ಲಾಲ್ ಸಿಂಗ್ ಚಡ್ಡಾ‌ ಚಿತ್ರಕ್ಕೆ ಬರೊಬ್ಬರಿ 100 ಕೋಟಿ ನಷ್ಟ, ನಷ್ಟ ತುಂಬಲು ಅಮೀರ್ ಖಾನ್ ಅವರು ಏನ್ ಮಾಡಲು ನಿರ್ಧರಿಸಿದ್ದಾರೆ ಗೊತ್ತೇ

ಹಿಂದಿ ಚಿತ್ರರಂಗದ ಮಿಸ್ಟರ್ ಪರ್ಫೆಕ್ಷನಿಷ್ಟ್ ಅಂತಾನೇ ಕರೆಸಿಕೊಳ್ಳುವ ಸ್ಟಾರ್ ನಟರಾದ ಅಮೀರ್ ಖಾನ್ ಅವರು ತಮ್ಮ ಲಾಲ್ ಸಿಂಗ್ ಚಡ್ಡಾ ಚಿತ್ರ ವಿವಿಧ ಕಾರಣಗಳಿಗೆ ಸೋಲನ್ನ ಕಂಡ ಹಿನ್ನೆಲೆಯಲ್ಲಿ ನಿರ್ಮಾಪಕರಿಗೆ ನಷ್ಟ ತುಂಬಿ ಕೊಡುವ ನಿರ್ಧಾರ ಮಾಡಿದ್ದಾರಂತೆ. ಹಿಂದಿ ಸಿನಿಮಾಗಳು ಅಂದರೆ ಮೊದಲಿಗೆ ಥಟ್ಟನೆ ನೆನಪಿಗೆ ಬರೋದೇ ಸ್ಟಾರ್ ಖಾನ್ ನಟರ ಸಿನಿಮಾಗಳು. ಇವರ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಧೂಳಿಪಟ ಮಾಡುತ್ತಿದ್ದ ರೀತಿ ಯಾವ ಭಾಷೆಯ ಸಿನಿಮಾಗಹು ಕೂಡ ಮಾಡುತ್ತಿರಲಿಲ್ಲ. ಆದರೆ ಇದೀಗ ಬಾಲಿವುಡ್ ಸಿನಿಮಾ ರಂಗ ಸಂಪೂರ್ಣವಾಗಿ ಮಂಕಾಗಿದೆ ಎಂದು ಹೇಳಬಹುದು. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಅಮೀರ್ ಖಾನ್ ಅವರ ಲಾಲ್ ಸಿಂಗ್ ಚಡ್ಡಾ ಸಿನಿಮಾ ವರ್ಲ್ಡ್ ವೈಡ್ ರಿಲೀಸ್ ಆಯಿತು.

ಈ ಚಿತ್ರ ಹಾಲಿವುಡ್ ಸೂಪರ್ ಹಿಟ್ ಸಿನಿಮಾ ಫಾರೆಸ್ಟ್ ಗಂಪ್ ಸಿನಿಮಾದ ರೀಮೇಕ್ ಆಗಿತ್ತು. ಹಾಗಾಗಿ ಈ ಲಾಲ್ ಸಿಂಗ್ ಚಡ್ಡಾ ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಇಡಲಾಗಿತ್ತು. ಸ್ವತಃ ಅಮೀರ್ ಖಾನ್ ಅವರು ಕೂಡ ವಯಾಕಾಮ್18 ಸ್ಟೂಡಿಯೋಸ್ ಜಂಟಿಯಾಗಿ ಈ ಚಿತ್ರ ನಿರ್ಮಾಣ ಮಾಡಿದ್ದರು. ಈ ಸಿನಿಮಾದಲ್ಲಿ ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಾಯಕಿಯಾಗಿ ಕರೀನಾ ಕಪೂರ್ ಅವರು ಬಣ್ಣ ಹಚ್ಚಿದ್ದರು. ಲಾಲ್ ಸಿಂಗ್ ಚಡ್ಡಾ ಸಿನಿಮಾ ಬರೋಬ್ಬರಿ 180 ಕೋಟಿಗೂ ಅಧಿಕ ವೆಚ್ಚದಲ್ಲಿ ತಯಾರಾದ ಸಿನಿಮಾ. ಬಿಡುಗಡೆಗೂ ಮುನ್ನ ಅಪಾರ ನೀರಿಕ್ಷೆ ಹುಟ್ಟು ಹಾಕಿದ್ದ ಲಾಲ್ ಸಿಂಗ್ ಚಡ್ಡಾ ಸಿನಿಮಾ ರಿಲೀಸ್ ಆದ ನಂತರ ಸಿನಿ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು.

ಇದಕ್ಕೂ ಮುನ್ನ ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಾಯ್ ಕಟ್ ಅಭಿಯಾನಕ್ಕೆ ಒಳಪಟ್ಟಿತು. ಯಾಕಂದ್ರೆ ಅಮೀರ್ ಖಾನ್ ಅವರು ಕೆಲವು ವರ್ಷಗಳ ಹಿಂದೆ ಭಾರತದಲ್ಲಿ ಅಸಹಿಷ್ಣುತೆ ವಾತಾವರಣ ಇದೆ ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆ ಅವರ ಈ ಲಾಲ್ ಸಿಂಗ್ ಚಡ್ಡಾ ಸಿನಿಮಾದ ಮೇಲೆ ಪರಿಣಾಮ ಬೀರಿತು. ಸರಿ ಸುಮಾರು ನಾಲ್ಕು ವರ್ಷಗಳ ಕಾಲ ಪರಿಶ್ರಮ ಹಾಕಿ ಬರೋಬ್ಬರಿ 180 ಕೋಟಿ ವೆಚ್ಚದಲ್ಲಿ ತಯಾರಾದ ಲಾಲ್ ಸಿಂಗ್ ಚಡ್ಡಾ ಸಿನಿಮಾ ಹಾಕಿದ ಬಂಡವಾಳ ಹಿಂತೆಗೆಯಲು ಕೂಡ ಹರ ಸಾಹಸ ಪಡುತ್ತಿದೆ. ಹೀಗಾಗಿ ನಟ ಅಮೀರ್ ಖಾನ್ ಸಿನಿಮಾದ ಸೋಲಿನ ಹೊಣೆಯನ್ನ ಸ್ವತಃ ತಮ್ಮ ಮೇಲೆ ಹಾಕಿಕೊಂಡು.

ಈ ಚಿತ್ರದಿಂದ ನಿರ್ಮಾಪಕರಿಗೆ ಆದ ಸಂಪೂರ್ಣ ಅಂದರೆ ಬರೋಬ್ಬರಿ ನೂರು ಕೋಟಿವರೆಗೆ ನಷ್ಟದ ಹಣವನ್ನ ನೀಡುವ ನಿರ್ಧಾರ ಮಾಡಿದ್ದಾರೆ ಎಂದು ಅವರ ಆಪ್ತ ಮೂಲಗಳಿಂದ ತಿಳಿದು ಬಂದಿದೆ. ಈ ಚಿತ್ರಕ್ಕಾಗಿ ನಟ ಅಮೀರ್ ಖಾನ್ ಅವರು ನಾಲ್ಕು ವರ್ಷಗಳ ಕಾಲ ಶ್ರಮ ಹಾಕಿದ್ದರು. ಅದರ ಜೊತೆಗೆ ತಾವೂ ಕೂಡ ಬಂಡವಾಳ ಹೂಡಿದ್ದರು. ಇದೀಗ ಸಿನಿಮಾ ನಿರೀಕ್ಷೆ ಮಾಡಿದ ಹಾಗೆ ಯಶಸ್ಸು ಕಾಣದೇ ಸೋಲನ್ನಭವಿಸಿದೆ. ಹಾಗಾಗಿ ನಟ ಅಮೀರ್ ಖಾನ್ ತಮ್ಮ ಸಂಭಾವನೆಯನ್ನ ತ್ಯಜಿಸುತ್ತಾರೋ ಅಥವಾ ಇನ್ಯಾವ ರೂಪದಲ್ಲಿ ನಿರ್ಮಾಪಕರಿಗೆ ನಷ್ಟದ ಹಣವನ್ನ ತುಂಬಲಿದ್ದಾರೆ ಅನ್ನೋದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

Leave a Reply

%d bloggers like this: