ಖ್ಯಾತ ಹಾಸ್ಯನಟ ಗೋವಿಂದೇಗೌಡ ಪತ್ನಿ ನಿಜಕ್ಕೂ ಯಾರು ಗೊತ್ತಾ? ನೋಡಿ ಒಮ್ಮೆ

ಇತ್ತೀಚೆಗೆ ಸ್ಯಾಂಡಲ್ ವುಡ್ ನಲ್ಲಿ ಶೈನ್ ಆಗುತ್ತಿರುವ ಕಾಮಿಡಿ ಕಿಲಾಡಿಗಳು ಖ್ಯಾತಿಯ ಹಾಸ್ಯ ನಟ ಗೋವಿಂದೇಗೌಡ ಅವರ ಪತ್ನಿ ಯಾರು ಗೊತ್ತಾ..! ಕನ್ನಡ ಕಿರುತೆರೆಯ ಮೂಲಕ ಇಂದು ಬೆಳ್ಳಿಪರದೆಗೆ ಅನೇಕ ಪ್ರತಿಭಾವಂತ ಕಲಾವಿದರು ಹೆಜ್ಜೆ ಇಟ್ಟಿದ್ದಾರೆ. ನಾಡಿನ ಮೂಲೆ ಮೂಲೆಗಳಲ್ಲಿ ಎಲೆ ಮರೆಕಾಯಿಯಂತಿದ್ದ ಅನೇಕ ಪ್ರತಿಭೆಗಳಿಗೆ ಒಂದು ವೇದಿಕೆಯಾಗಿ ದೊರೆತು ತಮ್ಮ ಪ್ರತಿಭೆಯ ಮೂಲಕ ಬದುಕು ಕಟ್ಟಿಕೊಂಡು ಇಂದು ಸ್ಟಾರ್ ನಟ-ನಟಿಯಾಗಿ ಮಿಂಚುತ್ತಿದ್ದಾರೆ. ಅಂತಹ ವೇದಕೆ ಕಲ್ಪಿಸಿಕೊಟ್ಟ ವಾಹಿನಿಗಳಲ್ಲಿ ಕನ್ನಡದ ಪ್ರಸಿದ್ದ ವಾಹಿನಿಯಾದ ಜೀ಼ ಕನ್ನಡ ವಾಹಿನಿ ಕೂಡ ಒಂದಾಗಿದೆ. ಜೀ಼ ಕನ್ನಡ ವಾಹಿನಿಯಲ್ಲಿ ಧಾರಾವಾಹಿಗಳ ಜೊತೆಗೆ ರಿಯಾಲಿಟಿ ಶೋಗಳು ಕೂಡ ಅಪಾರ ಜನಪ್ರಿಯತೆ ಪಡೆದು ನಾಡಿನ ಮನೆ ಮನೆಗಳಲ್ಲಿ ಜನಪ್ರಿಯವಾಗಿವೆ. ಅಂತಹ ರಿಯಾಲಿಟಿ ಶೋಗಳಲ್ಲಿ ಕಾಮಿಡಿ ಕಿಲಾಡಿಗಳು ಕೂಡ ಹಾಸ್ಯ ಕಾರ್ಯಕ್ರಮ ಕೂಡ ಒಂದು.

ಈ ಕಾಮಿಡಿ ಕಿಲಾಡಿಗಳು ಹಾಸ್ಯ ಕಾರ್ಯಕ್ರಮ ಮೂಲಕ ಒಂದಷ್ಟು ಪ್ರತಿಭೆಗಳು ಕನ್ನಡ ಚಿತ್ರರಂಗಕ್ಕೆ ಪ್ರವೇಶ ಪಡೆದುಕೊಂಡಿವೆ. ಅಂತಹ ಕಲಾವಿದರ ಪೈಕಿ ನಟ ಗೋವಿಂದೇಗೌಡ ಅವರು ಸಹ ಒಬ್ಬರು. ಈ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋನಲ್ಲಿ ಇವರು ಜಿಜಿ ಅಂತಾನೇ ಫುಲ್ ಫೇಮಸ್ ಆಗಿದ್ದವರು. ಜಿಜಿ ಉರುಫ್ ಗೋವಿಂದೇಗೌಡ ಅವರಿಗೆ ಅದೃಷ್ಟ ಎಂಬಂತೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆ.ಜಿ.ಎಫ್ ಸಿನಿಮಾದಲ್ಲಿ ಸಣ್ಣ ಪಾತ್ರವೊಂದು ಅವಕಾಶ ಸಿಗುತ್ತದೆ. ಇದು ಇವರ ವೃತ್ತಿ ಜೀವನಕ್ಕೆ ಹೊಸದೊಂದು ತಿರುವು ನೀಡಿತು ಎಂದರೆ ತಪ್ಪಾಗಲಾರದು. ಈ ಕೆ.ಜಿ ಎಫ್.,ಸಿನಿಮಾದಲ್ಲಿ ಇವರ ಪಾತ್ರ ಪುಟ್ಟದ್ದಾದರು ಕೂಡ ಪ್ರಮುಖವಾದ ಗಮನಾರ್ಹವಾದ ಪಾತ್ರವಾಗಿತ್ತು.

ಈ ಸಿನಿಮಾದಿಂದ ಅವರಿಗೆ ಅನೇಕ ಸಿನಿಮಾಗಳಲ್ಲಿ ಅವಕಾಶ ಸಿಗುತ್ತದೆ. ಇದರ ಜೊತೆಗೆ ವೈವಾಹಿಕ ಜೀವನಕ್ಕೂ ಕೂಡ ಹೆಜ್ಜೆ ಇಡುತ್ತಾರೆ ಜಿಜಿ ಅವರು. ನಟ ಗೋವಿಂದೇಗೌಡ ಅವರು ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ನಲ್ಲಿ ತಮ್ಮ ಸಹ ಕಲಾವಿದೆಯಾಗಿದ್ದ ನಟಿ ದಿವ್ಯಾ ಶ್ರೀ ಅವರನ್ನ ಪ್ರೀತಿಸಿ ಮದುವೆ ಆಗಿದ್ದಾರೆ. ಜೊತೆಯಾಗಿ ನಟಿಸುತ್ತಿದ್ದ ಗೋವಿಂದೇಗೌಡ ಮತ್ತು ದಿವ್ಯಾಶ್ರೀ ಅವರಿಗೆ ಪರಸ್ಪರ ಸ್ನೇಹವಾಗಿ ತದ ನಂತರ ಆ ಸ್ನೇಹ ಪ್ರೀತಿಗೆ ತಿರುಗಿ ಮನೆಯವರ ಒಪ್ಪಿಗೆ ಪಡೆದು ಸರಳವಾಗಿ ಮದುವೆ ಕೂಡ ಆಗುತ್ತದೆ. ಇದೀಗ ಈ ಜೋಡಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

Leave a Reply

%d bloggers like this: