ಕೊನೆಗೂ ನವೆಂಬರ್ ನಲ್ಲಿ ಮದುವೆಯಾಗಲಿದ್ದಾರೆ ನಟ ರಾಜ್ ಕುಮಾರ್ ಮತ್ತು ಪತ್ರಲೇಖಾ

ಬರೋಬ್ಬರಿ ಹತ್ತು ವರ್ಷಗಳ ಕಾಲ ಲಿವಿಂಗ್ ಟುಗೆದರ್ ರಿಲೇಶನ್ಶಿಪ್ ನಲ್ಲಿದ್ದ ಬಾಲಿವುಡ್ ಸ್ಟಾರ್ ಜೋಡಿ ಇದೀಗ ಸಾಂಪ್ರದಾಯಿಕವಾಗಿ ವಿವಾಹವಾಗಿ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಡಲು ಮನಸ್ಸು ಮಾಡಿದ್ದಾರೆ ಎಂಬ ವಿಚಾರ ಇದೀಗ ಬಿ-ಟೌನ್ ಭಾರಿ ಸುದ್ದಿಯಾಗಿದೆ.ಈ ಬಣ್ಣದ ಲೋಕ ಸಿನಿಮಾ ಕ್ಷೇತ್ರದಲ್ಲಿ ಬಹುತೇಕ ನಟ-ನಟಿಯರು ಪ್ರೀತಿ ಪ್ರೇಮ ಅಂತ ಹೇಳಿ ಪರಸ್ಪರ ಒಬ್ಬರೊಬ್ಬರನ್ನ ಅರ್ಥ ಮಾಡಿಕೊಳ್ಳುವ ಉದ್ದೇಶವಾಗಿ ಜೊತೆಯಾಗಿ ಒಂದಷ್ಟು ದಿನಗಳು ಇರುತ್ತಾರೆ. ಅದೂ ಕನಿಷ್ಟ ಅಂದರು ಆರು ತಿಂಗಳು ವರ್ಷ ಹೆಚ್ಚಾಗಿರುತ್ತದೆ.ಆದರೆ ಹಿಂದಿ ಚಿತ್ರರಂಗದಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ಈ ನಟ ತಮ್ಮ ಪ್ರೇಯಸಿ ಒಟ್ಟಿಗೆ ಸರಿ ಸುಮಾರು ಹತ್ತು ವರ್ಷಗಳಿಂದ ರಿಲೇಶನ್ ಶಿಪ್ ಅಲ್ಲಿದ್ದರೂ ಕೂಡ ಮದುವೆ ಆಗಿರಲಿಲ್ಲ.ಇದೀಗ ಸಾಂಪ್ರದಾಯಿಕವಾಗಿ ಮದುವೆ ಆಗಲು ಸಿದ್ದತೆ ನಡೆಸಿದ್ದಾರೆ ಎಂಬ ಸುದ್ದಿ ಭಾರಿ ಸದ್ದು ಮಾಡುತ್ತಿದೆ.ಅಷ್ಟಕ್ಕೂ ಆ ಸ್ಟಾರ್ ನಟ ಬೇರಾರು ಅಲ್ಲ ರಾಜ್ ಕುಮಾರ್ ರಾವ್.ಬಾಲಿವುಡ್ ನಲ್ಲಿ ನ್ಯಾಶನಲ್ ಅವಾರ್ಡ್ ಪಡೆದಿರುವ ನಟ.

ಅಷ್ಟೇ ಅಲ್ಲದೆ ರಾಜ್ ಕುಮಾರ್ ರಾವ್ ಅವರಿಗೆ ಅನೇಕ ಫಿಲ್ಮ್ ಫೇರ್ ಅವಾರ್ಡ್ ಕೂಡ ಸಂದಿವೆ.2010 ರಲ್ಲಿ ಹನ್ಸಲ್ ಮೆಹ್ತಾ ನಿರ್ದೇಶನದಲ್ಲಿ ಮೂಡಿ ಬಂದ ಸಿಟಿ ಲೈಟ್ಸ್ ಸಿನಿಮಾದ ಮೂಲಕ ಹಿಂದಿ ಚಿತ್ರರಂಗಕ್ಕೆ ಪರಿಚಯವಾದ ನಟಿ ಪತ್ರಲೇಖಾ ಪಾಯಲ್ ರಾಜ್ ಕುಮಾರ್ ರಾವ್ ಅವರಿಗೆ ಜೋಡಿಯಾಗಿ ನಟಿಸಿದ್ದರು.ಈ ಚಿತ್ರದ ಬಳಿಕ ನಟಿ ಪತ್ರಲೇಖಾ ಪಾಯಲ್ ಮತ್ತು ರಾಜ್ ಕುಮಾರ್ ರಾವ್ ಅವರು ಆತ್ಮೀಯತೆರಾಗಿ ಪರಸ್ಪರ ‌ಪ್ರೀತಿಸಲು ಆರಂಭಿಸಿದರು.ಆಗಾಗ ಜೊತೆಯಾಗಿ ಅನೇಕ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು.ಹೊರ ದೇಶಗಳಿಗೆ ಪ್ರವಾಸ ಕೈಗೊಂಡು ಜೋಡಿಯಾಗಿ ಫೋಟೋ ಕೂಡ ತೆಗೆಸಿಕೊಳ್ಳುತ್ತಿದ್ದರು.ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರೀಯರಾಗಿ ತೊಡಗಿಸಿಕೊಂಡಿದ್ದ ಈ ಜೋಡಿ ತಮ್ಮ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿದ್ದರು.

ಇವರಿಬ್ಬರ ಫೋಟೋಗೆ ಮೇಡ್ ಫಾರ್ ಈಚ್ ಅದರ್ ಎಂದು ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು.ಅಂದಹಾಗೆ ಕಳೆದ ಫೆಬ್ರವರಿಯಲ್ಲಿ ವ್ಯಾಲೆಂಟೆನ್ಸ್ ಡೇ ಗೆ ಪರಸ್ಪರ ಒಬ್ಬರಿಗೊಬ್ಬರ ಜೊತೆಯಾಗಿರುವ ಬ್ಲ್ಯಾಕ್ ಅಂಡ್ ವೈಟ್ ಫೋಟೋ ಶೇರ್ ಮಾಡಿಕೊಂಡು ಶುಭಾಶಯ ತಿಳಿಸಿದ್ದರು.ಇದೀಗ ಈ ಜೋಡಿಗಳು ತಮ್ಮ ಸಂಬಂಧಕ್ಕೆ ಅಧಿಕೃತವಾಗಿ ಅರ್ಥ ಕೊಡಲು ಇದೇ ನವೆಂಬರ್ ತಿಂಗಳ ಹತ್ತರಂದು ಮದುವೆ ಆಗುತ್ತಿದ್ದಾರೆ ಎಂಬುದು ಸುದ್ದಿ ಹರಿದಾಡುತ್ತಿದೆ.ಆದರೆ ಈ ಬಗ್ಗೆ ನಟ ರಾಜ್ ಕುಮಾರ್ ರಾವ್ ಮತ್ತು ನಟಿ ಪತ್ರಲೇಖಾ ಪಾಯಲ್ ಯಾವುದೇ ರೀತಿಯ ರಿಯಾಕ್ಟ್ ಮಾಡಿಲ್ಲ.ಈ ಬಗ್ಗೆ ಅವರ ಆಪ್ತ ಮೂಲಗಳು ಇದೊಂದು ಖಾಸಗಿ ಸಮಾರಂಭವಾಗಿರಲಿದೆ ಎಂದಷ್ಟೇ ತಿಳಿಸಿವೆ.

Leave a Reply

%d bloggers like this: