ಕೋಟಿಗೊಬ್ಬ-3 ಚಿತ್ರಕ್ಕೆ ಆದ ನಷ್ಟ ಎಷ್ಟು ಕೋಟಿ ಗೊತ್ತಾ? ಪೂರ್ತಿ ವಿವರ ಇಲ್ಲಿದೆ ನೋಡಿ

ಚಂದನವನದ ಬಾದ್-ಶಾ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕೋಟಿಗೊಬ್ಬ 3 ಸಿನಿಮಾ ರಿಲೀಸ್ ಆಗುವುದಕ್ಕೆ ಒಂದು ದಿನ ತಡವಾದ ಕಾರಣnನಿರ್ಮಾಪಕ ಸೂರಪ್ಪ ಬಾಬು ಅವರಿಗೆ ಕೋಟಿ ಕೋಟಿ ನಷ್ಟವಾಗಿದೆಯಂತೆ.ಈ ಬಗ್ಗೆ ಚಿತ್ರ ಬಿಡುಗಡಗೆ ತಡವಾಗಲು ಕಾರಣಕರ್ತರಾದಂತಹ ಕೆಲವು ಜಿಲ್ಲೆಯ ಚಿತ್ರ ವಿತರಕರ ಮೇಲೆ ಗಂಭೀರ ಅರೋಪ ಮಾಡಿರುವ ಸೂರಪ್ಪ ಬಾಬು ಅವರು ತಮಗಾದ ನಷ್ಟಕ್ಕೆ ಕಾನೂನು ಕ್ರಮಕ್ಕೆ ಮುಂದಾಗಿ ಅವರ ವಿರುದ್ದ ಮಾನ ನಷ್ಟ ಮೊಕದ್ದಮೆ ಹೂಡುವ ನಿರ್ಧಾರ ತೆಗೆದುಕೊಂಡಿದ್ದಾರೆ. ಅಕ್ಟೋಬರ್ 14 ರಂದು ರಾಜ್ಯಾದ್ಯಂತ ಬಿಡುಗಡೆಯಾಗಬೇಕಾಗಿದ್ದ ಕೋಟಿಗೊಬ್ಬ 3 ಚಿತ್ರ ಕೆಲವು ಹಣಾಕಾಸಿನ ವ್ಯವಹಾರಗಳಿಂದ ಅನೌನ್ಸ್ ಮಾಡಿದ ದಿನಾಂಕದಂದು ರಿಲೀಸ್ ಆಗಲಿಲ್ಲ. ಇದು ಕಿಚ್ಚ ಸುದೀಪ್ ಅಭಿಮಾನಿಗಳಿಗೆ ನಿರ್ಮಾಪಕರ ಮೇಲೆ ಕೆಂಡವಾಗಲು ಕಾರಣವಾಯಿತು.

ಆದರೆ ಇದರಲ್ಲಿ ನನ್ನ ತಪ್ಪು ಏನಿಲ್ಲ ಸೂಕ್ತ ಸಮಯಕ್ಕೆ ಮೈಸೂರು,ದಾವಣಗೆರೆ ಜಿಲ್ಲೆಯ ಚಿತ್ರ ವಿತರಕರಾದ ಎಂ ಡಿ.ಖಾಜಾಪೀರ್ ಅವರು ಒಪ್ಪಂದ ಕರಾರು ಪತ್ರದ ಪ್ರಕಾರ ನಮಗೆ 2.90 ಕೋಟಿಗೆ ನೀಡಬೇಕಾಗಿತ್ತು. ಅದರಲ್ಲಿ ಮುಂಗಡವಾಗಿ 60 ಲಕ್ಷ ರೂ.ಹಣ ನೀಡಿದ್ದರು.ಉಳಿದ ಬಾಕಿ ಹಣವನ್ನು ನೀಡದೆ ಚಿತ್ರ ಬಿಡುಗಡೆಯಾಗುವ ಹಿಂದಿನ ದಿನದವರೆಗೆ ಹಣ ನೀಡುತ್ತೇವೆ.ಬರುತ್ತೀದ್ದೇನೆ ಅಂತ ಹೇಳಿ ಅಂತಿಮ ಕ್ಷಣದಲ್ಲಿ ನಮಗೆ ಹಣ ನೀಡದೆ ತೊಂದರೆ ಕೊಟ್ಟಿದ್ದಾರೆ.ಇದರಿಂದ ನಮಗೆ ಸಿನಿಮಾ ರಿಲೀಸ್ ಮಾಡಲು ಸಾಧ್ಯವಾಗಿಲ್ಲ ಎಂದು ನಿರ್ಮಾಪಕ ಸೂರಪ್ಪ ಬಾಬು ವಿತರಕರ ಮೇಲೆ ಕಿಡಿಕಾರಿದ್ದಾರೆ.

ಆದರೆ ಇದೀಗ ಚಿತ್ರ ವಿತರಕ ಖಾಜಾಪೀರ್ ಅವರು ಸೂರಪ್ಪ ಬಾಬು ನಮ್ಮ ಮೇಲೆ ಜೀವ ಬೆದರಿಕೆ ಧಮ್ಕಿ ಹಾಕಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.ಪೊಲೀಸರು ಸೂಲಪ್ಪ ಬಾಬು ಅವರ ಮೇಲೆ ಎಪ್ ಐ ಆರ್ ಕೂಡ ದಾಖಲಿಸಿದ್ದಾರೆ.ಈ ಪ್ರಕರಣ ಎಲ್ಲಿಗೆ ಮುಟ್ಟುತ್ತದೋ ಕಾದು ನೋಡಬೇಕಾಗಿದೆ. ಒಟ್ಟಾರೆಯಾಗಿ ಕೋಟಿಗೊಬ್ಬ 3 ಚಿತ್ರ ತಡವಾದರು ಕೂಡ ರಾಜ್ಯದ್ಯಂತ ಬಿಡುಗಡೆಯಾಗಿ ಉತ್ತಮ ರೆಸ್ಪಾನ್ಸ್ ಪಡೆದುಕೊಂಡು ಯಶಸ್ವಿಯಾಗಿ ಮುನ್ನುಗ್ಗುತ್ತಿದೆ.ಕಿಚ್ಚನ ಅಭಿಮಾನಿಗಳು ಸುದೀಪ್ ಅಭಿನಯಕ್ಕೆ ಮನಸೋತಿದ್ದಾರೆ. ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.

Leave a Reply

%d bloggers like this: