿ ಅವರಿಗೆ ತನ್ನ ತಂದೆಯ ಸಂಬಂಧ ಮೊದಲೇ ತಿಳಿದಿತ್ತಂತೆ. ಈ ಮಾತನ್ನ ಸ್ವತಃ ರುಚೀರ್ ಮೋದಿ ಅವರೇ ಹೇಳಿದ್ದಾರೆ. ರುಚೀರ್ ಮೋದಿ ಅವರ ಈ ಹೇಳಿಕೆ ಇದೀಗ ಎಲ್ಲೆಡೆ ಭಾರಿ ಚರ್ಚೆಗೆ ಕಾರಣವಾಗಿದೆ. ಹೌದು ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಸ್ಥಾಪಕರಾಗಿ, ಐಪಿಎಲ್ ನ ಮೊದಲ ಅಧ್ಯಕ್ಷರಾಗಿದ್ದ ಭಾರತದ ಖ್ಯಾತ ಉದ್ಯಮಿ ಲಲಿತ್ ಮೋದಿ ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಅವರೊಟ್ಟಿಗೆ ಡೇಟಿಂಗ್ ನಡೆಸುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಲಲಿತ್ ಮೋದಿ ಅವರು ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಅವರನ್ನ ಬಾಚಿ ತಪ್ಪಿ ಮುತ್ತು ನೀಡುವ ಭಂಗಿಯಲ್ಲಿ ಇರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದ್ರೇ ಲಲತ್ ಮೋದಿ ಅವರ ಕುಟುಂಬಕ್ಕೆ ಲಲಿತ್ ಮೋದಿ ಸುಷ್ಮಿತಾ ಸೇನ್ ಜೊತೆ ಡೇಟಿಂಗ್ ನಡೆಸುತ್ತಿದ್ದುದ್ದರ ಬಗ್ಗೆ ಮೊದಲೇ ತಿಳಿದಿದ್ದಂತೆ.

ಆದರೆ ಈ ವಿಚಾರವನ್ನು ಲಲಿತ್ ಮೋದಿ ಅವರ ಮಕ್ಕಳಾಗಲೀ, ಅವರ ಕುಟುಂಬದ ಯಾವ ಸದಸ್ಯರು ಕೂಡ ಸಾರ್ವಜನಿಕವಾಗಿ ಇದನ್ನ ಮಾತನಾಡಿಲ್ಲ. ಲಲತ್ ಮೋದಿ ಯಾವಾಗ ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಜೊತೆ ಡೇಟಿಂಗ್ ನಡೆಸುತ್ತಿರುವ ಬಗ್ಗೆ ಸಾರ್ವಜನಿಕವಾಗಿ ಸ್ಪಷ್ಟನೆ ಕೊಟ್ಟರೋ ಆಗಿಂದ ಎಲ್ಲೆಡೆ ಅಚ್ಚರಿ ಮೂಡಿದೆ. ಈ ವಿಚಾರ ಅವರ ಕುಟುಂಬಕ್ಕೆ ತಿಳಿದರೆ ಬಹಳ ಅಚ್ಚರಿ ಪಡುತ್ತಾರೆ ಅಂತ ಎಲ್ಲರೂ ಊಹೆ ಮಾಡಿದ್ರು. ಆದರೆ ಲಲಿತ್ ಮೋದಿ ಅವರ ಮಗ ರುಚೀರ್ ಮೋದಿ ಅವರು ಈ ಬಗ್ಗೆ ನಮ್ಮ ತಂದೆ ಲಲಿತ್ ಮೋದಿ ಅವರು ಸುಶ್ಮಿತಾ ಸೇನ್ ಜೊತೆ ಡೇಟಿಂಗ್ ನಲ್ಲಿ ಇದ್ದದ್ದು ನಮಗೆ ತಿಳಿದಿತ್ತು.

ಆದರೆ ನನ್ನ ತಂದೆಯ ವೈಯಕ್ತಿಕ ವಿಚಾರಗಳನ್ನು ಮಾತನಾಡಲು ನನಗೆ ಇಷ್ಟವಿಲ್ಲ ಎಂದು ತಿಳಿಸಿದ್ದಾರೆ. ಲಲಿತ್ ಮೋದಿ ಅವರಿಗೆ ರುಚೀರ್ ಮೋದಿ ಎಂಬ ಮಗ ಮತ್ತು ಆಲಿಯಾ ಎಂಬ ಮಗಳು ಇದ್ದಾರೆ. ರುಚೀರ್ ಮೋದಿಗೆ 28 ವರ್ಷವಾಗಿದ್ದರು ಕೂಡ ಇನ್ನು ಮದುವೆ ಆಗಿಲ್ಲ. ಆದರೆ ಲಲಿತ್ ಮೋದಿ ಮದುವೆಗೆ ಬಂದಿರೋ ಮಗ ಇದ್ರು ಕೂಡ ಈ ರೀತಿ ಈ ವಯಸ್ಸಿನಲ್ಲಿ ಡೇಟಿಂಗ್ ನಡೆಸುತ್ತಿರುವುದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಇನ್ನು ಲಲಿತ್ ಮೋದಿ ಇದೀಗ ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಅವರೊಟ್ಟಿಗೆ ಡೇಟಿಂಗ್ ನಡೆಸುತ್ತಿರುವುದು ಜಗಜ್ಜಾಹೀರಾಗಿದೆ. ಲಲಿತ್ ಮೋದಿ ಅವರು 2005-10ರ ಅವಧಿಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅದರ ಜೊತೆಗೆ 2008-10 ವರ್ಷದ ಅವಧಿಯಲ್ಲಿ ಚಾಂಪಿಯನ್ಸ್ ಲೀಗ್ ನ ಅಧ್ಯಕ್ಷರಾಗಿದ್ದರು.