ಖ್ಯಾತ ನಟ ಡಾಲಿ ಧನಂಜಯ ಅವರ ಕ್ರಶ್ ಯಾರು ಗೊತ್ತಾ? ಖ್ಯಾತ ನಟಿ.. ನೋಡಿ ಒಮ್ಮೆ

ನಟ ರಾಕ್ಷಸ ಡಾಲಿ ಧನಂಜಯ್ ಅವರಿಗೆ ಕ್ರಶ್ ಆಗಿತ್ತಂತೆ.ಆದರೆ ತನಗಿಂತ ಚಿಕ್ಕ ವಯಸ್ಸಿನವರು ಎಂದು ಹಿಂದೆ ಸರಿದರಂತೆ.ಹಾಗಾದರೆ ಈ ಬಡವ ರಾಸ್ಕಲ್ ನ ಸೆಳೆದ ಆ ಚೆಲುವೆ ಯಾರು ಗೊತ್ತಾ. ಡೈರೆಕ್ಟರ್ ಸ್ಪೆಷಲ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ನಟ ಧನಂಜಯ್ ಅಲ್ಲಮನಾಗಿ,ಜೆಸ್ಸಿ ಚಿತ್ರದಲ್ಲಿ ದೆವ್ವದ ಪಾತ್ರವಾಗಿ, ರಾಟೆ ಚಿತ್ರದಲ್ಲಿ ಮುಗ್ದ ಪ್ರೇಮಿಯಾಗಿ,ಟಗರು ಸಿನಿಮಾದಲ್ಲಿ ಡಾಲಿ ಅಂತಹ ಟೆರರ್ ಪಾತ್ರದಲ್ಲಿ,ಇತ್ತೀಚೆಗೆ ತೆರೆಕಂಡ ರತ್ನನ್ ಪ್ರಪಂಚ ಚಿತ್ರದಲ್ಲಿ ಮಧ್ಯಮ ವರ್ಗದ ರತ್ನನ ಪಾತ್ರ,ಸಲಗ ಚಿತ್ರದಲ್ಲಿ ಸಾಮ್ರಾಟ್ ಅಂತಹ ಖಡಕ್ ಪೊಲೀಸ್ ಪಾತ್ರ ಹೀಗೆ ವೈವಿಧ್ಯಮಯ ಪಾತ್ರಗಳಲ್ಲಿ ನಟಿಸಿ ವಿಭಿನ್ನ ನಟ ರಾಕ್ಷಸ ಡಾಲಿ ಎಂದೇ ಕರೆಸಿಕೊಳ್ಳುವ ನಟ ಧನಂಜಯ್ ಅವರಿಗೂ ಕೂಡ ಕ್ರಶ್ ಆಗಿತ್ತಂತೆ. ನಟ ಧನಂಜಯ್ ಅವರಿಗೆ ಮೂವತ್ನಾಲ್ಕು ವರ್ಷ ವಯಸ್ಸಾಗಿದ್ದರು ಕೂಡ ಇನ್ನು ಬ್ಯಾಚುಲರ್ ಆಗಿಯೇ ಇದ್ದಾರೆ. ಆಗಂತ ಅವರಿಗೆ ಇಷ್ಟವಾಗುವಂತಹ ಹುಡುಗಿ ಸಿಕ್ಕಿಲ್ಲ ಅಂತ ಅಲ್ಲ.ಅವರಿಗೆ ಈಗಾಗಲೇ ಕ್ರಶ್ ಆಗಿದೆಯಂತೆ.

ಧನಂಜಯ್ ಅವರು ಸದ್ಯಕ್ಕೆ ಸ್ಯಾಂಡಲ್ ವುಡ್ ನ ಬೇಡಿಕೆಯ ನಟರಾಗಿ ಗುರುತಿಸಿಕೊಂಡಿದ್ದಾರೆ.ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.ಇತ್ತೀಚೆಗೆ ಅವರ ಅಭಿನಯದ ಸಲಗ,ರತ್ನನ್ ಪ್ರಪಂಚ ಸಿನಿಮಾಗಳು ಸೂಪರ್ ಹಿಟ್ ಆಗಿವೆ.ಇನ್ನು ಅವರ ನಟನೆ ಮತ್ತು ನಿರ್ಮಾಣದ ಬಡವ ರಾಸ್ಕಲ್ ಚಿತ್ರ ಮುಂದಿನ ತಿಂಗಳು ಡಿಸೆಂಬರ್ ಕ್ರಿಸ್ಮಸ್ ಹಬ್ಬಕ್ಕೆ ತೆರೆಗೆ ಬರಲಿದೆ ಎಂದು ತಿಳಿದು ಬಂದಿದೆ.ಈಗಾಗಲೇ ಬಡವ ರಾಸ್ಕಲ್ ಚಿತ್ರದ ಹಾಡೊಂದು ಜನ ಮೆಚ್ಚುಗೆ ಪಡೆದುಕೊಂಡಿದೆ.ಈ ಹಾಡಿಗೆ ಸ್ವತಃ ಧನಂಜಯ್ ಅವರೇ ಸಾಹಿತ್ಯ ಬರೆದಿದ್ದು,ವಾಸುಕಿ ವೈಭವ್ ಗಾಯನ ಮಾಡಿದ್ದಾರೆ.ಇನ್ನು ಹೆಡ್ ಬುಷ್,ಮಾನ್ಸುನ್ ರಾಗ,ಡಾಲಿ,ತೆಲುಗಿನಲ್ಲಿ ಪುಷ್ಪಾ ಅಂತಹ ಅನೇಕ ಚಿತ್ರಗಳಲ್ಲಿ ಬಿಝಿ಼ ಆಗಿರುವ ಧನಂಜಯ್ ಅವರಿಗೆ ಅವರ ತಾಯಿ ಮದುವೆ ಆಗುವಂತೆ ಒತ್ತಾಯ ಮಾಡುತ್ತಿದ್ದಾರಂತೆ.ಧನಂಜಯ್ ಅವರು ಕೂಡ ತಮ್ಮ ಮನೆಯಲ್ಲಿ ನೋಡುವಂತಹ ಹುಡುಗಿಯನ್ನೇ ಮದುವೆ ಆಗಲಿದ್ದಾರಂತೆ.

ಈ ನಡುವೆ ಲಾಕ್ ಡೌನ್ ಸಂಧರ್ಭದಲ್ಲಿ ಧನಂಜಯ್ ಅವರು ತಮ್ಮ ಊರಿನಲ್ಲಿದ್ದರು‌.ಇದಾದ ಖಾಸಗಿ ವಾಹಿನಿಯ ಶೋ ವೊಂದರಲ್ಲಿ ಧನಂಜಯ್ ಅವರು ಸ್ವಾರಸ್ಯಕರ ವಿಚಾರವೊಂದನ್ನು ತೆರೆದಿಟ್ಟಿದ್ದರು. ಅದೇನಪ್ಪಾ ಅಂದರೆ ಅವರಿಗೆ ಬಾಕ್ಸರ್ ಚಿತ್ರದ ನಾಯಕಿ ನಟಿ ಕೃತಿಕಾ ಜೈ ಕುಮಾರ್ ಅವರ ಮೇಲೆ ಕ್ರಶ್ ಆಗಿತ್ತಂತೆ.ನಟ ಧನಂಜಯ್ ಅವರು ಇದುವರೆಗೂ ಯಾವುದೇ ಹುಡುಗಿಯ ಹೆಸರಿನೊಂದಿಗೆ ತಳುಕು ಹಾಕಿಕೊಂಡಿಲ್ಲ.ಈ ಈ ಶೋ ನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ನಿರೂಪಕರಾಗಿರುತ್ತಾರೆ. ಧನಂಜಯ್ ಅವರಿಗೆ ನಿಮ್ಮ ಕ್ರಷ್ ಯಾರು ಎಂದು ಪ್ರಶ್ನೆ ಕೇಳುತ್ತಾರೆ.ಅದಕ್ಕೆ ಧನಂಜಯ್ ಅವರು ತಾವು ನಾಯಕ ನಟರಾಗಿ ನಟಿಸುತ್ತಿದ್ದ ಬಾಕ್ಸರ್ ಸಿನಿಮಾದ ನಾಯಕಿ ಕೃತಿಕಾ ಜೈ ಶಂಕರ್ ಅವರ ಮೇಲೆ ನನಗೆ ಕ್ರಶ್ ಆಗಿತ್ತು.ಆದರೆ ಅವರು ನನಗೆ ಯಾಕೋ ಚಿಕ್ಕ ಹುಡುಗಿಯಂತೆ ಕಂಡರು.ಹಾಗಾಗಿ ಸುಮ್ಮನಾದೆ.ನಾನು ಅವರನ್ನು ಆ ಬಾಕ್ಸರ್ ಚಿತ್ರೀಕರಣದುದ್ದಕ್ಕೂ ಮಾತನಾಡಿಸಿಯೇ ಇಲ್ಲ ಎಂದು ಹೇಳಿದ್ದರು.

Leave a Reply

%d bloggers like this: