ಖ್ಯಾತ ಹಾಸ್ಯ ನಟ ಮಂಡ್ಯ ರಮೇಶ್ ಅವರ ಪುತ್ರಿ ಈಗ ಹೇಗಿದ್ದಾಳೆ ಗೊತ್ತಾ? ನೋಡಿ ಒಮ್ಮೆ ಯಾವ ಹೀರೊಯಿನ್ ಗೂ ಕಮ್ಮಿಯಿಲ್ಲ

ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟರ ಪೈಕಿ ಒಬ್ಬರಾಗಿರುವ ನಟ ಮಂಡ್ಯ ರಮೇಶ್ ಅವರ ಪುತ್ರಿ ಈಗ ಹೇಗಿದ್ದಾರೆ, ಏನು ಮಾಡುತ್ತಿದ್ದಾರೆ ಗೊತ್ತಾ… ! ಈಗಾಗಲೇ ಕನ್ನಡ ಚಿತ್ರರಂಗದ ಅನೇಕ ಹಿರಿಯ ನಟ-ನಟಿಯರ ಮಕ್ಕಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅವರಲ್ಲಿ ಕೆಲವರಿಗೆ ಕಲಾ ಸರಸ್ವತಿ ಕೈ ಹಿಡಿದು ಜೊತೆಯಾಗಿ ಸಾಗಿಸುತ್ತಿದ್ದರೆ, ಇನ್ನು ಕೆಲವರು ಒಂದೆರಡು ಸಿನಿಮಾ ಮಾಡಿ ನಮಗೆ ಸೂಕ್ತವಾದ ಕ್ಷೇತ್ರ ಅಲ್ಲ ಎಂದು ನಟನೆ ಬಿಟ್ಟು ಬೇರೆ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಅಪ್ಪ ಹಾಕಿದ ಆಲದ ಮರ ಎಂದು ಅದಕ್ಕೇನೆ ಅಂಟಿಕೊಳ್ಳದ ಅನೇಕ ಸ್ಟಾರ್ ಮಕ್ಕಳು ಇದೀಗ ಸ್ವತಂತ್ರ ಬದುಕನ್ನು ಕಟ್ಟಿಕೊಂಡಿದ್ದಾರೆ. ಆದರೆ ಕೆಲವೇ ಕೆಲವು ನಟರ ಮಕ್ಕಳಿಗೆ ಮಾತ್ರ ನಟನೆ ಎಂಬುದು ತಮ್ಮಕುಟುಂಬದದಿಂದಾನೇ ಬಳುವಳಿಯಾಗಿ ಬಂದಿರುತ್ತದೆ. ಅಂತಹ ನಟರ ಮಕ್ಕಳಲ್ಲಿ ಮಂಡ್ಯ ರಮೇಶ್ ಅವರ ಪುತ್ರಿ ದಿಶಾ ಮಂಡ್ಯ ರಮೇಶ್ ಕೂಡ ಒಬ್ಬರು.

ಮಂಡ್ಯ ರಮೇಶ್ ನಾಟಕ ರಂಗಭೂಮಿ ಹಿನ್ನೆಲೆಯಿಂದ ಬಂದು ಟಿ. ಎಸ್. ನಾಗಾಭರಣ ಅವರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಜನುಮದ ಜೋಡಿ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು. ಇದಾದ ಬಳಿಕ ತಮ್ಮ ಗ್ರಾಮ್ಯ ಭಾಷಾ ಶೈಲಿ ನಟನೆ ಮೂಲಕ ಶಿವಣ್ಣ, ರವಿಚಂದ್ರನ್ ಅಂತಹ ಅನೇಕ ಸ್ಟಾರ್ ನಟರು ಮತ್ತ ಇತ್ತೀಚೆಗೆನ ಎಲ್ಲಾ ನಟರೊಂದಿಗೆ ಅಭಿನಯಿಸುತ್ತಿದ್ದಾರೆ. ಇವರು ಕೇವಲ ಸಿನಿಮಾ ಮಾತ್ರ ಅಲ್ಲದೆ ಮೈಸೂರಿನಲ್ಲಿ ನಟನಾ ರಂಗಶಾಲೆಯನ್ನು ಕೂಡ ಆರಂಭಿಸಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಅನೇಕ ಕಲಾವಿದರನ್ನು ಕೊಡುಗೆಯಾಗಿ ನೀಡಿದ್ದಾರೆ. ಇನ್ನು ಇವರ ಮಗಳಾದ ದಿಶಾ ತನ್ನ ತಂದೆಯಂತೆ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ತಮ್ಮ ತಂದೆಯ ನಟನಾ ರಂಗಶಾಲೆಯಲ್ಲಿ ಮೇಲ್ವಿಚಾರಕಿ ಮತ್ತುಕಲಾವಿದೆಯಾಗಿ ಗುರುತಿಸಿಕೊಂಡಿರುವ ದಿಶಾ ರಮೇಶ್ ಅವರು ಮುಂದಿನ ದಿನಗಳಲ್ಲಿ ಬೆಳ್ಳಿ ತೆರೆಗೆ ಬರುವ ಎಲ್ಲಾ ರೀತಿಯ ಅವಕಾಶ ಸಾಧ್ಯತೆ ಇದೆ ಎಂದು ಹೇಳಬಹುದು. ಏಕೆಂದರೆ ಮಂಡ್ಯ ರಮೇಶ್ ಅವರ ಪುತ್ರಿ ದಿಶಾ ನೋಡಲು ಆಕರ್ಷಕವಾಗಿ ಸುಂದರವಾಗಿದ್ದು ಸಿನಿಮಾದಲ್ಲಿ ನಟಿಸಲು ಎಲ್ಲಾ ರೀತಿಯ ಅರ್ಹತೆಯನ್ನ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಸದ್ಯಕ್ಕೆ ನಟ, ಮಂಡ್ಯ ರಮೇಶ್ ಅವರು ಮಜಾ ಟಾಕೀಸ್ ಶೋ ಮತ್ತು ಒಂದಷ್ಟು ಸಿನಿಮಾಗಳಲ್ಲಿ ತೊಡಗಿಸಿಕೊಂಡಿರುವುದರ ಜೊತೆಗೆ ತಮ್ಮ ನಟನಾ ರಂಗಭೂಮಿ ಶಾಲೆಯನ್ನು ಉತ್ತುಂಗ ಮಟ್ಟಕ್ಕೆ ಕರೆದೊಯ್ಯುವ ನಿಟ್ಟಿನಲ್ಲಿ ವಿಭಿನ್ನ ಬಗೆಯ ಪ್ರಯೋಗಾತ್ಮಕ ನಾಟಕ ಮಾಡಿಸುತ್ತಿದ್ಥಾರೆ. ಇತ್ತೀಚೆಗೆ ನಟನಾ ರಂಗ ಮಂದಿರ ಪ್ರೇಕ್ಷಕರಿಂದ ತುಂಬಿ ಗಮನ ಸೆಳೆದಿತ್ತು.