ಖ್ಯಾತ ನಟಿ ಪ್ರಿಯಾಮಣಿ ಅಸಲಿಗೆ ಮದುವೆ ಆಗಿದ್ದು ಯಾರನ್ನ ಗೊತ್ತಾ? ಹೊರಬಂತು ಅಸಲಿ ಸತ್ಯ

ದಕ್ಷಿಣ ಭಾರತದ ಸುಪ್ರಸಿದ್ದ ರಾಷ್ಟ್ರ ಪ್ರಶಸ್ತಿ ವಿಜೇತೆ ನಟಿ ಪ್ರಿಯಾಮಣಿ ಅವರ ದಾಂಪತ್ಯ ಜೀವನದಲ್ಲಿ ತೊಡಕು ಉಂಟಾಗಿದ್ಯ..! ಹೌದು ಅನೇಕ ಸಿನಿಮಾ ಸೆಲೆಬ್ರಿಟಿಗಳು ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ವೈಯಕ್ತಿಕ ಬದುಕಿನ ವಿಚಾರವಾಗಿ ಭಾರಿ ಸುದ್ದಿಯಾಗುತ್ತಾರೆ. ಅದು ಅವರು ಉದ್ದೇಶ ಪೂರ್ವಕವಾಗಿ ಮಾಡದಿದ್ದರು ಜೀವನದಲ್ಲಿ ಎದುರಾಗುವ ಕೆಲವು ಅನಿರೀಕ್ಷಿತ ಘಟನೆಗಳು ಅವರನ್ನ ಕುಗ್ಗಿಸಿ ಬಿಡುತ್ತವೆ. ಇದೀಗ ಅಂತದೇ ಸಮಸ್ಯೆಗೆ ನಟಿ ಪ್ರಿಯಾಮಣಿ ಕೂಡ ಒಳಗಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಹೌದು ನಟಿ ಪ್ರಿಯಾಮಣಿ 2017 ರಲ್ಲಿ ಮುಸ್ತಫಾ ಎಂಬುವರನ್ನ ಪ್ರೀತಿಸಿ ಅತ್ಯಂತ ಸರಳವಾಗಿ ಮದುವೆಯಾದರು. ಇವರ ಮದುವೆ ಸಾಕಷ್ಟು ಚರ್ಚೆಗೆ ಕೂಡ ಒಳಪಟ್ಟಿತು. ಕಾರಣ ಹಿಂದೂ ಧರ್ಮದವರಾಗಿರುವ ನಟಿ ಪ್ರಿಯಾಮಣಿ ಮುಸ್ಲಿಂ ಧರ್ಮದ ಮುಸ್ತಫಾ ಅವರನ್ನ ಮದುವೆ ಆಗುತ್ತಾರೆ.

ಹಾಗಾಗಿ ನಟಿ ಪ್ರಿಯಾಮಣಿ ಅವರ ಮೇಲೆ ಆ ಸಂಧರ್ಭದಲ್ಲಿ ಅವರ ಅಭಿಮಾನಿಗಳು ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಸಾಕಷ್ಟು ಪರ- ವಿರೋಧ ಟೀಕೆಗಳನ್ನು ಮಾಡಿದರು‌. ಇದೀಗ ಹೊಸ ತಿರುವು ಏನಪ್ಪಾ ಅಂದರೆ ಪ್ರಿಯಾಮಣಿ ಅವರ ಮೇಲೆ ಮುಸ್ತಫಾ ಅವರ ಮೊದಲ ಪತ್ನಿ ಆಯೇಷಾ ಕ್ರಿಮಿನಲ್ ಕೇಸ್ ದಾಖಲು ಮಾಡಿದ್ದಾರಂತೆ. ಅದಕ್ಕೂ ಮುನ್ನ ಕೆಲವು ತಿಂಗಳ ಹಿಂದೆಯಷ್ಟೇ ನಟಿ ಪ್ರಿಯಾಮಣಿ ಅವರು ತಮ್ಮ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿದರು ಎಂಬ ಸುದ್ದಿ ಭಾರಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಸ್ವತಃ ಪ್ರಿಯಾಮಣಿ ಅವರೇ ನಾನು ಹಾಗೂ ನನ್ನ ಪತಿ ಮುಸ್ತಫಾ ನಾವಿಬ್ಬರು ಅನೂನ್ಯತೆಯಿಂದ ಚೆನ್ನಾಗಿಯೇ ಇದ್ದೇವೆ. ನಮ್ಮಿಬ್ಬರ ನಡುವೆ ಯಾವುದೇ ರೀತಿಯ ಮುನಿಸಿಲ್ಲ ಎಂದು ಪ್ರಿಯಾಮಣಿ ತಮ್ಮ ಪತಿ ಮುಸ್ತಫಾ ಅವರೊಟ್ಟಿಗಿರುವ ಫೋಟೋವೊಂದನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿ ಸ್ಪಷ್ಟನೆ ನೀಡಿದ್ದರು.

