ಕೂಡಿಟ್ಟ ಚಿಲ್ಲರೆಯಿಂದ BMW ಕಾರು ಖರೀದಿಸಲು ಹೋದ ಹುಡುಗ! ನಂತರ ಆಗಿದ್ದೇನು ಗೊತ್ತಾ

ಪುಡಿಗಾಸಿನ ವ್ಯಕ್ತಿ ತನ್ನ ಕನಸಿನಂತೆ ಬಿಎಂಡಬ್ಲ್ಯೂ ಕಾರ್ ಖರೀದಿ ಮಾಡಿದ ಈ ಜೀವನಗಾಥೆ ನಿಜಕ್ಕೂ ಕೂಡ ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕವಾಗಿದೆ.ಹೌದು ಪ್ರತಿಯೊಬ್ಬ ವ್ಯಕ್ತಿಗೂ ಜೀವನದಲ್ಲಿ ಅನೇಕ ಮಹಾದಾಸೆಗಳನ್ನು ಇಟ್ಟಿಕೊಂಡಿರುತ್ತಾರೆ. ಮನದಲ್ಲಿ ಮೂಡಿದ ಕನಸನ್ನ ಈಡೇರಿಸಿಕೊಳ್ಳಲು ಶ್ರಮಿಸುತ್ತಾನೆ.ಕೆಲವರಿಗೆ ತಾನು ಜೀವನದಲ್ಲಿ ಏನಾದರು ಅದ್ಭುತ ಮಾಡಬೇಕು,ಬೃಹತ್ ಐಷಾರಾಮಿ ಮನೆ ಕಟ್ಟಬೇಕು,ಉನ್ನತ ಅಧಿಕಾರಿಯಾಗಬೇಕು,ಲಕ್ಸುರಿ ಲೈಫ್ ಲಕ್ಸುರಿ ಕಾರ್ ಖರೀದಿ ಮಾಡಬೇಕು ಎಂಬ ಅಪರಿಮಿತ ಬಯಕೆ ಆಸೆಯಿರುತ್ತದೆ.ಮನುಷ್ಯನ ಆಸೆಗೆ ಕೊನೆಯಿಲ್ಲ.ಆದರೆ ಕಂಡ ಕೆಲವು ಆಸೆಗಳನ್ನಾದರು ಈಡೇರಿಕೊಂಡರೆ ಅವರಿಗೆ ಸಾರ್ಥಕ ಮನೋಭಾವ ಮೂಡುತ್ತದೆ.ಅಂತೆಯೇ ಇಲ್ಲೋಬ್ಬ ವ್ಯಕ್ತಿ ತಾನು ಚಿಲ್ಲರೆ ಕಾಸಿಗೂ ಕಷ್ಟ ಪಡುತ್ತಿರುವ ಸಂಧರ್ಭದಲ್ಲಿ ನಾನೊಂದು ಬಿಎಂಡಬ್ಲ್ಯೂ ಕಾರ್ ಕೊಂಡುಕೊಳ್ಳಬೇಕು ಎಂದು ಕನಸು ಕಾಣುತ್ತಾನೆ.ಅದಕ್ಕಾಗಿ ಪ್ರತಿದಿನ ಚಿಲ್ಲರೆ ಕಾಸನ್ನು ಉಳಿಸುತ್ತಾ ಬರುತ್ತಾನೆ.

ಹನಿ ಹನಿ ಗೂಡಿದರೆ ಹಳ್ಳ ,ತೆನೆ ತೆನೆ ಗೂಡಿದರೆ ಬಳ್ಳ ಎಂಬ ಮಾತಿನಂತೆ ಕಾಸಿಗೆ ಕಾಸು ಕೂಡಿ ಹಾಕಿ ಮುಂದೊಂದು ದಿನ ತಾನು ಕನಸು ಕಂಡ ಬಿಎಂಡಬ್ಲ್ಯೂ ಕಾರ್ ಅನ್ನು ಕೊಂಡು ಕೊಳ್ಳುತ್ತಾನೆ.ಸಾಮಾನ್ಯವಾಗಿ ಈ ಬಡ ಮತ್ತು ಮಧ್ಯಮ ವರ್ಗದ ಮನೆಗಳಲ್ಲಿ ಮಹಿಳೆಯರು ಸಮಯ ಸಂಧರ್ಭ ಅನಿವಾರ್ಯತೆಗಳಿಗೆ ಬೇಕಾಗುತ್ತದೆ ಎಂದು ಮಾಡಿದ ಸಂಪಾದನೆಯಲ್ಲಿ ಸಾಸಿವೆ ಡಬ್ಬಗಳಿಂದ ಹಿಡಿದು ಸಣ್ಣ ಪುಟ್ಟ ಚೀಟಿ ಕಟ್ಟುವುದರ ವರೆಗೆ ಹಣ ಉಳಿಕೆ ಮಾಡುತ್ತಿರುತ್ತಾರೆ.ಅಂತೆಯೇ ಮಧ್ಯಮ ವರ್ಗ ಕುಟುಂಬದಲ್ಲಿ ಜನಿಸಿದ ಚುನಮ್ ಎಂಬ ವ್ಯಕ್ತಿ ತನ್ನ ಬಾಲ್ಯದ ದಿನಗಳಿಂದಲೂ ಪೋಷಕರು ತನಗೆ ಕೊಡುತ್ತಿದ್ದ ಚಿಲ್ಲರೆ ಕಾಸನ್ನು ಉಳಿಸುತ್ತಾ ಬರುತ್ತಿರುತ್ತಾನೆ.

ಇವನಿಗೆ ತಾನು ದೊಡ್ಡವನಾದ ಮೇಲೆ ಐಷಾರಾಮಿ ಕಾರಾದ ಬಿಎಂಡಬ್ಲ್ಯೂ ಕಾರ್ ಖರೀದಿ ಮಾಡಬೇಕು ಎಂಬ ಕನಸು ಇರುತ್ತದೆ.ಇದಕ್ಕಾಗಿ ಚಿಕ್ಕಂದಿನಿಂದಲೇ ಓದಿನ ಜೊತೆಗೆ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಾ ಬರುತ್ತಿರುತ್ತಾನೆ.ಓದಿ ಬೆಳೆದ ಚುನಮ್ ಆಗಾಗಲೇ ಚಿಲ್ಲರೆಗಳಿಂದ ಹಣ ಕೂಡಿಸಿಕೊಂಡ ಬಂದಿದ್ದ ಚುನಮ್ ಗೆ ಬಿಎಂಡಬ್ಲ್ಯೂ ಕಾರ್ ಕೊಳ್ಳುವಷ್ಟು ಆರ್ಥಿಕ ಶಕ್ತಿ ಸಾಮರ್ಥ್ಯ ಬಂದಿರುತ್ತದೆ. ಬಳಿಕ ಬಿಎಂಡಬ್ಲ್ಯು ಕಾರ್ ಶೋರೂಂ ಗೆ ಹೋಗಿ ತನ್ನಿಷ್ಟದ ಬಿಎಂಡಬ್ಲ್ಯೂ ಕಾರ್ ಅನ್ನು ಆಯ್ಕೆ ಮಾಡಿಕೊಳ್ಳುತ್ತಾನೆ ಚುನಮ್. ಆಯ್ಕೆ ಮಾಡಿಕೊಂಡಿದ ನಂತರ ಆ ಶೋರೂಮಿನ ವ್ಯವಸ್ಥಾಪಕರು ಚುನಮ್ ಬಳಿ ಬಂದು ಫೈನಲಿ ಕಾರಿನ ಬೆಲೆಯ ವಿಚಾರ ಮಾತಾನಾಡುತ್ತಾರೆ.

ಆಗ ಆ ಕಾರಿನ ಬೆಲೆ 52.ಲಕ್ಷ ಎಂದು ಕೇಳಿ ಚುನಮ್ ನನ್ನ ಬಳಿ ಇರುವುದು ಕಾಯಿನ್ಸ್ ಮಾತ್ರ ಎಂದೇಳುತ್ತಾನೆ.ಚುನಮ್ ಮಾತು ಕೇಳಿದ ಮ್ಯಾನೇಜರ್ ಗೆ ಕೊಂಚ ಕೋಪ ಬರುತ್ತದೆ.ಏನಿದು ಕಾರ್ ನೋಡಿ ಸೆಲೆಕ್ಟ್ ಮಾಡಿ ಇಷ್ಟೆಲ್ಲಾ ವಿಚಾರಿಸಿ ನನ್ನ ಬಳಿ ಇರುವುದು ಚಿಲ್ಲರೆ ಕಾಸು ಅಂತಿದ್ದಾರಲ್ಲ ಎಂದು ಒಮ್ಮೆಲೆ ಕೊಂಚ ಕೋಪಗೊಂಡಂತೆ ಕಾಣುತ್ತಾರೆ.ಆಗ ಚುನಮ್ ಸರ್ ನನ್ನ ಬಳಿ ಇರುವುದು ಚಿಲ್ಲರೆ ಕಾಸುಗಳೇ.ಈ ಬಿಎಂಡಬ್ಲ್ಯೂ ಕಾರಿನ ಬೆಲೆ 52 ಲಕ್ಷ.ಅಷ್ಟನ್ನೂ ನಾನು ಚಿಲ್ಲರೆ ರೂಪದಲ್ಲಿ ಯೇ ನೀಡುತ್ತೇನೆ ಎಂದು ಹೇಳುತ್ತಾನೆ.

ಮ್ಯಾನೇಜರ್ ಗೆ ಗೊಂದಲವಾಗಿ ಸರಿ ಎಂದು ಉತ್ತರಿಸುತ್ತಾನೆ ಆಗ ಚುನಮ್ ತಾನು ಬಾಲ್ಯದಿಂದ ಕೂಡಿಟ್ಟುಕೊಂಡ ಬಂದಿದ್ದ ಹುಂಡಿಯ ಹಣವನ್ನೆಲ್ಲಾ ನೀಡುತ್ತಾನೆ.ಆ ಚಿಲ್ಲರೆ ಕಾಸುಗಳನ್ನು ಎಣಿಸಿ ಎಣಿಸಿ ಸಿಬ್ಬಂದಿ ಸೇರಿ ಮ್ಯಾನೇಜರ್ ಕೂಡ ಹೈರಾಣಾಗುತ್ತಾರೆ.ಅಂತಿಮವಾಗಿ ಬರೋಬ್ಬರಿ ಐವತ್ತೆರಡು ಲಕ್ಷ ವನ್ನು ಚಿಲ್ಲರೆ ರೂಪದಲ್ಲಿ ನೀಡಿ ಚುನಮ್ ಆ ಬಿಎಂಡಬ್ಲ್ಯೂ ಶೋರೂಮಿನ ಸಿಬ್ಬಂದಿಯನ್ನ ದಂಗಾಡಿಸುತ್ತಾರೆ.ಚುನಮ್ ಒಟ್ಟಾರೆಯಾಗಿ ತನ್ನ ಕನಸಿನಂತೆ ಬಿಎಂಡಬ್ಲ್ಯು ಕಾರ್ ಕೊಂಡು ಸಂತಸ ಸಂಭ್ರಮ ಪಡುತ್ತಾನೆ. ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಲೈಕ್ ಮಾಡಿ ಮತ್ತು ಶೇರ್ ಮಾಡಿ. ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.