ಖ್ಯಾತ ನಟಿಯರ ವಯಸ್ಸಿನ ಲೆಕ್ಕಾಚಾರ.. ಯಾವ ನಟಿಗೆ ಎಷ್ಟು ವಾಯಸ್ಸಾಗಿದೆ ಗೊತ್ತಾ? ನೋಡಿ ಒಮ್ಮೆ

ದಕ್ಷಿಣ ಭಾರತೀಯ ಚಿತ್ರರಂಗದ ಈ ಸುಪ್ರಸಿದ್ದ ನಾಯಕಿ ನಟಿಯರು ಬೆಳ್ಳಿ ತೆರೆಯ ಮೇಲೆ ಸುಂದರವಾಗಿ ಮನಮೋಹಕ ಕಾಂತಿಯುತವಾಗಿ ಕಾಣಿಸಿಕೊಂಡು ಮಿಂಚುತ್ತಾರೆ. ಬಣ್ಣದ ಲೋಕ ಅಂದಮೇಲೆ ನಾಯಕ ನಟಿಯರು ತಮ್ಮ ಬಾಹ್ಯ ಸೌಂದರ್ಯದ ಬಗ್ಗೆ ಕಾಳಜಿ ವಹಿಸಬೇಕು. ಇದು ಅವರ ವೃತ್ತಿಗೆ ಅತ್ಯಗತ್ಯವಾದುದು. ಅದರಂತೆ ಬಹುತೇಕ ಕಲಾವಿದರು ತಮ್ಮ ದೇಹಧಾರ್ಢ್ಯತೆ ಬಗ್ಗೆ ಕಾಳಜಿ ವಹಿಸಿ ಸದಾ ಫಿಟ್ ನೆಸ್ ಆಗಿ ಇರುತ್ತಾರೆ. ಇವರಿಗೆ ಎಷ್ಟೇ ವಯಸ್ಸಾದರೂ ಸಹ ತುಂಬಾ ಯಂಗ್ ಆಗಿ ಕಾಣಿಸಿಕೊಳ್ಳುತ್ತಾರೆ.
ಅದರಲ್ಲಿಯೂ ಈ ದೇಹ ಸೌಂದರ್ಯತೆಯ ಬಗ್ಗೆ ನಟಿ ಮಣಿಯರಂತೂ ಅಪಾರ ಕಾಳಜಿ ವಹಿಸುತ್ತಾರೆ. ಒಂದೊಂದು ಸಿನಿಮಾದಲ್ಲಿ ಒಂದೊಂದು ರೀತಿಯ ಭಿನ್ನ ವಿಭಿನ್ನ ಬಗೆಯ ಪಾತ್ರ ಮಾಡುವ ನಟಿಯರು ತಮ್ಮ ಪಾತ್ರಕ್ಕೆ ತಕ್ಕಂತೆ ತಮ್ಮ ದೇಹದ ತೂಕವನ್ನ ಇಳಿಕೆ ಮತ್ತು ಏರಿಕೆ ಮಾಡಿಕೊಳ್ಳುತ್ತಿರುತ್ತಾರೆ. ತಮ್ಮ ಬ್ಯೂಟಿ ಚೆನ್ನಾಗಿರಬೇಕು ಎಂದು ಅನೇಕ ಕಾಸ್ಮೇಟೀಕ್ ಬಳಸುತ್ತಾರೆ. ಕೆಲವರಂತೂ ಫೇಸ್ ಸರ್ಜರಿ ಕೂಡ ಮಾಡಿಸಿಕೊಂಡಿದ್ದಾರೆ.

ಇನ್ನು ಸಿನಿಮಾ ಕ್ಷೇತ್ರದಲ್ಲಿ ದಶಕಗಳ ಕಾಲ ಜನಪ್ರಿಯ ನಟಿಯಾಗಿ ಮಿಂಚಿದ ಅನೇಕ ನಟಿಯರು ಇಂದಿಗೂ ತಮ್ಮ ಚಾರ್ಮ್ ಕಳೆದುಕೊಂಡಿಲ್ಲ. ತಮ್ಮ ಸಿನಿ ವೃತ್ತಿ ಆರಂಭ ಮಾಡಿದಾಗ ಯಾವ ರೂಪ ಲಾವಣ್ಯ ಹೊಂದಿದ್ದರೆ ಅದೇ ರೀತಿಯ ಸೌಂದರ್ಯವನ್ನು ಇಂದಿಗೂ ಕೂಡ ಉಳಿಸಿಕೊಂಡು ಬೆಳ್ಳಿತೆರೆಯ ಮೇಲೆ ಮಿಂಚುತ್ತಿದ್ದಾರೆ. ಅಂತಹ ನಟಿಯರ ಪೈಕಿ ದಕ್ಷಿಣ ಭಾರತದ ಅನೇಕ ನಟಿಯರು ಪೈಪೋಟಿ ನೀಡುತ್ತಾರೆ.