ಇದೀಗ ಪ್ರಿಯಾಮಣಿ ಪತಿ ಮುಸ್ತಫಾ ಅವರ ಮೊದಲ ಪತ್ನಿಯಾದ ಆಯೇಷಾ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿದ್ದಾರೆ. ಹೌದು ಮುಸ್ತಫಾ ಅವರು ಪ್ರಿಯಾಮಣಿಯವರನ್ನು ಮದುವೆ ಆಗುವ ಮೊದಲು ಆಯೇಷಾ ಎಂಬುವವರ ಜೊತೆ ವಿವಾಹವಾಗಿದ್ದರು‌.ಇವರ ದಾಂಪತ್ಯ ಸಂಸಾರಕ್ಕೆ ಸಾಕ್ಷಿಯಾಗಿ ಇಬ್ಬರು ಮಕ್ಕಳು ಕೂಡ ಇದ್ದಾರೆ. ಹೀಗಿರುವಾಗ ಮುಸ್ತಫಾ ಅವರು ಕೆಲವು ವೈಯಕ್ತಿಕ ಕಾರಣಗಳಿಂದ ಆಯೇಷಾ ಅವರಿಂದ ವಿಚ್ಚೇದನ ಪಡೆಯದೇ ದೂರವಾಗಿದ್ದರು. ಇದರ ನಡುವೆ ಮುಸ್ತಫಾ ನಟಿ ಪ್ರಿಯಾಮಣಿಯವರನ್ನು 2017 ರಲ್ಲಿ ವಿವಾಹವಾದರು. ಇದೀಗ ಮುಸ್ತಫಾ ಅವರ ಮೇಲೆ ಮೊದಲ ಪತ್ನಿ ಆಯೇಶಾ ನನ್ನ ಪತಿ ನನಗೆ ವಿಚ್ಚೇದನ ನೀಡದೇ ಪ್ರಿಯಾಮಣಿ ಅವರನ್ನು ಮದುವೆ ಆಗಿದ್ದಾರೆ.

ಹೀಗಾಗಿ ಅವರಿಬ್ಬರ ಮದುವೆ ವಿವಾಹ ಅಸಿಂಧು ಎಂದು ಮಾಧ್ಯಮಗಳ ಮುಂದೆ ಬಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ನಾವಿಬ್ಬರು ಕಾನೂನಾತ್ಮಕವಾಗಿ ನಾವಿಬ್ಬರು ಸತಿ-ಪತಿಗಳಾಗಿಯೇ ಉಳಿದಿದ್ದೇವೆ ಎಂದು ಅಳಲು ತೋಡಿಕೊಂಡು ತನ್ನ ಗಂಡ ಮುಸ್ತಫಾ ವಿರುದ್ದ ಮತ್ತು ನಟಿ ಪ್ರಿಯಾಮಣಿ ವಿರುದ್ದ ಆರೋಪ ಮಾಡಿದ್ದಾರೆ. ಆದರೆ ಇದಕ್ಕೆ ಮುಸ್ತಫಾ ಅವಲು ನಾನು ನನ್ನ ಮೊದಲ ಪತ್ನಿ ಆಯೇಷಾ ಅವರಿಂದ 2013 ರಲ್ಲಿಯೇ ದೂರ ಆಗಿ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದೇವೆ. 2017 ರಲ್ಲಿ ಅವರಿಗೆ ವಿಚ್ಚೇದನ ನೀಡಿದ್ದೇನೆ. ಜೊತೆಗೆ ಅವರಿಗೆ ಜೀವನಾಂಶದ ಜೊತೆಗೆ ನನ್ನಿಬ್ಬರ ಮಕ್ಕಳ ಖರ್ಚು-ವೆಚ್ಚಗಳನ್ನು ನಾನೇ ನೋಡಿಕೊಳ್ಳುತ್ತಿದ್ದೇನೆ. ಆದರೆ ಈಗ ರೀತಿಯಾಗಿ ಆರೋಪ ಮಾಡುತ್ತಿರುವುದು ನನ್ನಿಂದ ಮತ್ತಷ್ಟು ಹೆಚ್ಚುವರಿ ಹಣ ಪಡೆಯುವ ಉದ್ದೇಶದಿಂದಾಗಿ ಈ ರೀತಿಯಾಗಿ ನನ್ನ ವಿರುದ್ದ ಅನಾವಶ್ಯಕವಾಗಿ ಆರೋಪ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಇತ್ತ ಮುಸ್ತಫ ಅವರನ್ನು ಮದುವೆ ಆಗಿರುವ ನಟಿ ಪ್ರಿಯಾಮಣಿ ಇದಕ್ಕೆ ನಮ್ಮ ದಾಂಪತ್ಯ ಸುಭದ್ರವಾಗಿದೆ ನಾನು ಮತ್ತು ನನ್ನ ಪತಿ ಮುಸ್ತಫಾ ರ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇಲ್ಲ. ನಾವಿಬ್ಬರು ಚೆನ್ನಾಗಿದ್ದೇವೆ ಮುಸ್ತಫಾ ಅವರು ನನ್ನ ಜೀವನಕ್ಕೆ ಬಂದ ನಂತರ ನನ್ನ ಬದುಕು ಕೂಡ ಸುಂದರವಾಗಿದೆ. ನನಗೆ ಅವರು ಸಿಕ್ಕಿದ್ದು ಅದೃಷ್ಟ ಎಂದು ತಮ್ಮ ಮನದಾಳದ ಮಾತನ್ನ ತಿಳಿಸಿದ್ದಾರೆ. ಆದರೂ ಕೂಡ ನಟಿ ಪ್ರಿಯಾಮಣಿ ಅವರು ತಮ್ಮ ಸಿನಿ ಕೆರಿಯರ್ ನಲ್ಲಿ ಯಶಸ್ವಿಯಾಗಿ ತಮ್ಮ ವೈಯಕ್ತಿಕ ಬದುಕಿನಲ್ಲಿ ಎಲ್ಲೋ ಒಂದು ಕಡೆ ಎಡವಿದರಾ ಎಂದು ಅವರ ಅಭಿಮಾನಿಗಳು ಪ್ರಶ್ನೆ ಹಾಕಿದ್ದಾರೆ.

Leave a Reply

%d bloggers like this: