‘ಕೌನ್ ಬನೇಗಾ ಕರೋಡ್ ಪತಿ’ಗೆ ಅಮಿತಾಬ್ ಬಚ್ಚನ್ ಪಡೆಯುವ ಸಂಭಾವನೆಗೆ ಬೆಂಗಳೂರಿನಲ್ಲಿ ಐಷಾರಾಮಿ ಬಂಗಲೆಯನ್ನು ಕೊಂಡುಕೊಳ್ಳಬಹುದು

ಭಾರತೀಯ ಚಿತ್ರರಂಗದ ಈ ಸುಪ್ರಸಿದ್ದ ನಟ ಪಡೆಯುವ ರಿಯಾಲಿಟಿ ಶೋ ನ ಒಂದು ಎಪಿಸೋಡ್ ಸಂಭಾವನೆ ಕೋಟಿ ಕೋಟಿ…! ಸಿನಿಮಾ ಜಗ್ತತು ಅದೊಂದು ಅದ್ಭುತ ಮಾಯಾಲೋಕ. ಅಲ್ಲಿ ಪ್ರತಿಭೆ, ಶ್ರಮದ ಜೊತೆಗೆ ಅದೃಷ್ಟವೊಂದು ಕೈ ಹಿಡಿದರೆ ರಾತ್ರಿ ಕಳೆದು ಬೆಳಿಗ್ಗೆ ಆಗುವಷ್ಟರ ಹೊತ್ತಿಗೆ ಕೋಟಿಯ ಒಡೆಯ ಆಗಬಹುದು. ಆದರೆ ಇದು ಎಲ್ಲಾರಿಗೂ ಸಾಧ್ಯವಾಗುವುದಿಲ್ಲ. ಒಂದು ಸಿನಿಮಾ ಗೆದ್ದರೆ ಆ ಚಿತ್ರದ ನಟನಿಗೆ ಕೋಟಿ ಕೋಟಿ ಸಂಭಾವನೆ ಸಿಗುತ್ತದೆ. ಅಂತಾದರಲ್ಲಿ ಬರೋಬ್ಬರಿ ಐದು ದಶಕಗಳ ಕಾಲ ಹಿಂದಿ ಚಿತ್ರರಂಗದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವ ಬಾಲಿವುಡ್ ಬಿಗ್- ಬಿ ಅಮಿತಾಬ್ ಬಚ್ಚನ್ ಅವರ ಸಂಭಾವನೆ ಎಷ್ಟಿರಬಹುದು. ಬಿಗ್ ಬಿ ಅಮಿತಾಬ್ ಬಚ್ಚನ್ ಅವರು ಹಿಂದಿ ಚಿತ್ರರಂಗದ ದಿಗ್ಗಜ ನಟ. ಅಮಿತಾಬ್ ಕೇವಲ ಸಿನಿಮಾ ಮಾತ್ರವಲ್ಲದೆ ಜಾಹೀರಾತು ಮತ್ತು ರಿಯಾಲಿಟಿ ಶೋಗಳಲ್ಲಿ ನಿರೂಪಕರಾಗಿಯೂ ಕೂಡ ಯಶಸ್ವಿಯಾಗಿದ್ದಾರೆ.

ಅಮಿತಾಬ್ ಬಚ್ಚನ್ ಅವರು ಹಿಂದಿಯ ಜನಪ್ರಿಯ ರಿಯಾಲಿಟಿ ಶೋ ಕೌನ್ ಬನೇಗಾ ಕರೋಡ್ ಪತಿ ಶೋ ವನ್ನು ನಿರೂಪಕರಾಗಿ ಬಹಳ ಅಚ್ಚುಕಟ್ಟಾಗಿ ನಡೆಸಿಕೊಡುತ್ತಾರೆ.ಇವರ ಈ ಕೌನ್ ಬನೇಗಾ ರಿಯಾಲಿಟಿ ಶೋ ವನ್ನು ಕನ್ನಡ ಚಿತ್ರರಂಗದ ವರ ನಟ ಡಾ.ರಾಜ್ ಕುಮಾರ್ ಅವರು ಕೂಡ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರಂತೆ. ಅಷ್ಟರ ಮಟ್ಟಿಗೆ ಈ ಕೌನ್ ಬನೇಗಾ ರಿಯಾಲಿಟಿ ಶೋ ಕೇವಲ ಹಿಂದಿಯಲ್ಲಿ ಮಾತ್ರ ಅಲ್ಲ ದೇಶದ ಮೂಲೆ ಮೂಲೆಗೂ ತಲುಪಿತ್ತು. 2000 ದಲ್ಲಿ ಆರಂಭವಾದ ಈ ಕೌನ್ ಬನೇಗಾ ಕರೋಡ್ ಪತಿ ರಿಯಾಲಿಟಿ ಶೋ ನಡೆಸಿಕೊಡುವುದಕ್ಕೆ ಬಿಗ್ ಬಿ ಅಮಿತಾಬ್ ಬಚ್ಚನ್ ಅವರು ಎಪಿಸೋಡ್ ಒಂದಕ್ಕೆ ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ. ಮೂಲಗಳ ಪ್ರಕಾರ ಈ ಬಾರಿಯ ಕೌನ್ ಬನೇಗಾ ಕರೋಡ್ ಪತಿ ಸೀಸನ್ 12 ರ ಎಪಿಸೋಡ್ ಒಂದಕ್ಕೆ ಮೂರರಿಂದ ಐದು ಕೋಟಿ ಸಂಭಾವನೆ ಪಡೆಯುತ್ತಿದ್ದರಂತೆ.

ಅಂದರೆ ಇಡೀ ಈ ಬಾರಿಯ ಕೌನ್ ಬನೇಗಾ ರಿಯಾಲಿಟಿ ಶೋ ಒಟ್ಟಾರೆಯಾಗಿ ಬರೋಬ್ಭರಿ 250 ಕೋಟಿಗೂ ಅಧಿಕ ಸಂಭಾವನೆ ಪಡೆಯದಂತಾಗುತ್ತದಂತೆ. ಕಳೆದ ಸೀಸನ್ 11 ರಲ್ಲಿ ಅಮಿತಾಬ್ ಬಚ್ಚನ್ ಪ್ರತಿ ಎಪಿಸೋಡ್ ಗೆ ಎರಡು ಕೋಟಿ ಸಂಭಾವನೆ ಪಡೆಯುತ್ತಿದ್ದರು. ಇನ್ನು ಅಮಿತಾಬ್ ಬಚ್ಚನ್ ಅವರು ಕಾಲ ಕಾಲಕ್ಕೆ ಅಪ್ ಡೇಟ್ ಆಗುತ್ತಿದ್ದು, ಯುವ ಪೀಳಿಗೆಯವರೊಟ್ಟಿಗೆ ಕೂಡ ಉತ್ತಮ ಸಂಪರ್ಕ ವನ್ನು ಹೊಂದಲು ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಆಕ್ಟಿವ್ ಆಗಿರುತ್ತಾರೆ‌.ತಮ್ಮ ಮುಂಬರುವ ಸಿನಿಮಾದ ಮಾಹಿತಿಯ ಜೊತೆಗೆ ತಮ್ಮ ದಿನಚರಿಯ ಒಂದಷ್ಟು ಅಪ್ ಡೇಟ್ಸ್ ಕೂಡ ನೀಡುತ್ತಿರುತ್ತಾರೆ. ಇನ್ನು ಅಮಿತಾಬ್ ಬಚ್ಚನ್ ಅವರು ತೆಲುಗಿನ ಮಹಾನಟಿ ಸಿನಿಮಾ ಖ್ಯಾತಿಯ ನಿರ್ದೇಶಕ ನಾಗ್ ಅಶ್ವಿನ್ ಅವರೊಟ್ಟಿಗೆ ಸಿನಿಮಾ ಮಾಡಲು ಒಪ್ಪಿಗೆ ಸೂಚಿಸಿದ್ದಾರಂತೆ. ಈ ಚಿತ್ರದಲ್ಲಿ ನಟ ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಮುಖ್ಯ ಭೂಮಿಕೆಯಲ್ಲಿ ಇರಲಿದ್ದಾರೆ. ಈ ಚಿತ್ರದಲ್ಲಿ ಬಿಗ್ ಬಿ ಪ್ರಮುಖ ಪಾತ್ರ ನಿರ್ವಹಿಸಲು ಬರೋಬ್ಫರಿ 21 ಕೋಟಿ ಸಂಭಾವನೆ ಪಡೆಯುತ್ತಿದ್ದಾರಂತೆ.

Leave a Reply

%d bloggers like this: