ಖ್ಯಾತ ನಟ ಅನಂತ್ ನಾಗ್ ಮಗಳು ಮದುವೆಯಾಗಿರುವುದು ಯಾರನ್ನ ಅಂತ ಈಗಲೂ 99% ಜನರಿಗೆ ಗೊತ್ತಿಲ್ಲ

ಚಂದನವನದ ಸಹಜ ನಟರೆಂದೇ ಹೆಸರಾದ ಸುಪ್ರಸಿದ್ದ ನಟ ಅನಂತ್ ನಾಗ್ ಅವರು ಕನ್ನಡ ಸಿನಿ ಪ್ರೇಕ್ಷಕರ ಮನದಲ್ಲಿ ಉನ್ನತ ಸ್ಥಾನ ಪಡೆದಿದ್ದಾರೆ.ಕೌಟುಂಬಿಕ ಜೀವನದ ಬಗ್ಗೆ ಬಹುತೇಕರಿಗೆ ತಿಳಿದಿಲ್ಲ.ಅದಕ್ಕೆ ಪ್ರಮುಖ ಕಾರಣ ಅನಂತ್ ನಾಗ್ ಅವರು ಸಿನಿಮಾ ಪ್ರಚಾರದ ಸಮಯ ಹೊರತುಪಡಿಸಿ ಅನಾವಶ್ಯಕವಾಗಿ ಸಾರ್ವಜನಿಕ ವೇದಿಕೆಗಳಲ್ಲಿ, ಕಾರ್ಯಕ್ರಮ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ.ತಾವಾಯಿತು ತಮ್ಮ ನಟನಾ ವೃತ್ತಿ ಬದುಕಾಯಿತು ಎಂಬಂತಿರುವ ಅನಂತ್ ನಾಗ್ ಅವರಿಗೆ ಕನ್ನಡ ಚಿತ್ರರಂಗದಲ್ಲಿ ಅಪಾರ ಗೌರವ ಸ್ಥಾನ ಮಾನವಿದೆ. ತಮ್ಮ ವೃತ್ತಿ ಜೀವನ ಅಥವಾ ವೈಯಕ್ತಿಕ ಬದುಕಿನಲ್ಲಿ ಯಾವುದೇ ರೀತಿಯ ವಿವಾದ ಗಲಾಟೆಗಳಿಗೆ ತಳುಕು ಹಾಕಿಕೊಳ್ಳದೆ ಎಲ್ಲರೊಂದಿಗೆ ಸೌಮ್ಯವಾಗಿ ವರ್ತಿಸಿ ಅಜಾತಶತ್ರುವಾಗಿ ಗುರುತಿಸಿಕೊಂಡಿದ್ದಾರೆ. ಇಂದಿಗೂ ಕೂಡ ಅವರ ಕುಟುಂಬ ಮತ್ತು ಆಪ್ತರನ್ನು ಹೊರತುಪಡಿಸಿ ಕನ್ನಡ ಚಲನಚಿತ್ರರಂಗದ ಬಹುತೇಕರಿಗೆ ಅನಂತ್ ನಾಗ್ ಅವರು ಒಬ್ಬ ನಟ ಅನ್ನುವುದನ್ನ ಬಿಟ್ಟರೆ ಅವರ ಬಗ್ಗೆ ಹೆಚ್ಚು ತಿಳಿದವರು ತೀರಾ ಕಡಿಮೆ.

