ಕುಕ್ಕೆ ಸುಬ್ರಮಣ್ಯದಲ್ಲಿ ಆರು ಹೆಡೆ ಸರ್ಪ ಇರೋದು ನಿಜವೇ?. ನಾಗದೋಷ ಮುಕ್ತಿಗಾಗಿ ಇಲ್ಲಿಗೆ ಯಾಕೆ ಬರುತ್ತಾರೆ? ಅಸಲಿ ಸತ್ಯ ಇಲ್ಲಿದೆ ನೋಡಿ ಒಮ್ಮೆ

ನಾಗದೋಷ ಮುಕ್ತಿಗಾಗಿ ಕುಕ್ಕೆ ಸುಬ್ರಮಣ್ಯ ದೇವಾಲಯಕ್ಕೆ ಯಾಕೆ ಹೋಗುತ್ತಾರೆ ಗೊತ್ತಾ…! ಜೀವನದಲ್ಲಿ ಮನುಷ್ಯನಿಗೆ ಕಷ್ಟ-ಕಾರ್ಪಣ್ಯಗಳು ಎದುರಾದಾಗ ತಮ್ಮ ಕಷ್ಟಕ್ಕೆ ಪರಿಹಾರ ನೀಡುವ ದೇವರ ಮೊರೆ ಹೋಗುವುದು ಸರ್ವೇ ಸಾಮಾನ್ಯವಾಗಿರುತ್ತದೆ. ಒಬ್ಬೊಬ್ಬರು ಒಂದು ದೇವರನ್ನು ಅಪಾರವಾಗಿ ನಂಬಿರುತ್ತಾರೆ. ಅಂತೆಯೇ ರಾಜ್ಯ ಮಾತ್ರ ಅಲ್ಲದೆ ಹೊರ ರಾಜ್ಯಗಳಲ್ಲಿಯೂ ಸಹ ಅಪಾರ ಭಕ್ತಗಣ ಹೊಂದಿರುವ ದೇವಾಲಯಗಳಲ್ಲಿ ಕುಕ್ಕೆ ಸುಬ್ರಮಣ್ಯ ದೇವಸ್ಥಾನ ಕೂಡ ಒಂದಾಗಿದೆ.ಇಲ್ಲಿಗೆ ಬರುವ ಬಹುತೇಕ ಭಕ್ತರು ತಮ್ಮ ಸರ್ಪದೋಷ ನಿವಾರಣೆಗಾಗಿ ಬರುವುದು ಹೆಚ್ಚಾಗಿರುತ್ತಾರೆ. ಅಂತೇಯೇ ಈ ಪುಣ್ಯ ಕ್ಷೇತ್ರದಲ್ಲಿ ವಿಶೇಷವಾದಂತಹ ಐತಿಹಾಸಿಕ ನಂಬಿಕೆಯೊಂದು ಇದೆ. ಅದೇನೆಂದರೆ ಕುಕ್ಕೆ ಸುಬ್ರಮಣ್ಯ ಕ್ಷೇತ್ರದಲ್ಲಿ ಆರು ಎಡೆಯನ್ನು ಹೊಂದಿರುವ ಸರ್ಪ ಕಾಣಿಸಿಕೊಂಡು ತನ್ನ ನಂಬಿ ಬರುವ ಭಕ್ತರಿಗೆ ದರ್ಶನ ನೀಡಿ ಆಶೀರ್ವಾದ ಮಾಡುತ್ತದೆ ಎಂಬ ನಂಬಿಕೆಯಿದೆ.

ಈ ವಿಶೇಷವಾದ ಕುಕ್ಕೆ ಸುಬ್ರಮಣ್ಯ ಕ್ಷೇತ್ರದ ಬಗ್ಗೆ ಕೊಂಚ ತಿಳಿದುಕೊಳ್ಳುವುದಾದರೆ. ಕುಮಾರಧಾರಾ ನದಿಯ ತಟದಲ್ಲಿರುವ ಈ ಕುಕ್ಕೆ ಸುಬ್ರಮಣ್ಯ ಕ್ಷೇತ್ರವಿದ್ದು, ಈ ಕ್ಷೇತ್ರಕ್ಕೆ ಅದರದೇ ಒಂದಷ್ಟು ಪೌರಾಣಿಕ ಹಿನ್ನೆಲೆಯಿದೆ. ಗರುಡ ರಾಜನಿಂದ ವಾಸುದೇವ ತಪ್ಪಿಸಿಕೊಂಡು ಬಂದು ಈ ಕುಕ್ಕೆಯಲ್ಲಿರುವ ಗುಹೆಯೊಂದರಲ್ಲಿ ಕೂತು ತಪಸ್ಸು ಮಾಡಿದ್ದಾನೆ. ಷಣ್ಮುಖ ಮತ್ತು ಗಣೇಶ ಇಬ್ಬರು ಇಲ್ಲಿಗೆ ಬಂದು ತಾರಕಾಸುರನನ್ನ ಬಲಿ ಪಡೆದದ್ದು ಇದೇ ಕುಕ್ಕೆಯಲ್ಲಿ ಎಂಬ ಪ್ರತೀತಿ ಕೂಡ ಇದೆ. ಹೀಗೆ ಒಂದಷ್ಟು ಪೌರಾಣಿಕ ಹಿನ್ನೆಲೆಯೊಂದಿದ್ದು, ಪ್ರಭಾವಿ ದೈವಿಶಕ್ತಿ ಈ ಕ್ಷೇತ್ರದಲ್ಲಿ ಇದೆ ತಿಳಿದು ಬಂದಿದೆ. ಇನ್ನು ಇಲ್ಲಿ ಶರವಣ ಅಂದರೆ ಷಣ್ಮುಖ ಲಕ್ಷ್ಮಿ, ಅಗ್ನಿ, ಅರುಣ, ಯಕ್ಷ, ಅಮೃತ, ಪುಣ್ಯ ಹೀಗೆ ಆರು ಅಂಶಗಳಿಂದ ಜನಿಸಿದ್ದಾನೆ ಎಂಬ ಕಥೆ ಕೂಡ ಈ ಕ್ಷೇತ್ರದೊಂದಿಗೆ ಸೇರಿಕೊಂಡಿದೆ. ಇಲ್ಲೊಂದು ಸ್ವಾರಸ್ಯಕರವಾದ ಘಟನೆ ಕೂಡ ಇದೇ ಕುಕ್ಕೆ ಸುಬ್ರಮಣ್ಯ ಕ್ಷೇತ್ರದಲ್ಲಿ ನಡೆಯುತ್ತದೆಯಂತೆ.

ಷಣ್ಮುಖ ಹೀಗೆ ಒಂದು ದಿನ ಅಳುತ್ತಾ ಬರುತ್ತಿರುವಾಗ ಆ ಕಡೆಯಿಂದ ಆರು ಜನ ಕೃತಿಕಾ ದೇವತೆಗಳು ಬರುತ್ತಿರುತ್ತಾರೆ. ಆಗ ಷಣ್ಮುಖ ಈ ಆರು ದೇವತೆಗಳಿಂದ ಒಂದೊಂದು ಶಕ್ತಿ ವರವನ್ನು ಪಡೆದುಕೊಳ್ಳುತ್ತಾನೆ. ಈ ಆರು ಶಕ್ತಿಯಿಂದ ಷಣ್ಮುಖ ಮಾರ್ಗಶಿರ ಶುಕ್ಲ ಪಕ್ಷ ಷಷ್ಠಿಯ ದಿನದಂದು ತಾರಾಕಾಸುರನನ್ನ ಸಂಹಾರ ಮಾಡುತ್ತಾನೆ. ಇದರಿಂದ ಸಂತೃಪ್ತನಾದ ಸುಬ್ರಮಣ್ಯ ಸ್ವಾಮಿ ಆರು ಎಡೆಗಹನ್ನೊತ್ತು ಸರ್ಪದ ರೂಪದಲ್ಲಿ ಭಕ್ತಿರಿಗೆ ದರ್ಶನ ನೀಡುತ್ತಾನಂತೆ. ಈ ಆರು ಎಡೆಯುಳ್ಳ ನಾಗ ಸರ್ಪವನ್ನ ಕಣ್ತುಂಬಿಕೊಳ್ಳುವ ಭಕ್ತರ ಕಷ್ಟ ಕಾರ್ಪಣ್ಯ ನಾಗ ದೋಷಗಳು ಪರಿಹಾರವಾಗುತ್ತವೆ ಎಂಬ ನಂಬಿಕೆ ಶತಮಾನಗಳಿಂದ ನಡೆದುಕೊಂಡು ಬಂದಿದೆ.