ಕುಮಾರಣ್ಣ ರಾಧಿಕಾರನ್ನ ಮನೆಯಲ್ಲಿ ಏನಂತ ಕರಿತಾರೆ ಗೊತ್ತಾ

ಕುಮಾರಸ್ವಾಮಿ ಅವರಿಗೆ ರಾಧಿಕಾ ಹೇಗೆ ಎರಡನೇ ಪತ್ನಿಯೋ ರಾಧಿಕಾಗೂ ಅದು ಎರಡನೇ ಮದುವೆ.ಮೊದಲು ರತನ್ ಕುಮಾರ್ ಅನ್ನುವವರನ್ನು ಮದುವೆಯಾದ ರಾಧಿಕಾ ಕೌಟುಂಬಿಕ ಬಿರುಕುಗಳ ಕಾರಣ ಡೈವೋರ್ಸ್ ಪಡೆಯುತ್ತಾರೆ.ನಂತರ 2006ರಲ್ಲಿ ಕುಮಾರಸ್ವಾಮಿ ಅವರನ್ನು ಮದುವೆಯಾಗಿದ್ದು,ಅವರಿಗೆ ಶಮಿಕಾ ಎಂಬ ಮಗಳು ಹುಟ್ಟಿದ್ದು ನಿಮಗೆ ಗೊತ್ತೇ ಇದೆ.2010ರಲ್ಲಿ ಇವರ ಮದುವೆ ಸುದ್ದಿ ಯಾವಾಗ ದೊಡ್ಡ ಮಟ್ಟದಲ್ಲಿ ಟೀಕೆಗೆ ಗುರಿಯಾಯಿತೋ ಆಗ ಹೈಕೋರ್ಟಿನಲ್ಲಿ ಒಂದು ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಕೆಯಾಗುತ್ತೆ.ಮೊದಲ ಪತ್ನಿ ಇರುವಾಗಲೇ ಹೇಗೆ ಎರಡನೇ ಮದುವೆ ಆದರು ಅಂತ.

ಆಗ ಹೈಕೋರ್ಟು ಈ ಮದುವೆ ಅಸಿಂಧು ಅನ್ನುವ ತೀರ್ಪು ನೀಡುತ್ತದೆ.ಆದರೂ ಕುಮಾರಣ್ಣ ರಾಧಿಕಾ ಚೆನ್ನಾಗೇ ಇರುತ್ತಾರೆ.ಯಾವಾಗ ನಿಖಿಲ್ ತುಂಬಾ ದೊಡ್ಡವರಾಗ್ತಾ ಬರ‌್ತಾರೋ ಆಗ ಅನಿತಾ ಕುಮಾರಸ್ವಾಮಿಯವರು ಮತ್ತು ಕುಟುಂಬದವರು ಆ ಸಂಬಂಧಕ್ಕೆ ಸಂಪೂರ್ಣ ಬ್ರೇಕ್ ಹಾಕಲು ಒತ್ತಡ ತರುತ್ತಾರೆ.ಆದರೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ರಾಧಿಕಾ ಸಂದರ್ಶನ ನೀಡಿರುವ ಒಂದು ವಿಡಿಯೋ ವೈರಲ್ ಆಗಿದೆ.ಕುಮಾರಣ್ಣ ರಾಧಿಕಾರನ್ನ ಮನೆಯಲ್ಲಿ ಏನಂತ ಕರಿತಾರೆ ಅಂತ ಸ್ವತಃ ರಾಧಿಕಾ ಹೇಳಿದ್ದಾರೆ.

ನೀವು ಕುಮಾರಸ್ವಾಮಿ ಅವರನ್ನು ಏನಂತ ಕರಿತೀರಾ ಅಂದ್ರೆ ರೀ ಅಂತೀನಿ ಅಂದಿದ್ದಾರೆ.ಕುಮಾರಸ್ವಾಮಿ ನಿಮ್ಮನ್ನು ಏನಂತ ಕರಿತಾರೆ ಅಂದ್ರೆ ನಾಚಿಕೆಯಾಗುತ್ತದೆ ಹೇಳಲೇಬೇಕಾ ಚಿನ್ನು ಅನ್ನುತ್ತಾರೆ ಅಂದಿದ್ದಾರೆ.ಇವರಿಬ್ಬರ ಸಂಬಂಧ ಈಗಲೂ ಚೆನ್ನಾಗಿದೆ ಆದ್ರೆ ಕೆಲವು ಜನ ಇವರನ್ನು ಟ್ರೊಲ್ ಮಾಡುತ್ತಾರೆ ಇವರ ಸಂಬಂಧ ಚೆನ್ನಾಗಿಲ್ಲ ಅಂತ.ಕರ್ನಾಟಕದ ಬಡಜನರಿಗೆ ಮತ್ತು ರೈತರಿಗೆ ಇವರ ಸರ್ಕಾರದಲ್ಲಿ ಅದೆಷ್ಟೋ ಅಭಿವೃದ್ಧಿ ಮಾಡಿದ್ದಾರೆ. ಈ ನಮ್ಮ ಲೇಖನ ಇಷ್ಟವಾದಲ್ಲಿ ಶೇರ್ ಮಾಡಿ ಮತ್ತು ಲೈಕ್ ಮಾಡಿ.

Leave a Reply

%d bloggers like this: