ಖ್ಯಾತ ನಟಿ ಶ್ರುತಿ ಹರಿಹರನ್ ಬಗ್ಗೆ ಶಾಕಿಂಗ್ ಸುದ್ದಿ ತಿಳಿಸಿದ ನಟಿ ಮೋಹಕತಾರೆ ರಮ್ಯಾ

ವೈವಿಧ್ಯಮಯ ಪಾತ್ರಗಳ ಮೂಲಕ ಸ್ಯಾಂಡಲ್ ವುಡ್ ನ ವಿಭಿನ್ನ ನಟಿ ಎಂದೇ ಹೆಸರಾದ ಶೃತಿ ಹರಿಹರನ್ ಅವರ ಬಗ್ಗೆ ಬ್ಯೂಟಿ ಕ್ವೀನ್ ಏನ್ ಹೇಳಿದ್ರು ಗೊತ್ತಾ..! ಚಂದನವನದಲ್ಲಿ ಇತ್ತೀಚೆಗೆ ಹೊಸದೊಂದು ಸುದ್ದಿ ಹರಿದಾಡುತ್ತಿದೆ. ಈ ಸುದ್ದಿ ನಿಜವಾಗಲಿ ಎಂದು ಈ ಖ್ಯಾತ ನಟಿಯ ಅಭಿಮಾನಿಗಳು ನಿರೀಕ್ಷೆ ಮಾಡುತ್ತಿದ್ದಾರೆ. ಇದರ ನಡುವೆ ಈ ಪ್ರಸಿದ್ದ ನಟಿ ಇನ್ನೊಬ್ಬ ನಟಿಯ ಬಗ್ಗೆ ಟ್ವೀಟ್ ಮಾಡಿ ಸುದ್ದಿಯಾಗಿದ್ದಾರೆ. ಹಾಗಾದರೆ ಆ ಸುಪ್ರಸಿದ್ದ ನಟಿ ಯಾವ ನಟಿಯ ಬಗ್ಗೆ ಏನು ಟ್ವೀಟ್ ಮಾಡಿದ್ದಾರೆ ಎಂಬುದನ್ನ ತಿಳಿಯೋಣ. ಹೌದು ಇತ್ತೀಚೆಗೆ ಸ್ಯಾಂಡಲ್ ವುಡ್ ಎವರ್ಗೀನ್ ಬ್ಯೂಟಿ ಕ್ವೀನ್ ನಟಿ ರಮ್ಯಾ ಅವರು ಮತ್ತು ಬಣ್ಣದ ಲೋಕಕ್ಕೆ ಮರು ಪ್ರವೇಶ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ. ಅದಕ್ಕೆ ಪೂರಕವಾಗಿ ನಟಿ ರಮ್ಯಾ ಅವರು ಕೂಡ ಕನ್ನಡದ ಅನೇಕ ಸಿನಿಮಾಗಳ ಪ್ರಮೋಶನ್ ಮತ್ತು ಆ ಚಿತ್ರಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡು ಪ್ರಚಾರ ಕೂಡ ಮಾಡುತ್ತಿದ್ದಾರೆ.

ಅದರ ಜೊತೆ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ರಮ್ಯಾ ಅವರು ಇತ್ತೀಚೆಗೆ ಸಮಾಜದಲ್ಲಿ ಆಗುತ್ತಿರುವ ಪ್ರಚಲಿತ ಘಟನೆಗಳ ಬಗ್ಗೆ ಕೂಡ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ವರ್ಚಸ್ಸನ್ನು ಮತ್ತಷ್ಟು ವೃದ್ದಿಸಿಕೊಳ್ಳುತ್ತಿದ್ದಾರೆ. ಅದರಂತೆ ಇತ್ತೀಚೆಗೆ ನಟಿ ಶೃತಿ ಹರಿಹರನ್ ಅವರ ಇನ್ಸ್ಟಾ ಗ್ರಾಮ್ ಅಕೌಂಟ್ ನಿಂದ ತಮಗೊಂದು ಲಿಂಕ್ ಮೆಸೆಜ್ ಬಂದಿರುವ ಬಗ್ಗೆ ತಿಳಿಸಿದ್ದಾರೆ. ಇದರಲ್ಲಿ ಈ ಲಿಂಕ್ ಓಪನ್ ಮಾಡಿ ಎಂದುತಿಳಿಸಿದ್ದಾರಂತೆ. ಇದರ ಬಗ್ಗೆ ಅನುಮಾನ ವ್ಯಕ್ತಪಡಿಸಿದ ರಮ್ಯಾ ಅವರು ಉತ್ತರಿಸದೆ ಶೃತಿ ಹರಿಹರನ ಅವರ ಅಕೌಂಟ್ ಹ್ಯಾಕ್ ಆಗಿರುವುದರ ಬಗ್ಗೆ ಖಚಿತ ಪಡಿಸಿಕೊಂಡು ಇದನ್ನ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಅದರಂತೆ ನಟಿ ಶೃತಿ ಹರಿಹರನ್ ಅವರು ಕೂಡ ತಮ್ಮ ಇನ್ಸ್ಟಾ ಗ್ರಾಮ್ ಖಾತೆ ಹ್ಯಾಕ್ ಆಗಿದ್ದುದರ ಬಗ್ಗೆ ಮಾಹಿತಿ ನೀಡಿ ದ್ದಾರೆ. ಒಟ್ಟಾರೆಯಾಗಿ ರಮ್ಯಾ ಅವರು ಶೃತಿ ಹರಿಹರನ್ ಅವರ ಹೆಸರನ್ನ ಮೆನ್ಶನ್ ಮಾಡಿ ನಾನೀಗ ಶೃತಿ ಹರಿಹರನ್ ಅವರನ್ನ ಭೇಟಿ ಆಗಲು ಸಾಧ್ಯವಿಲ್ಲ ಎಂದು ತಮಗೆ ಬಂದ ಫೇಕ್ ಲಿಂಕ್ ಮೆಸೆಜ್ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ ಮತ್ತು ಲೈಕ್ ಮಾಡಿ.