ಹೌದು ಮಿಲ್ಕ್ ಬ್ಯೂಟಿ ಖ್ಯಾತಿಯ ನಟಿ ತಮನ್ನಾ ಅವರಿಗೆ ಮೂವತ್ತೆರಡು ವಯಸ್ಸಾದರೂ ಕೂಡ ಇಂದಿಗೂ ಕೂಡ ಇಪ್ಪತೈದರ ಚೆಲುವೆಯಂತೆ ಕಾಣುತ್ತಾರೆ. ಇವರ ಅಂದಕ್ಕೆ ಮನಸೋಲದವರೇ ಇಲ್ಲ. ಅನುಷ್ಕಾ ಶೆಟ್ಟಿ ಅವರಿಗೆ ಮೂವತ್ತಾರು ವಯಸ್ಸಾದರೂ ಕೂಡ ತಮ್ಮ ದೇಹ ಸೌಂದರ್ಯವನ್ನ ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಬಂದಿದ್ದಾರೆ. ಸಿನಿಮಾದಿಂದ ಸಿನಿಮಾಗೆ ತುಂಬಾವಿಭಿನ್ನವಾಗಿ ಕಾಣಿಸಿಕೊಳ್ಳಬೇಕು ಎಂದು ತಮ್ಮ ಫಿಟ್ ನೆಸ್ ಅನ್ನು ಕಾಪಾಡಿಕೊಂಡು ತಮ್ಮ ಅಭಿಮಾನಿಗಳ ಮನದಲ್ಲಿ ಗಟ್ಟಿಯಾದ ಸ್ಥಾನ ಪಡೆದುಕೊಂಡಿದ್ದಾರೆ.

ಅದೇ ರೀತಿಯಾಗಿ ಅತೀ ಕಿರಿಯ ವಯಸ್ಸಿನಲ್ಲಿಯೇ ಚಿತ್ರರಂಗದಲ್ಲಿ ಅಪಾರ ಜನಪ್ರಿಯತೆ ಪಡೆದ ನಟಿಯರಾಗಿರುವ ಕನ್ನಡದ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಇಪ್ಪತ್ತೈದು ವರ್ಷ ವಯಸ್ಸಾಗಿದೆ, ತೆಲುಗು ಭಾಷೆಯ ನಟಿ ಸಾಯಿ ಪಲ್ಲವಿ ಅವರಿಗೆ ಇಪ್ಪತ್ತಾರು ವಯಸ್ಸಾಗಿದೆ. ಇಂದಿಗೂ ಕೂಡ ನಟಿ ಸಾಯಿ ಪಲ್ಲವಿ ಅವರು ತಮ್ಮ ಸಹಜ ನಟನೆ, ನೃತ್ಯದ ಮೂಲಕ ಬಹು ಬೇಡಿಕೆಯ ನಟಿಯಾಗಿಮಿಂಚಚುತ್ತಿದ್ದಾರೆ. ಅದೇ ರೀತಿ ಕಾಜಲ್ ಅಗರ್ವಾಲ್ ಮೂವತ್ತಾರು ವಯಸ್ಸಾದರೂ ಕೇವಲ ಇಪ್ಪತ್ತಾರಂತೆ ಕಾಣುತ್ತಾರೆ. ಆಪಲ್ ಬ್ಯೂಟಿ ಸಮಂತಾ ಮೂವತ್ನಾಲ್ಕು ವರ್ಷದವರರಾಗಿದ್ದರು ಕೂಡ ತಮ್ಮ ದೇಹ ಸೌಂದರ್ಯವನ್ನು ಉತ್ತಮವಾಗಿ ಕಾಪಾಡಿಕೊಂಡಿದ್ದಾರೆ.