ಕುರಿ ಪ್ರತಾಪ್ ಅವರ ಸುಂದರವಾದ ಹೆಂಡತಿ ಇವರೇ ನೋಡಿ ಯಾವ ಹೀರೋಯಿನ್ ಗೂ ಕಮ್ಮಿಯಿಲ್ಲ

ಕನ್ನಡದ ಖ್ಯಾತ ಹಾಸ್ಯ ನಟ ಹಾಗೂ ಮಜಾ ಟಾಕೀಸ್ನಲ್ಲಿ ಮಿಂಚುತ್ತಿರುವ ಕುರಿ ಪ್ರತಾಪ್ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ನೋಡೋಣ.ಕುರಿ ಪ್ರತಾಪ್ ಅವರು ತಮ್ಮ ಹಾಸ್ಯ ಚಟಾಕಿ ಮೂಲಕವೇ ಅಪಾರ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಕೇವಲ ಹಾಸ್ಯ ನಟನಾಗಿ ಅಲ್ಲದೇ ಕಿರುತೆರೆ ನಿರೂಪಕರೂ ಕೂಡ. ಇವರು ಸುಮಾರು 60 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದು ಕಾಮಿಡಿ ಮೂಲಕ ಮನೋರಂಜನೆಯ ರಸದೌತಣವನ್ನು ನೀಡಿದ್ದಾರೆ. ಇವರು ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ `ಕುರಿಗಳು ಸಾರ್ ಕುರಿಗಳು’ ಕಾರ್ಯಕ್ರಮದ ಮೂಲಕ ಪ್ರಸಿದ್ಧಿ ಪಡೆದರು.

ಹುಟ್ಟಿದ್ದು ಮೈಸೂರಿನಲ್ಲಿಯಲ್ಲಿ, ಬದುಕು ರೂಪಿಸಿಕೊಂಡದ್ದು ಸಿನಿಮಾದಲ್ಲಿ.ಇತೀಚೆಗೆ ಕನ್ನಡ ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿ ಸ್ಪರ್ಧಿಯಾಗಿ ಕೂಡ ಭಾಗವಹಿಸಿದರು. ಇವರ ತಂದೆಯವರು ತಮ್ಮ ಮಗ ಐಎಎಸ್ ಅಧಿಕಾರಿಯಾಗಬೇಕೆಂದು ಕನಸು ಕಂಡರೆ ಪ್ರತಾಪ್ ರವರು ಪಿಯುಸಿಯನ್ನೇ ಐದು ವರ್ಷ ಕಲಿತು ಓದಿಗೆ ಎಳ್ಳು ನೀರು ಬಿಟ್ಟು ಮೈಸೂರಿನಲ್ಲಿ ಕಾಮಿಡಿ ಡ್ರಾಮಾಗಳಿಗೆ ಪ್ರಸಿದ್ಧಿಯಾಗಿದ್ದ ದೃಶ್ಯ ಕಲಾವೇದಿಕೆ ಸೇರಿದರು.

ವಿಷಯ ತಿಳಿದ ಇವರ ತಂದೆ ಸೌದೆಯಲ್ಲಿ ಹೊಡೆದಿದ್ದರಂತೆ.ಅದೇನೇ ಇರಲಿ,ಕಲೆ ಮೇಲೆ ಇದ್ದ ಪ್ರೀತಿ ಇಂದು ಕುರಿ ಪ್ರತಾಪ್ ಅವರನ್ನು ಬೆಳೆಸಿದೆ. ಕಲರ್ಸ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಸೃಜನ್ ಲೋಕೇಶ್ ನಿರೂಪಣೆಯ ಮಜಾ ಟಾಕೀಸ್ ಕಾರ್ಯಕ್ರಮದ ಭಾಗವಾಗಿರುವ ಇವರು ಪ್ರೇಕ್ಷಕರನ್ನು ತಮ್ಮ ವಿಶಿಷ್ಟ ಹಾಸ್ಯದ ಮೂಲಕ ನಗಿಸುತ್ತಿದ್ದಾರೆ. ಇವರು ದಿ ವಿಲನ್,ಅಯೋಗ್ಯ,ತಾರಕ್,ಭರ್ಜರಿ, ವಜ್ರಕಾಯ, ಅಧ್ಯಕ್ಷ,ವಿಕ್ಟರಿ,ನವಗ್ರಹ,ಯುವರತ್ನ ಸೇರಿದಂತೆ ಅನೇಕ ದೊಡ್ಡ
ಸಿನಿಮಾಗಳಲ್ಲಿ ನಟಿಸಿದ್ದಾರೆ.

ಕುರಿಗಳು ಸರ್ ಕುರಿಗಳು ಎಂಬ ಕಾಮಿಡಿ ಶೋ ಇವರಿಗೆ ಪ್ರಖ್ಯಾತಿ ತಂದುಕೊಟ್ಟಿತು.ಅಂದಿನಿಂದ ಕುರಿ ಪ್ರತಾಪ್ ಎಂದು ಪ್ರಸಿದ್ಧರಾದರು.ಅದು ಅಲ್ಲದೇ, ಸಿನಿಮಾ ಶೂಟಿಂಗ್ ಗಳಿಗೆ ಒಂದು ದಿನಕ್ಕೆ 30 ರಿಂದ 40 ಸಾವಿರ ರೂಪಾಯಿಗಳಷ್ಟು ಸಂಭಾವನೆ ಪಡೆಯುತ್ತಾರೆ ಕುರಿ ಪ್ರತಾಪ್. ಅಂದಹಾಗೆ, ಮಜಾ ಟಾಕೀಸ್ ನಲ್ಲಿ ಕೂಡ ಒಂದು ಎಪಿಸೋಡ್ ಗೆ ಬರೋಬ್ಬರಿ 50 ಸಾವಿರ ಸಂಭಾವನೆ ಪಡೆಯುತ್ತಾರೆ. ಇನ್ನು ಕುರಿ ಪ್ರತಾಪ್ ಅವರ ಬಳಿ ಎರಡು ಸ್ವಿಫ್ಟ್ ಕಾರ್ ಗಳಿದ್ದು, ಇವರ ಒಟ್ಟು ಆಸ್ತಿ ಸುಮಾರು 4 ರಿಂದ 5 ಕೋಟಿ ಆಗಿದೆ ಎನ್ನಲಾಗಿದೆ.

ಇವರ ಪತ್ನಿಯ ಹೆಸರು ಸರಿತಾ. ಬಿಡುವಿನ ಸಮಯದಲ್ಲಿ ಪತ್ನಿ ಮಕ್ಕಳೊಂದಿಗೆ ಸಮಯ ಕಳೆಯುವ ಇವರು
ಯಾವಾಗಲೂ ಕಾಮಿಡಿ ಮಾಡುತ್ತಾ, ಎಲ್ಲರನ್ನು ನಗಿಸುತ್ತಿರುತ್ತಾರೆ. ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ, ಎರಡನೇ ಸ್ಥಾನ ಪಡೆದುಕೊಂಡವರು ಕುರಿ ಪ್ರತಾಪ್. ಹಾಸ್ಯ ಚಟಾಕಿ ಮೂಲಕ ಹೊಟ್ಟೆ ಹುಣ್ಣಾಗುವಂತೆ
ಎಲ್ಲರನ್ನು ನಗಿಸುವವ ಇವರಿಗೆ ಅವಕಾಶಗಳು ಹೀಗೆ ಬರಲಿ.ಈ ಹಿಂದೆ ಕುರಿ ಪ್ರತಾಪ್ ಅವರ ಆರೋಗ್ಯದ ಕುರಿತು ವದಂತಿಯೊಂದು ಕೇಳಿ ಬಂದಿತ್ತು.

ಇವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಸ್ಥಿತಿ ಬಹಳ ಗಂಭೀರವಾಗಿದೆ ಎನ್ನುವ ಮಾಹಿತಿಗಳು ಎಲ್ಲೆಡೆ ಹರಡಿತ್ತು. ಇನ್ನೂ ಹಲವರಿಗೆ ಕುರಿ ಪ್ರತಾಪ್ ಅವರು ಇನ್ನಿಲ್ಲ ಎನ್ನುವ ಸುದ್ದಿ ತಲುಪಿತ್ತು. ಇದರಿಂದ ಆತಂಕಕ್ಕೊಳಗಾದ ಅವರ ಆಪ್ತರು, ಅಭಿಮಾನಿಗಳು ಪ್ರತಾಪ್ ಅವರಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದರು.ನಾನು ಚೆನ್ನಾಗಿದ್ದೇನೆ, ಆರಾಮಾಗಿ ಮನೆಯಲ್ಲಿ ಟಿವಿ ನೋಡುತ್ತಿದ್ದೇನೆ, ನನಗೇನು ಆಗಿಲ್ಲ. ಈಗಾಗಲೇ ಹರಡಿರುವ ಸುದ್ದಿ ಸುಳ್ಳು ಎಂದು ಸ್ಪಷ್ಟನೆ ನೀಡಿದ್ದರು ಹಾಸ್ಯ ನಟ ಕುರಿ ಪ್ರತಾಪ್.

Leave a Reply

%d bloggers like this: