ಕುಸ್ತಿಪಟು ಗ್ರೇಟ್ ಖಲಿಯ ಸುಂದರವಾದ ಕುಟುಂಬ ನೋಡಿ! ಹೆಂಡತಿ ಯಾರು ಗೊತ್ತಾ

ಡಬ್ಲ್ಯುಡಬ್ಲ್ಯುಇ ರಿಂಗಿನಲ್ಲಿ ಅನೇಕ ಘಟಾನುಘಟಿಗಳೆಲ್ಲ ಸೋಲಿಸಿದ ದಿ ಗ್ರೇಟ್ ಖಲಿ ಬಗ್ಗೆ ಇಡೀ ಜಗತ್ತಿಗೆ ತಿಳಿದಿದೆ.ಖಲಿಯವರದ ಪೂರ್ಣ ಹೆಸರು ದಿಲೀಪ್ ಸಿಂಗ್ ರಾಣಾ.ದಿಲೀಪ್ ಸಿಂಗ್ ಆಗಸ್ಟ್ 27 1972ರಂದು ಹಿಮಾಚಲ ಪ್ರದೇಶದಲ್ಲಿ ಜನಿಸಿದರು.ಖಲಿ ವಿಶ್ವಾದ್ಯಂತ ದೊಡ್ಡ ಹೆಸರು ಗಳಿಸಿರುವ ವ್ಯಕ್ತಿ.ವಿಷಯ ಅದಲ್ಲ,ಅವರ ಹೆಂಡತಿಯ ಬಗ್ಗೆ ನಾವು ಹೇಳಲು ಹೊರಟಿರುವುದು.ಅಂಥ ಬೃಹತ್ ದೇಹ ಇರುವ ವ್ಯಕ್ತಿಯನ್ನು ಮದುವೆ ಆಗುವುದು ಸಾಮಾನ್ಯ ವಿಷಯವಲ್ಲ.ಖಾಲಿ ಅವರು ೨೦೦೨ರಲ್ಲಿ ಹರ್ಮಿಂದರ್ ಕೌರ್ ಅವರನ್ನು ಮದುವೆಯಾದರು.ಹರ್ಮಿಂದರ್ ಕೌರ್ ಸೌಂದರ್ಯದಲ್ಲಿ ಯಾರಿಗೇನು ಕಮ್ಮಿಯಿಲ್ಲ.ಖಲಿ ನಿವೃತ್ತಿ ಹೊಂದಿದ ತರುವಾಯ ಅವರ ಜವಾಬ್ದಾರಿ ಸಂಪೂರ್ಣ ತನ್ನ ಪತ್ನಿಯ ಮೇಲೆ ಬೀಳುತ್ತೆ.

ಖಲಿಯ ಯಶಸ್ಸಿನಲ್ಲಿ ಹರ್ಮಿಂದರ್ ಅವರ ಪಾತ್ರ ದೊಡ್ಡದು.ಖಲಿ ಹರ್ಮಿಂದರ್ ದಂಪತಿಗಳಿಗೆ ಒಬ್ಬ ಹೆಣ್ಣು ಮಗಳಿದ್ದಾಳೆ.ಖಲಿ ಕುಟುಂಬದ ಫೋಟೋಗಳು ಇತ್ತೀಚೆಗೆ ವೈರಲ್ ಆಗಿವೆ.ಖಲಿ ಆರಂಭದ ದಿನಗಳಲ್ಲಿ ಶಿಮ್ಲಾದಲ್ಲಿ ಭದ್ರತಾ ಸಿಬ್ಬಂದಿಯ ಉದ್ಯೋಗ ಮಾಡುತ್ತಿದ್ದರು.ಖಲಿಯ ಕುಟುಂಬ ಸಾಧಾರಣ ಮಧ್ಯಮ ವರ್ಗದ ಕುಟುಂಬವಾಗಿತ್ತು.ತನ್ನ ಕುಟುಂಬದ ಪೋಷಣೆಗಾಗಿ ಕಾವಲುಗಾರನ ಕೆಲಸಕ್ಕೆ ಸೇರಿದರು,ನಂತರ ಪಂಜಾಬ್ ಪೋಲೀಸ್ ಉದ್ಯೋಗ ದೊರಕಿತ್ತು.

ಖಲಿ ಕುಸ್ತಿಪಟು ಅಷ್ಟೇ ಅಲ್ಲ.ಅವರು ನಟನಾಗಿಯೂ ಕೆಲಸ ಮಾಡಿದ್ದಾರೆ.ನಾಲ್ಕು ಹಾಲಿವುಡ್ ಎರಡು ಬಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದಾರೆ.ಅನೇಕ ಟಿವಿ ಸೀರಿಯಲ್‌ಗಳಲ್ಲೂ ನಟಿಸಿದ್ದಾರೆ.ವೃತ್ತಿಯಲ್ಲಿ ಈ ಮಟ್ಟದ ಯಶಸ್ಸು ಗಳಿಸಲು ಬಹಳ ಶ್ರಮ ಪಟ್ಟಿದ್ದಾರೆ ಖಲಿ.ಬಡತನದ ಕಾರಣ ಖಲಿಗೆ ವ್ಯಾಸಂಗ ಮಾಡಲು ಕೂಡ ಕಷ್ಟವಾಯಿತು.ಕುಟುಂಬಕ್ಕೆ ಸಹಾಯ ಮಾಡಲು ಚಿಕ್ಕ ವಯಸ್ಸಿನಲ್ಲೇ ಕೆಲಸ ಮಾಡಲು ಪ್ರಾರಂಭಿಸಿದರು.ಹಳ್ಳಿಯಲ್ಲಿ ಕೆಲಸ ಮಾಡುತ್ತಿದ್ದರಿಂದ ಖಲಿಗೆ ಬಹಳ ಕಡಿಮೆ ಹಣ ಸಿಗುತ್ತಿತ್ತು.ಆಗ ಕೆಲಸಕ್ಕಾಗಿ ನಗರಕ್ಕೆ ಹೋದರು.ಬಾಲ್ಯದಲ್ಲಿ ಖಲಿ ರಸ್ತೆ ಯೋಜನೆಗಳಿಗೆ ಕಲ್ಲು ಹೊಡೆಯುವ ಕೆಲಸ ಸಹ ಮಾಡಿದ್ದಾರೆ.ಖಲಿ ಶಿಮ್ಲಾದಲ್ಲಿ ಬಹಳ ದಿನಗಳ ಕಾಲ ಕೆಲಸ ಮಾಡಿದ್ದರು.ನಂತರ ಕಾವಲುಗಾರನ ಕೆಲಸ ಮಾಡಿದ್ದು.ಖಲಿಯ ಆದಾಯದ ಬಹುತೇಕ ಭಾಗವನ್ನು ಪೌಷ್ಟಿಕಾಹಾರ ಮತ್ತು ಪೌಷ್ಟಿಕ ಪಾನೀಯಗಳಿಗೆ ಖರ್ಚಾಗುತ್ತಿತ್ತು.