ಕುಮಾರಸ್ವಾಮಿ ಮಗಳು ‘ಶಮಿಕಾ’ ನಾಯಕಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ

ಕನ್ನಡ ಚಿತ್ರರಂಗದ ಸುಪ್ರಸಿದ್ಧ ನಟಿ ಇದೀಗ ತಮ್ಮ ಪುತ್ರಿಯನ್ನು ಬೆಳ್ಳಿತೆರೆ ಮೇಲೆ ಮಿಂಚಿಸಲು ತಯಾರಿ ನಡೆಸುತ್ತಿದ್ದಾರೆ.ಇತ್ತೀಚೇಗೆ ಚಂದನವನದಲ್ಲಿ ಅನೇಕ ನಟ-ನಟಿಯರು ತಮ್ಮ ಮಕ್ಕಳನ್ನ ತಾವು ನಟಿಸುವ ಚಿತ್ರಗಳಲ್ಲಿ ವಿಶೇಷ ಪಾತ್ರಗಳಲ್ಲಿ ಅಭಿನಯಿಸಿಸುವ ಮೂಲಕ ಅವರನ್ನ ಕೂಡ ಬಣ್ಣದ ಲೋಕಕ್ಕೆ ಪರಿಚಯಿಸುವ ಪ್ರಯತ್ನ ಮಾಡಿದ್ದಾರೆ.ನಟ ದರ್ಶನ್ ಪುತ್ರ,ದುನಿಯಾ ವಿಜಯ್ ಪುತ್ರ,ಗೋಲ್ಡನ್ ಸ್ಟಾರ್ ಗಣೇಶ್ ಪುತ್ರ ಸೇರಿದಂತೆ ಇನ್ನೊಂದಷ್ಟು ಕಲಾವಿದರು ತಮ್ಮ ಮಕ್ಕಳನ್ನ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ.ಅದರಂತೆ ಇದೀಗ ಕನ್ನಡ ಚಿತ್ರರಂಗದ ನಕ್ಷತ್ರ ತಾರೆಯಾಗಿ ಮಿಂಚಿದ ನಟಿ ರಾಧಿಕಾ ಕುಮಾರಸ್ವಾಮಿ ಕೂಡ ಮುದ್ದು ಮಗಳಾದ ಶಮಿಕಾರನ್ನ ಕನ್ನಡ ಚಿತ್ರರಂಗಕ್ಕೆ ಪರಿಚಯಿಸುವ ಎಲ್ಲಾ ತಯಾರಿ ನಡೆಸಿದ್ದಾರೆ.ಈಗಾಗಲೇ ಅವರೇ ತಿಳಿಸಿರುವಂತೆ ತಮ್ಮ ಮಗಳು ಶಮಿಕಾ ಓದುವುದರಲ್ಲಿ ಮುಂದೆ ಇದ್ದಾರಂತೆ.

ಅದರ ಜೊತೆಗೆ ಅವರಿಗೆ ನಟನೆ,ನೃತ್ಯ,ಮಾರ್ಷಲ್ ಆರ್ಟ್ಸ್ ಬಗ್ಗೆಯೂ ಕೂಡ ಅತೀವ ಆಸಕ್ತಿ ಹೊಂದಿದ್ದಾರಂತೆ.ಈ ಹಿಂದೆ ಶಮಿಕಾರನ್ನ ಸಿನಿಮಾವೊಂದರಲ್ಲಿ ಬಾಲ ನಟಿಯಾಗಿ ಅಭಿನಯಿಸಲು ಅವಕಾಶ ನೀಡಲು ಪ್ರಯತ್ನ ಪಟ್ಟರು ಕೂಡ ಅದು ಕಾರಣಾಂತರಗಳಿಂದ ಸಾಧ್ಯವಾಗಿರಲಿಲ್ಲವಂತೆ.ಇದೀಗ ಪ್ರೌಢ ಶಾಲೆಯಲ್ಲಿ ವಿಧ್ಯಾಬ್ಯಾಸ ಮಾಡುತ್ತಿರುವ ಶಮಿಕಾ ಅವರನ್ನ ತಮ್ಮ ಸ್ವಂತ ಬ್ಯಾನರ್ ನಿಂದಲೇ ಸ್ಯಾಂಡಲ್ ವುಡ್ ಪರಿಚಯಿಸಬೇಕು ಎಂದು ನಟಿ ರಾಧಿಕಾ ಕುಮಾರಸ್ವಾಮಿ ಅವರು ಕನಸೊಂದನ್ನ ಹೊತ್ತಿಕೊಂಡಿದ್ದಾರಂತೆ. ಅದಕ್ಕಾಗಿ ಎಲ್ಲಾ ಸಂಪೂರ್ಣ ತಯಾರಿ ಕೂಡ ಕೊಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಮಕ್ಕಳ ಕಥೆಯಾಧಾರಿತ ಸಿನಿಮಾವೊಂದರಲ್ಲಿ ತಮ್ಮ ಮಗಳು ಶಮಿಕಾರನ್ನ ಮುಖ್ಯ ಪಾತ್ರದಲ್ಲಿ ಕಾಣಿಸಿಲು ನಟಿ ರಾಧಿಕಾ ಕುಮಾರಸ್ವಾಮಿ ಅವರೇ ತಮ್ಮ ಹೋಂ ಬ್ಯಾನರ್ ನಲ್ಲಿ ಚಿತ್ರ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಅದಕ್ಕಾಗಿ ಉತ್ತಮ ಕಥೆಯನ್ನ ಕೂಡ ಆಯ್ಕೆ ಮಾಡಿಕೊಳ್ಳುವ ಯೋಜನೆ ಮಾಡುತ್ತಿದ್ದಾರೆ.ಒಟ್ಟಾರೆಯಾಗಿ ದಶಕಗಳ ಕಾಲ ಇಂಡಸ್ಟ್ರೀ ಆಳಿದ ನಟಿ ರಾಧಿಕಾ ಕುಮಾರಸ್ವಾಮಿ ಇದೀಗ ತಮ್ಮ ಮಗಳನ್ನ ಕೂಡ ಚಂದನವನಕ್ಕೆ ಪರಿಚಯಿಸುವ ಉತ್ಸಾಹದಲ್ಲಿದ್ದಾರೆ.