ಕುಸಿಯಿತು ಅಕ್ಷಯ್ ಕುಮಾರ್ ಅವರ ಮಾರ್ಕೆಟ್, ಅವರ ‘ರಾಮ್ ಸೇತು’ ಚಿತ್ರದ ಮೊದಲ ದಿನದ ಗಳಿಕೆ ಎಷ್ಟು ಗೊತ್ತೇ

ಬಾಲಿವುಡ್ ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಅವರ ರಾಮ್ ಸೇತು ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದೆ. ಅದೂ ಸಹ ರಿಲೀಸ್ ಆದ ಮೊದಲನೇ ದಿನವೇ ಕೋಟಿ ಕೋಟಿ ಲೂಟಿ ಮಾಡುತ್ತಿದೆ. ಬಾಲಿವುಡ್ ಸೂಪರ್ ಸ್ಟಾರ್ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಉತ್ತಮವಾಗಿ ಗಳಿಕೆ ಮಾಡುವುದು ಹೊಸದೇನಲ್ಲ. ಆದರೆ ಇತ್ತೀಚೆಗೆ ಅಂದರೆ ಕಳೆದ ಕೆಲವು ವರ್ಷಗಳಿಂದ ಹಿಂದಿ ಸಿನಿಮಾಗಳು ನಿರೀಕ್ಷೆ ಮಟ್ಟಕ್ಕೆ ಸಿನಿ ಪ್ರೇಕ್ಷಕರಿಗೆ ಇಷ್ಟವಾಗದೇ ಗಲ್ಲಾ ಪೆಟ್ಟಿಗೆಯಲ್ಲಿ ಮಕಾಡೆ ಮಲಗಿದ್ದವು. ಆದರೆ ಆಲಿಯಾ ಭಟ್ ಮತ್ತು ರಣ್ ಬೀರ್ ಕಪೂರ್ ಮುಖ್ಯಭೂಮಿಕೆಯ ಬ್ರಹ್ಮಾಸ್ತ್ರ ಸಿನಿಮಾದ ಬಳಿಕ ಬಾಲಿವುಡ್ ನಲ್ಲಿ ಮತ್ತೆ ಸ್ಟಾರ್ ಸಿನಿಮಾಗಳ ಸಕ್ಸಸ್ ಕಳೆಗಟ್ಟಿದೆ.

ಇದೀಗ ಅದರ ಬೆನ್ನಲ್ಲೇ ಬಾಲಿವುಡ್ ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಅವರ ರಾಮ್ ಸೇತು ಸಿನಿಮಾ ಸಹ ಸಿನಿ ಪ್ರೇಕ್ಷಕರ ಮನಗೆದ್ದು ಗಲ್ಲಾ ಪೆಟ್ಟಿಗೆಯಲ್ಲಿ ಭಾರಿ ಸೌಂಡ್ ಮಾಡುತ್ತಿದೆ. ಹೌದು ಮೊನ್ನೆ ತಾನೇ ಅಂದರೆ ಅಕ್ಟೋಬರ್ 25 ರಂದು ರಿಲೀಸ್ ಆದ ರಾಮ್ ಸೇತು ಸಿನಿಮಾ ಮೊದಲ ದಿನವೇ ಬರೋಬ್ಬರಿ ಹದಿನೈದು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ನಿರ್ಮಿಸಿದೆ. ಈ ರಾಮ್ ಸೇತು ಸಿನಿಮಾವನ್ನ ಜೀ಼ ಸ್ಟೂಡಿಯೋಸ್ ಸಂಸ್ಥೆ ವರ್ಲ್ಡ್ ವೈಡ್ ವಿತರಣೆ ಮಾಡಿದೆ. ರಾಮ್ ಸೇತು ಸಿನಿಮಾಗೆ ಕೇಪ್ ಆಫ್ ಗುಡ್ ಫಿಲ್ಮ್ಸ್ ಅಂಡ್ ಲೈಕಾ ಪ್ರೊಡಕ್ಷನ್ಸ್ ಜಂಟಿಯಾಗಿ ಅರುಣಾ ಭಾಟಿಯಾ.

ವಿಕ್ರಮ್ ಮೆಲ್ಹೋತ್ರಾ, ಸುಭಾಸ್ಕರನ್, ಮಹಾವೀರ್ ಜೈನ್ ಅವರು ಬಂಡವಾಳ ಹೂಡಿದ್ದು, ಅಭಿಷೇಕ್ ಶರ್ಮಾ ಈ ರಾಮ್ ಸೇತು ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದಲ್ಲಿ ನಾಸ್ತಿಕ ಪುರಾತತ್ವಶಾಸ್ತ್ಯಜ್ಞನಾಗಿ ಅಕ್ಷಯ್ ಕುಮಾರ್ ಕಾಣಿಸಿಕೊಂಡಿದ್ದು, ಪ್ರಧಾನ ಪಾತ್ರಗಳಲ್ಲಿ ಜಾಕ್ವೇಲಿನ್ ಫರ್ನಾಂಡಿಸ್, ನುಶ್ರತ್ ಭರುಚ್ಚಾ ಅಭಿನಯಿಸಿದ್ದಾರೆ. ಅಕ್ಷಯ್ ಕುಮಾರ್ ಅವರ ನಟನೆಗೆ ಅವರ ಅಭಿಮಾನಿಗಳು ಫಿಧಾ ಆಗಿದ್ದು, ರಾಮ್ ಸೇತು ಸಿನಿಮಾ ಮೊದಲ ದಿನದಿಂದಾನೇ ಗಲ್ಲಾ ಪೆಟ್ಟಿಗೆಯಲ್ಲಿ ಭಾರಿ ಸೌಂಡ್ ಮಾಡುತ್ತಿದೆ. ಸಿನಿ ಪಂಡಿತರ ಪ್ರಕಾರ ಈ ವಾರಾಂತ್ಯದಲ್ಲಿ ರಾಮ್ ಸೇತು ಸಿನಿಮಾ ಐವತ್ತು ಕೋಟಿ ಕಲೆಕ್ಷನ್ ಮಾಡಲಿದೆ ಎಂದು ಅಂದಾಜು ಲೆಕ್ಕಾಚಾರ ಹಾಕುತ್ತಿದ್ದಾರೆ.

Leave a Reply

%d bloggers like this: