ಕುಳ್ಳಗಿರುವ ಪತ್ಮಿ ಇದ್ದರೆ ನೀವೆಷ್ಟು ಅದೃಷ್ಟವಂತರು ಎಂದು ತಿಳಿದರೆ ಈವತ್ತೇ ಕುಳ್ಳಗಿರುವ ಹುಡುಗಿಯನ್ನು ಹುಡುಕಿ ಮದುವೆಯಾಗ್ತೀರಾ..ಏನೆಲ್ಲಾ ಲಾಭಗಳಿವೆ ನೋಡಿ ಒಮ್ಮೆ

ನಿಮಗೆ ನಿಮ್ಮ ಸಂಗಾತಿಯಾಗಿ ಬರುವ ಹುಡುಗಿ ಎತ್ತರದಲ್ಲಿ ನಿಮಗಿಂತ ಕೊಂಚ ಕುಳ್ಳರಾಗಿದ್ದರೆ ಆ ಹುಡುಗಿಯನ್ನ ಮಿಸ್ ಮಾಡ್ಕೋಬೇಡಿ. ಹೌದು ಆಯ್ಕೆ ಎಂಬುದು ಪ್ರತಿಯೊಬ್ಬರಿಗೂ ಒಬ್ಬರಿಗಿಂತ ಒಬ್ಬರಿಗೆ ಬಹಳ ವಿಭಿನ್ನವಾಗಿರುತ್ತದೆ. ಅದು ವಿಧ್ಯಾಭ್ಯಾಸ, ಗುರಿ, ಸ್ನೇಹ, ಪ್ರೀತಿ ಹೀಗೆ ಪ್ರತಿಯೊಂದರಲ್ಲಿಯೂ ವಿಭಿನ್ನತೆಯನ್ನ ಕಾಣಬಹುದಾಗಿರುತ್ತದೆ. ಅಂತೆಯೇ ಮದುವೆಯ ವಿಚಾರದಲ್ಲಿ ಕೂಡ ಕೆಲವು ಅಭಿರುಚಿಗಳು ಹುಡುಗ-ಹುಡುಗಿ ಇಬ್ಬರಲ್ಲೂ ಇದ್ದೇ ಇರುತ್ತದೆ. ಹುಡುಗಿಗೆ ತನ್ನ ಬಾಳ ಸಂಗಾತಿ ಹೀಗೆ ಇರಬೇಕು ಎಂದು ಕೆಲವು ಕನಸುಗಳನ್ನ ಹೊಂದಿರುತ್ತಾಳೆ. ಅದೇ ರೀತಿಯಾಗಿ ಹುಡುಗ ಕೂಡ ತನ್ನ ಜೀವನದ ಸಂಗಾತಿ ಇಂತಹ ವ್ಯಕ್ತಿತ್ವ ಗುಣ, ರೂಪವತಿ, ಜಾಣೆ ಆಗಿರಬೇಕು ಎಂದು ಅಪೇಕ್ಷೆ ಪಡುತ್ತಾರೆ. ಇಂತಹ ಅಭಿರುಚಿ ಅನಿಸಿಕೆ ಅಭಿಪ್ರಾಯಗಳಲ್ಲಿ ಹುಡುಗಿ ಎತ್ತರದಲ್ಲಿ ತನಗಿಂತ ಒಂದೆರಡು ಇಂಚು ಕಡಿಮೆ ಇರಬೇಕು ಎಂದು ಸಾಮಾನ್ಯವಾಗಿ ಹುಡುಗರು ಬಯಸುತ್ತಾರೆ.

ಕೆಲವರಿಗೆ ಇದು ಅಗತ್ಯವೇನಿರುವುದಿಲ್ಲ. ಕೆಲವು ಹುಡುಗರಿಗೆ ಎತ್ತರದಲ್ಲಿ ತಮಗಿಂತ ಉದ್ದ ಇರುವ ಹುಡುಗಿಯನ್ನ ಮದುವೆ ಆಗಲು ಸ್ವಲ್ಪ ಮುಜುಗರ ಪಡುತ್ತಾರೆ. ಅಥವಾ ತನಗಿಂತ ತೀರ ಕುಳ್ಳಗೆ ಇದ್ದರು ಕೂಡ ಹುಡುಗ ಅಸಮಾದಾನ ವ್ಯಕ್ತಪಡಿಸುತ್ತಾನೆ. ಆದರೆ ಅಸಲಿಗೆ ಕುಳ್ಳಗೆ ಇರುವ ಹುಡುಗಿಯರನ್ನ ಮದುವೆ ಆದರೆ ಅನೇಕ ಸಕರಾತ್ಮಕ ವಿಚಾರಗಳಿವೆ. ಹೌದು ಕುಳ್ಳಗೆ ಇರುವ ಹುಡುಗಿಯರು ಒಮ್ಮೆ ಯಾರೇ ಒಬ್ಬ ವ್ಯಕ್ತಿಯನ್ನು ಪ್ರೀತಿಸಲು ಶುರು ಮಾಡಿದರೆ ಅವರ ಜೀವನ ಪರ್ಯಂತ ಹಾಗೇ ಪ್ರೀತಿಸುತ್ತಾರೆ. ಇವರಿಗೆ ಕೋಪ ಎಂಬುದು ವಿಪರೀತವಾಗಿ ಇದ್ದೇ ಇರುತ್ತದೆ. ಇವರ ಕೋಪ ಕ್ಷಣ ಮಾತ್ರದಲ್ಲಿ ಇಳಿಯುತ್ತದೆ. ಅವರಿಗೆ ಯಾವ ಪ್ರಮಾಣದಲ್ಲಿ ಕೋಪ ಬರುತ್ತದೋ ಅಷ್ಟೇ ದೊಡ್ಡ ಪ್ರಮಾಣದಲ್ಲಿ ಅನುರಾಗ ಅವರಲ್ಲಿ ಇರುತ್ತದೆ.

ಕುಳ್ಳಗಿರುವ ಹೆಣ್ಣು ಮಕ್ಕಳು ಸದಾ ನಗುವನಿಂದ ಇರಲು ಇಷ್ಟ ಪಡುತ್ತಾರೆ. ಅವರು ನಕ್ಕರೆ ಅವರ ಮುಖ ಮಗುವಿನಂತೆ ಮುದ್ದಾಗಿ ಕಾಣುತ್ತದೆ. ಇನ್ನೊಂದು ವಿಶೇಷ ಅಂದರೆ ಕುಳ್ಳನೆಯ ಹುಡುಗಿಯರಿಗೆ ವಯಸ್ಸಾದರು ಕೂಡ ವಯಸ್ಸಾಗದಂತೆ ಕಾಣುತ್ತಾರೆ. ಸದಾ ಸಂತೋಷವಾಗಿರಲು ಇಷ್ಟ ಪಡುತ್ತಾರೆ. ಇವರ ಮೊಗದಲ್ಲಿ ನಗು ಮೂಡಿದರೆ ತುಂಬಾ ಆಕರ್ಷಕವಾಗಿ ಕಾಣುತ್ತಾರೆ. ಇವರು ಯಾವುದೇ ಕಾರಣಕ್ಕೂ ಇನ್ನೊಬ್ಬರಿಗೆ ತೊಂದರೆ ಕೊಡಲು ಇಷ್ಟ ಪಡುವುದಿಲ್ಲ‌. ಹಾಗಾಗಿ ಈ ಕುಳ್ಳನೆಯ ಹುಡುಗಿಯರು ಜೀವನ ಸಂಗಾತಿಯಾಗಿ ಸಿಕ್ಕರೆ ಮಿಸ್ ಮಾಡಿಕೊಳ್ಳಲೆಬೇಡಿ.

Leave a Reply

%d bloggers like this: