ಖ್ಯಾತ ನಟ ಸತೀಶ್ ನೀನಾಸಂ ಹೆಂಡತಿ ಯಾರು ಗೊತ್ತಾ? ನೋಡಿ ಒಮ್ಮೆ

ಸ್ಯಾಂಡಲ್ ವುಡ್ ಈ ಸ್ಟಾರ್ ನಟನಿಗೆ ಮದುವೆ ಆಗಿ ಒಂದು ಮಗು ಕೂಡ ಇದೆ. ಆದರೆ ಈ ವಿಚಾರ ಬಹುತೇಕ ಮಂದಿಗೆ ತಿಳಿದೇ ಇರಲಿಲ್ಲ. ಹಾಗಾದರೆ ಆ ನಟ ಏಕೆ ತಮ್ಮ ಮದುವೆಯ ಬಗ್ಗೆ ಗೌಪ್ಯತೆ ಕಾಪಾಡಿಕೊಂಡಿದ್ದರು. ಸಾಮಾನ್ಯವಾಗಿ ಸಿನಿಮಾ ಸೆಲೆಬ್ರಿಟಿಗಳು ಅಂದಾಕ್ಷಣ ಅವರ ವಿಚಾರಗಳ ಬಗ್ಗೆ ತಿಳಿದುಕೊಳ್ಳಲು ಬಹಳ ಕಾತುರ ಇರುತ್ತದೆ.ತಮ್ಮ ನೆಚ್ಚಿನ ನಟ-ನಟಿಯರ ಸಿನಿಮಾಗಳ ಬಗ್ಗೆ ಇರುವಂತಹ ಕುತೂಹಲಕ್ಕಿಂತ ಅವರ ವೈಯಕ್ತಿಕ ಬದುಕಿನ ವಿಚಾರಗಳ ಬಗ್ಗೆ ತಿಳಿದುಕೊಳ್ಳಲು ಜನ ಸಾಮಾನ್ಯರು ಬಹಳ ಉತ್ಸುಕರಾಗಿರುತ್ತಾರೆ. ಬಹುತೇಕ ಸಿನಿಮಾ ಸ್ಟಾರ್ಸ್ಸ್ ಗಳು ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಆಗಾಗ ಒಂದಷ್ಟು ಮಾಹಿತಿಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಈ ಸಿನಿಮಾ ಮತ್ತು ರಾಜಕೀಯ ಅಂತಹ ಸಾರ್ವಜನಿಕ ಕ್ಷೇತ್ರಗಳಿಗೆ ಪ್ರವೇಶ ಪಡೆದ ಮೇಲೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮುಚ್ಚಿಡುವುದು ಬಹಳ ಕಷ್ಟವೇ ಎನ್ನಬಹುದು.

ಆದರೆ ಕೆಲವು ಕಲಾವಿದರು ಮಾತ್ರ ತಮ್ಮ ಸಿನಿಮಾ ವಿಷಯವನ್ನು ಹೊರತು ಪಡಿಸಿ ಉಳಿದಂತೆ ತಮ್ಮ ವೈಯಕ್ತಿಕ ಜೀವನವನ್ನು ತುಂಬಾ ರಹಸ್ಯವಾಗಿಯೇ ಇಟ್ಟಿರುತ್ತಾರೆ. ಅಂತಹ ನಟರ ಪಾಲಿಗೆ ಸೇರಿದ್ದರು ನಟ ನೀನಾಸಂ ಸತೀಶ್. ಏಕೆಂದರೆ ನಟ ನೀನಾಸಂ ಸತೀಶ್ ತಮ್ಮ ಮದುವೆಯ ಬಗ್ಗೆ ಎಲ್ಲಿಯೂ ಕೂಡ ಸಾರ್ವಜನಿಕವಾಗಿ ಮಾತಾಡಿರಲಿಲ್ಲ. ಅದು ಅವರವರ ಅಭಿಪ್ರಾಯ ಆಗಿರುತ್ತದೆ. ಹಾಗಾಗಿ ನೀನಾಸಂ ಸತೀಶ್ ಅವರಿಗೆ ಮದುವೆ ಆಗಿದೆ ಎಂಬುದು ಸ್ವತಃ ಗಾಂಧಿನಗರದವರಿಗೇನೇ ತಿಳಿದಿರಲಿಲ್ಲ. ತನ್ನ ವಿಶಿಷ್ಟ ನಟನೆ ಗ್ರಾಮೀಣ ಸೊಗಡಿನ ಭಾಷೆಯ ಮೂಲಕ ಕನ್ನಡ ಸಿನಿ ಪ್ರೇಕ್ಷಕರ ಮನ ಗೆದ್ದಿರುವ ನಟ ನೀನಾಸಂ ಸತೀಶ್ ಅವರು ಜನಪ್ರಿಯತೆ ಗಳಿಸಿ ಕನ್ನಡದ ಬೇಡಿಕೆಯ ನಟರ ಪೈಕಿ ಇವರು ಕೂಡ ಒಬ್ಬರಾಗಿದ್ದಾರೆ. ಇತ್ತೀಚೆಗೆ ನೀನಾಸಂ ಸತೀಶ್ ಅವರು ಅಭಿನಯದ ಅಯೋಗ್ಯ ಸಿನಿಮಾದ ಹಾಡು ಬರೋಬ್ಬರಿ ನೂರು ಮಿಲಿಯನ್ ವೀಕ್ಷಣೆ ಪಡೆದು ದಾಖಲೆ ಮಾಡಿದೆ. ಅದರ ಸಂಭ್ರಮಾಚರಣೆ ಕಾರ್ಯಕ್ರಮ ಕೂಡ ಇತ್ತೀಚೆಗೆ ನಡೆದಿದೆ.

ಇನ್ನು ಸೋಶೀಯಲ್ ಮೀಡಿಯಾದಲ್ಲಿ ಸಕ್ರೀಯರಾಗಿ ತೊಡಗಿಸಿಕೊಂಡಿರುವ ನೀನಾಸಂ ಸತೀಶ್ ಅವರು ಇತ್ತೀಚೆಗೆ ತಮ್ಮ ಮಗಳ ಫೋಟೋ ಶೇರ್ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಹೌದು ಸತೀಶ್ ಅವರು ತಮ್ಮ ಮುದ್ದು ಮಗಳ ಆರನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಮಗುವಿನ ಫೋಟೋವೊಂದನ್ನ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸತೀಶ್ ಅವರು ಮಗಳ ಫೋಟೋ ಶೇರ್ ಮಾಡಿದ್ದನ್ನ ನೋಡಿ ಬಹುತೇಕರಿಗೆ ಅಚ್ಚರಿ ಅಗಿದ್ದಂತೂ ಸತ್ಯ. ಏಕೆಂದರೆ ಅವರಿಗೆ ಮದುವೆ ಆಗಿದೆ ಎಂಬ ವಿಷಯ ಅನೇಕರಿಗೆ ತಿಳಿದೇ ಇಲ್ಲ. ಸತೀಶ್ ಅವರು ಕೂಡ ಈ ಬಗ್ಗೆಯೂ ಎಲ್ಲಿಯೂ ಕೂಡ ತಿಳಿಸಿರಲಿಲ್ಲ. ಈ ಬಗ್ಗೆ ಅವರೇ ಸ್ವತಃ ತುಂಬಾ ಅಭಿಮಾನಿಗಳ ಒತ್ತಾಯದ ಮೇರೆಗೆ ನನ್ನ ಮಗಳ ಫೋಟೋವನ್ನು ಶೇರ್ ಮಾಡಿದ್ದೇನೆ. ಐದನೇ ವರ್ಷ ಪೂರೈಸಿ ಆರನೇ ವರ್ಷಕ್ಕೆ ಮಗಳು ಮನಸ್ವಿತ ಹೆಜ್ಜೆ ಇಡುತ್ತಿದ್ದಾಳೆ. ಅವಳಿಗೆ ಶುಭ ಹಾರೈಸಿ ಎಂದು ತಮ್ಮ ಪತ್ನಿ ಸುಪ್ರಿತಾ ಅವರ ಹೆಸರನ್ನ ಕೂಡ ಟ್ಯಾಗ್ ಮಾಡಿದ್ದಾರೆ.