‘ಲಲಿತ್ ಮೋದಿ’ ಅವರ ಲಂಡನ್ ಅಲ್ಲಿರುವ ಐಷಾರಾಮಿ ಮನೆಯ ಬೆಲೆ ಎಷ್ಟು ಗೊತ್ತೇ

ಇತ್ತೀಚೆಗೆ ಕೆಲವು ದಿನಗಳಿಂದ ಭಾರತೀಯ ಉದ್ಯಮ ಕ್ಷೇತ್ರ ಮತ್ತು ಬಾಲಿವುಡ್ ನಲ್ಲಿ ಭಾರಿ ಸದ್ದು ಮಾಡಿದ್ದು ಅಂದ್ರೆ ಅದು ಉದ್ಯಮಿ ಲಲಿತ್ ಮೋದಿ ಮತ್ತು ಬಾಲಿವುಡ್ ಖ್ಯಾತ ನಟಿ, ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್. ಲಲಿತ್ ಮೋದಿ ಅವರು ನಟಿ ಸುಶ್ಮಿತಾ ಸೇನ್ ಜೊತೆ ರಿಲೇಶನ್ ಶಿಪ್ ನಲ್ಲಿದ್ದಾರೆ ಅನ್ನೋ ಒಂದಷ್ಟು ಸುದ್ದಿಗಳು ಬಿಟೌನ್ ನಲ್ಲಿ ಕೇಳಿ ಬರುತ್ತಿತ್ತು. ಅದಕ್ಕೆ ಪುಷ್ಠಿ ನೀಡುವಂತೆ ಲಲಿತ್ ಮೋದಿ ಸುಶ್ಮಿತಾ ಸೇನ್ ಅವರೊಟ್ಟಿಗೆ ಆತ್ಮೀಯವಾಗಿ ಅಪ್ಪಿ ಮುತ್ತು ನೀಡುತ್ತಿರುವ ಫೋಟೋವನ್ನ ಸ್ವತಃ ಲಲಿತ್ ಮೋದಿ ಅವರೇ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಈ ಪೋಟೋಗಳು ಸೋಶಿಯಲ್ ಮಿಡಿಯಾದಲ್ಲಿ ಸಾಕಷ್ಟು ಕುತೂಹಲ ಮತ್ತೂ ಬಾಲಿವುಡ್ ರಂಗದಲ್ಲಿ ಎಲ್ಲರ ಅಚ್ಚರಿಗೆ ಕಾರವಾಯಿತು.

ಮಾಜಿ ವಿಶ್ವ ಸುಂದರಿ ಬಾಲಿವುಡ್ ನಟಿ ಸುಶ್ಮಿತಾ ಸೇನ್ ಅವರು ಮದುವೆ ವಯಸ್ಸಿನ ಮಕ್ಕಳಿರುವ ಉದ್ಯಮಿ ಲಲಿತ್ ಮೋದಿ ಅವರೊಟ್ಟಿಗೆ ಯಾಕೆ ಡೇಟಿಂಗ್ ನಡೆಸಿದರು ಎಂಬ ಪ್ರಶ್ನೆ ಅನೇಕ ಬಾಲಿವುಡ್ ಮಂದಿಯನ್ನ ಕಾಡಿದರು ಕೂಡ ಇದು ಬಣ್ಣದ ಲೋಕದಲ್ಲಿ ಕಾಮನ್ ಆಗಿಯೇ ಇತ್ತು ಎಂಬುದು ಹಲವರ ಅಭಿಪ್ರಾಯವಾಗಿತ್ತು. ಹಾಗಾದರೆ ಹಣದ ವ್ಯಾಮೋಹ ಸುಶ್ಮಿತಾ ಸೇನ್ ಅವರನ್ನ ಲಲಿತ್ ಮೋದಿ ಅವರ ಸ್ನೇಹ ಬಯಸುವಂತೆ ಮಾಡಿತಾ ಅನ್ನೋ ಪ್ರಶ್ನೆಗೆ ಹೌದು ಎಂಬ ಉತ್ತರ ಕೂಡ ಕೇಳಿ ಬರುತ್ತಿದೆ. ಲಲಿತ್ ಮೋದಿ ಭಾರತದ ಪ್ರಸಿದ್ದ ಉದ್ಯಮಿಗಳಲ್ಲಿ ಒಬ್ಬರು‌. ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಆರಂಭಿಸಿದ ಲಲಿತ್ ಮೋದಿ ಯಾರಿಗೆ ತಾನೇ ಗೊತ್ತಿಲ್ಲ. ಭಾರತೀಯ ಉದ್ಯಮ ಕ್ಷೇತ್ರದಲ್ಲಿ ಲಲಿತ್ ಮೋದಿ ಅವರ ಹೆಸರು ಚಿರಪರಿಚಿತ.

ಭಾರಿ ಯಶಸ್ವಿ ಉದ್ಯಮಿ ಆಗಿದ್ದ ಲಲಿತ್ ಮೋದಿ ಅವರು ಆಗಾಗ ಕೆಲವು ವಿವಾದಗಳನ್ನು ಕೂಡ ಮೈಮೇಲೆ ಎಳೆದುಕೊಳ್ಳುತ್ತಿರುತ್ತಾರೆ. ಅದರಂತೆ ಇದೀಗ ಸುಶ್ಮಿತಾ ಸೇನ್ ಅವರೊಟ್ಟಿಗೆ ಸಂಬಂಧದಲ್ಲಿ ಇರುವ ಮೂಲಕ ಭಾರಿ ಸುದ್ದಿಯಾಗಿದ್ದಾರೆ. ಲಲಿತ್ ಮೋದಿ ಅವರ ಆಸ್ತಿಯ ಬಗ್ಗೆ ತಿಳಿಯುವುದಾದರೆ ಲಲಿತ್ ಮೋದಿ ಅವರ ಬಳಿ ಸರಿ ಸುಮಾರು ಬರೋಬ್ಬರಿ 4,555 ಕೋಟಿ ರುಪಾಯಿಗಳಷ್ಟು ಆಸ್ತಿ ಮೌಲ್ಯವನ್ನು ಹೊಂದಿದೆಯಂತೆ. ಅವರು ಸದ್ಯಕ್ಕೆ ಲಂಡನ್ ನಲ್ಲಿ ವಾಸ ಮಾಡುತ್ತಿದ್ದು, ಲಂಡನ್ ನಲ್ಲಿರುವ ಅವರ ಬಂಗಲೆ ಬರೋಬ್ಬರಿ ಏಳು ಸಾವಿರ ಚದರ ಕಿಮೀ ಅಡಿಗಳಷ್ಟು ಬಹು ವಿಸ್ತಾರವಾಗಿದೆ. ದುಬಾರಿ ಐಷಾರಾಮಿ ಬಂಗಲೆಯೊಳಗೆ ಸಂಪೂರ್ಣ ಇಂಪೋರ್ಟೆಡ್ ವಸ್ತುಗಳಿಂದ ಇಂಟೇರಿಯರ್ ಡಿಸೈನ್ ಮಾಡಲಾಗಿದೆಯಂತೆ. ಜೊತೆಗೆ ಈ ಬಂಗಲೆಯಲ್ಲಿ ಒಂದು ಎಲಿವೇಟರ್ ಸೇರಿದಂತೆ ಒಟ್ಟು ಹನ್ನೆರಡು ಕೋಣೆಗಳಿವೆಯಂತೆ.

ಅವುಗಳಲ್ಲಿ ನಾಲ್ಕು ಕೋಣೆಗಳು ಅತಿಥಿಗಳಿಗೆ ಅಂತಾನೇ ಮೀಸಲಿಟ್ಟಿದ್ದಾರಂತೆ. ಈ ಬೃಹತ್ ವಿಲಾಸಿ ಬಂಗಲೆಯನ್ನ ಖರೀದಿ ಮಾಡುವಾಗ ಮಾರುಕಟ್ಟೆಯ ಪ್ರಕಾರ ಬಾಡಿಗೆಯ ಬೆಲೆಯೇ ಬರೋಬ್ಬರಿ 11,500 ಲಂಡನ್ ಪೌಂಡ್ ಆಗಿತ್ತಂತೆ. ಇದನ್ನ ಭಾರತೀಯ ರುಪಾಯಿ ಮೌಲ್ಯಕ್ಕೆ ಪರಿವರ್ತಿಸುವುದಾದರೆ ಬರೋಬ್ಬರಿ 12ಲಕ್ಷಕ್ಕೂ ಅಧಿಕ ಹಣವಾಗುತ್ತದೆ. ಅಷ್ಟು ದುಬಾರಿ ವಿಲಾಸಿ ಬಂಗಲೆ ಇದಾಗಿದೆ. ಸದ್ಯಕ್ಕೆ ಲಲಿತ್ ಮೋದಿ ಈ ಐಷಾರಾಮಿ ಬಂಗಲೆಯನ್ನ ಧೀರ್ಘಾವಧಿಗೆ ಭೋಗ್ಯಕ್ಕೆ ಪಡೆದು ವಾಸ ಮಾಡುತ್ತಿದ್ದಾರೆ. ಇಂತಹ ಐಷಾರಾಮಿ ಜೀವನ ನಡೆಸುತ್ತಿರುವ ಲಲಿತ್ ಮೋದಿ ಅವರ ಬದುಕಿಗೆ ಈಗ ಮಾಜಿ ವಿಶ್ವಸುಂದರಿಯ ಎಂಟ್ರಿ ಆಗಿರೋದ್ರಿಂದ ಲಲಿತ್ ಮೋದಿ ಭಾರಿ ಹ್ಯಾಪಿ ಪರ್ಸನ್ ಎಂಬಂತೆ ಹೊರ ದೇಶಗಳಿಗೆ ಪ್ರವಾಸ ಹೊರಟು ಲೈಫ್ ಎಂಜಾಯ್ ಮಾಡುತ್ತಿದ್ದಾರೆ.

Leave a Reply

%d bloggers like this: