ಕೊನೆಗೂ ಟೀಮ್ ಇಂಡಿಯಾ ಆಟಗಾರನಿಗೆ ಕ್ಷಮೆ ಕೇಳಿದ ಖ್ಯಾತ ನಟಿ

ಬಾಲಿವುಡ್ ಬ್ಯೂಟಿ ಖ್ಯಾತ ಕ್ರಿಕೆಟಿಗನ ಕ್ಷಮೆ ಕೇಳಿ ಇದೀಗ ಬಿಟೌನ್ ನಲ್ಲಿ ಭಾರಿ ಸುದ್ದಿ ಆಗಿದ್ದಾರೆ. ರೂಪದರ್ಶಿ ಕಮ್ ನಟಿ ಊರ್ವಶಿ ರೌಟೇಲಾ ಅವರು ಸಿನಿಮಾ ಇರ್ಲಿ ಬಿಡ್ಲಿ ಸದಾ ಸುದ್ದಿಯಲ್ಲಿರುತ್ತಾರೆ. ಅವರ ಬ್ಯೂಟಿಯ ಜೊತೆಗೆ ವಿವಾದ ಕೂಡ ಊರ್ವಶಿ ಅವರಿಗೆ ಸುತ್ತಿಕೊಂಡಿರುತ್ತದೆ. ಕೆಲವು ದಿನಗಳಿಂದ ನಟಿ ಊರ್ವಶಿ ಅವರ ಹೆಸರು ಕ್ರಿಕೆಟಿಗ ರಿಷಭ್ ಪಂತ್ ಅವರೊಟ್ಟಿಗೆ ತಳುಕು ಹಾಕಿಕೊಂಡಿತು. ಆದರೆ ರಿಷಬ್ ಪಂತ್ ಅವರಿಗೇನೇ ಮುಜುಗರ ಆಗೋವಂತಹ ಹೇಳಿಕೆಯೊಂದನ್ನ ನಟಿ ಊರ್ವಶಿ ಸಂದರ್ಶನವೊಂದರಲ್ಲಿ ನೀಡಿದ್ರು. ಅದೇನಂದ್ರೆ ರಿಷಬ್ ಪಂತ್ ಅವ್ರು ಊರ್ವಶಿ ಅವರನ್ನ ಭೇಟಿ ಮಾಡ್ಬೇಕು ಪ್ರಯತ್ನ ಪಟ್ಟಿದ್ರಂತೆ. ಆದ್ರೇ ಊರ್ವಶಿ ಅವರ ಭೇಟಿಯನ್ನ ನಿರಾಕರಿಸಿದ್ರಂತೆ. ಈ ವಿಚಾರವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಛೋಟು ಭಯ್ಯಾ ಬ್ಯಾಟ್ ಬಾಲ್.

ನೇನು ಮುನ್ನಿ ಜೋ ಬದ್ನಮ್ ಹೋ ತೇರೆ ಲೀಯೇ ಯಂಗ್ ಕಿಡ್ಡೋ ಡಾರ್ಲಿಂಗ್ ಎಂದು ಟ್ವೀಟ್ ಬರೆದಿದ್ರು. ಇದಕ್ಕೆ ಕ್ರಿಕೆಟಿಗ ರಿಷಬ್ ಪಂತ್ ಕೂಡ ಕೆಲವರು ತಮ್ಮ ಅಲ್ಪಾವಧಿಯ ಫೇಮಸ್ ಆಗೋಕೆ ಯಾವೆಲ್ಲಾ ರೀತಿ ಸುಳ್ಳು ಹೇಳ್ತಾರೆ ಅನ್ನೋದು ತಮಾಷೆ ಆಗಿದೆ. ದೇವರು ಅವರಿಗೆ ಒಳ್ಳೇದನ್ನೇ ಮಾಡಲಿ ಎಂದು ಖಡಕ್ ರಿಪ್ಲೆ ಕೊಟ್ಟಿದ್ರು. ಇಲ್ಲಿಂದ ಇವರಿಬ್ಬರ ಜಟಾಪಟಿ ಜೋರಾಗಿ ನಡೆದಿತ್ತು. ಇದೀಗ ಊರ್ವಶಿ ಅವರಿಗೆ ತನ್ನ ತಪ್ಪಿನ ಅರಿವಾಗಿ ರಿಷಬ್ ಪಂತ್ ಅವರನ್ನ ಕ್ಷಮೆ ಕೇಳಿದ್ದಾರೆ. ಎರಡು ಕೈ ಜೋಡಿಸಿ ಊರ್ವಶಿ ದಯವಿಟ್ಟು ನನ್ನನ್ನ ಕ್ಷಮಿಸಿಬಿಡಿ ಎಂದು ಊರ್ವಶಿ ಕೇಳಿಕೊಂಡಿದ್ದಾರೆ. ಒಟ್ನಲ್ಲಿ ನಟಿ ಊರ್ವಶಿ ರೌಟೇಲಾ ಅವರು ರಿಷಭ್ ಪಂತ್ ಅವರಿಗೆ ಸಾರ್ವಜನಿಕವಾಗಿ ಎರಡೂ ಕೈ ಮುಗಿದು ಕ್ಷಮೆಯಾಚಿಸಿದ್ದಾರೆ. ಸದ್ಯಕ್ಕೆ ಇದು ಬಾಲಿವುಡ್ ನಲ್ಲಿ ಸಖತ್ ಸುದ್ದಿಯಾಗಿದೆ. ಊರ್ವಶಿ ಅವರ ಈ ನಡೆಯ ಬಗ್ಗೆ ಪಾಸಿಟೀವ್ ಮತ್ತು ನೆಗೆಟೀವ್ ಎರಡೂ ಕೂಡ ಕೇಳಿ ಬರುತ್ತಿವೆ.