ಅಷ್ಟರ ಮಟ್ಟಿಗೆ ಸಭ್ಯ ಸೌಮ್ಯ ಗಾಂಭೀರ್ಯತೆ ಗುಣಗಳನ್ನು ಅಳವಡಿಸಿಕೊಂಡಿರುವ ಅನಂತ್ ನಾಗ್ ಅವರ ವೈಯಕ್ತಿಕ ಬದುಕಿನ ಬಗ್ಗೆ ತಿಳಿದಿರುವುದಿಲ್ಲ.ಸ್ಯಾಂಡಲ್ ವುಡ್ ನ ಹಿರಿಯ ನಟಿ ಗಾಯಿತ್ರಿ ಅವರು ಅನಂತ್ ನಾಗ್ ಅವರ ಧರ್ಮಪತ್ನಿ ಎಂಬುದು ಎಲ್ಲರಿಗೂ ಗೊತ್ತಿದೆ.ಕೆಲವರಿಗೆ ಇದು ಕೂಡ ತಿಳಿದಿರುವುದಿಲ್ಲ. ಅದಿರಲಿ ಮತ್ತೊಂದು ವಿಚಾರ ಅಂದರೆ ಅನಂತ್ ನಾಗ್ ಮತ್ತು ಗಾಯಿತ್ರಿ ದಂಪತಿಗಳಿಗೆ ಮಗಳೊಬ್ಬರಿದ್ದಾರೆ.ಅವರ ಹೆಸರು ಅಧಿತಿ.ಪದವೀಧರರಾಗಿರುವ ಅಧಿತಿ ಅವರು ಸದ್ಯಕ್ಕೆ ಖಾಸಗಿ ಕಂಪನಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಇವರಿಗೆ ವಿವೇಕ್ ಎಂಬುವರೊಂದಿಗೆ ವಿವಾಹವಾಗಿದೆ.ಅಧಿತಿ ಈ ಕಂಪನಿಗೂ ಮೊದಲು ಕೋಟಕ್ ಮಹೀಂದ್ರಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.ಇಲ್ಲಿಯೇ ಸಹೋದ್ಯೋಗಿಯಾಗಿದ್ದ ವಿವೇಕ್ ಅವರ ಪರಿಚಯವಾಗಿ ನಂತರ ಸ್ನೇಹ ಪ್ರೀತಿಗೆ ತಿರುಗಿದೆ.ನಂತರದಲ್ಲಿ ಅಧಿತಿ ಮತ್ತು ವಿವೇಕ್ ಅವರ ಪ್ರೀತಿ ಪ್ರೇಮ ವಿಷಯ ಎರಡೂ ಕುಟುಂಬಗಳಿಗೆ ತಿಳಿದು ಪರಸ್ಪರ ಒಪ್ಪಿಸಿ ವಿವಾಹ ಕೂಡ ಆಗಿದ್ದಾರೆ.

ಬೆಂಗಳೂರಿನಲ್ಲಿಯೇ ನೆಲೆಸಿರುವ ಅಧಿತಿ ಮತ್ತು ವಿವೇಕ್ ದಂಪತಿ ಸುಂದರ ಬದುಕನ್ನು ಕಟ್ಟಿಕೊಂಡಿದ್ದಾರೆ.ಅನಂತ್ ನಾಗ್ ಅವರಿಗೆ ಮಗಳೆಂದರೆ ಬಹಳ ಪ್ರೀತಿಯಿರುವ ಕಾರಣ ನೋಡ ಬಯಸಿದಾಗಲೆಲ್ಲಾ ಮಗಳು ಅಳಿಯರನ್ನ ನೋಡಿ ಬರುತ್ತಾರಂತೆ. ಒಟ್ಟಾರೆಯಾಗಿ ನಟ ಅನಂತ್ ನಾಗ್ ಅವರು ಬರೋಬ್ಬರಿ ಐದು ದಶಕಗಳಲ್ಲಿ ಕನ್ನಡ,ತಮಿಳು,ತೆಲುಗು,ಹಿಂದಿ ಮಲೆಯಾಳಂ ಬೆಂಗಾಲಿ,ಮರಾಠಿ ಸೇರಿದಂತೆ ಮುನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಕಲಾ ಸೇವೆ ಮಾಡಿದ್ದಾರೆ.ಇವರಿಗೆ ಪದ್ಮ ಶ್ರೀ ಪ್ರಶಸ್ತಿ ಸಿಗಬೇಕೆಂದು ಸ್ಟಾರ್ ನಟ-ನಟಿಯರು ಸೋಶಿಯಲ್ ಮೀಡಿಯಾಗಳಲ್ಲಿ ಹ್ಯಾಷ್ ಟ್ಯಾಗ್ ಅಭಿಯಾನ ಆರಂಭ ಮಾಡುವುದರ ಒತ್ತಾಯ ಕೂಡ ಮಾಡುತ್ತಿದ್ದಾರೆ.

Leave a Reply

%d bloggers like this: