ಕೊನೆಗೂ ಈಡೇರಲಿಲ್ಲ ಅಪ್ಪು ಹಾಗೂ ರಮ್ಯಾ ಅವರ ಆಸೆ, ಬೇಸರ ವ್ಯಕ್ತಪಡಿಸಿದ ನಟಿ ರಮ್ಯಾ ಅವರು

ಹೌದು ನಟ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ನಿಧನ ಕನ್ನಡಿಗರಿಗೆ ಶಾಶ್ವತವಾಗಿ ಕಾಡುವ ದುರಂತ ಕಪ್ಪು ಛಾಯೆ. ಪುನೀತ್ ರಾಜ್ ಕುಮಾರ್ ಅವರು ನಮ್ಮೊಂದಿಗೆ ದೈಹಿಕವಾಗಿ ಮರೆಯಾಗಿ ಒಂದು ವರ್ಷಗಳ ಸನಿಹವಾಗುತ್ತಿವೆ. ಆದರೆ ರಸ್ತೆ ರಸ್ತೆಗಳಲ್ಲಿ ಅವರ ಫೋಟೋಗಳು ರಾರಾಜಿಸುವುದರಲ್ಲಿ ಕಡಿಮೆ ಆಗಿಲ್ಲ. ಅದೂ ಆಗುವುದು ಇಲ್ಲ. ಅಷ್ಟರ ಮಟ್ಟಿಗೆ ಅಪ್ಪು ಅವರು ಕನ್ನಡಿಗರ ಉಸಿರಲ್ಲಿ ಬೆರೆತಿದ್ದಾರೆ. ಇದೇ ಸೆಪ್ಟೆಂಬರ್ 9ರಂದು ಪುನೀತ್ ರಾಜ್ ಕುಮಾರ್ ಅವರು ವಿಶೇಷ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರೋ ಸಿನಿಮಾ ಲಕ್ಕಿ ಮ್ಯಾನ್ ತೆರೆ ಕಾಣುತ್ತಿದೆ. ಕೊನೆಯದಾಗಿ ಅಪ್ಪು ಅವರನ್ನ ಈ ಸಿನಿಮಾದ ಮೂಲಕ ಬೆಳ್ಳಿ ತೆರೆಯಲ್ಲಿ ಕಣ್ತುಂಬಿಕೊಳ್ಳಬಹುದಾಗಿದೆ. ಹಾಗಾಗಿ ಅಪ್ಪು ಅಭಿಮಾನಿಗಳು ಕೂಡ ಲಕ್ಕಿ ಮ್ಯಾನ್ ಸಿನಿಮಾ ನೋಡಲು ಬಹಳ ಕಾತುರದಲ್ಲಿ ಕಾಯುತ್ತಿದ್ದಾರೆ.

ಲಕ್ಕಿ ಮ್ಯಾನ್ ಚಿತ್ರ ಪ್ರಚಾರದ ಸಂದರ್ಶನವೊಂದದರಲ್ಲಿ ನಾಯಕ ನಟ ಡಾರ್ಲಿಂಗ್ ಕೃಷ್ಣ ಅವರು ಆಸಕ್ತಿಕರ ಸಂಗತಿಯೊಂದನ್ನ ತಿಳಿಸಿದ್ದಾರೆ. ಅದೇನೆಂದರೆ ಅಪ್ಪು ಅವರು ಲಕ್ಕಿ ಮ್ಯಾನ್ ಶೂಟಿಂಗ್ ಬಿಡುವಿನ ವೇಳೆ ಕೃಷ್ಣ ಅವರ ಹತ್ತಿರ ಮಾತನಾಡುವಾಗ ತಮ್ಮ ತಂದೆ ಡಾ.ರಾಜ್ ಕುಮಾರ್ ಮತ್ತು ಲಕ್ಷ್ಮಿ ನಟಸಿರೋ ‘ನಾ ನಿನ್ನ ಮರೆಯಲಾರೆ’ ಸಿನಿಮಾವನ್ನ ಪುನರ್ ಸೃಷ್ಟಿ ಮಾಡ್ಬೇಕು ಎಂಬ ಮಹಾದಾಸೆ ಹೊಂದಿದ್ದರಂತೆ. ಅದಕ್ಕಾಗಿ ಯೋಜನೆಯನ್ನ ಕೂಡ ಮಾಡಿದ್ದರಂತೆ. ಈ ಸುದ್ದಿಯನ್ನ ಪತ್ರಕರ್ತೆಯೊಬ್ಬರು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಇದಕ್ಕೆ ನಟಿ ರಮ್ಯಾ ಅವರು ಕೂಡ ಪ್ರತಿಕ್ರಿಯಿಸಿ ಹೌದು ಇದು ನಿಜ. ಅಪ್ಪು ಅವರೊಟ್ಟಿಗೆ ಈ ಸಿನಿಮಾದಲ್ಲಿ ನಟಿಸಬೇಕಿತ್ತು. ಆದರೆ ಆ ಅವಕಾಶವನ್ನ ನಾನು ಮಿಸ್ ಮಾಡಿಕೊಂಡೆ ಎಂದು ತಿಳಿಸಿದ್ದಾರೆ. ರಮ್ಯಾ ಅವರು ಸಿನಿ ರಂಗಕ್ಕೆ ಕಮ್ ಬ್ಯಾಕ್ ಆಗೋದಾದ್ರೆ ಅಪ್ಪು ಅವರೊಟ್ಟಿಗೇನೇ ಆಗ್ಬೇಕು ಅಂತ ಮಹಾದಾಸೆ ಇಟ್ಕೊಂಡಿದ್ರು.

ಆದರೆ ಅದು ಸಾಧ್ಯವಾಗಲಿಲ್ಲ. ಒಂದು ವೇಳೆ ನಾನಿನ್ನ ಮರೆಯಲಾರೆ ಸಿನಿಮಾದಲ್ಲಿ ಅಪ್ಪು ಮತ್ತು ರಮ್ಯಾ ಅವರು ಒಟ್ಟಿಗೆ ನಟಿಸಿದ್ದರೆ ಈ ಚಿತ್ರ ಭಾರಿ ನಿರೀಕ್ಷೆ ಹುಟ್ಟು ಹಾಕುತ್ತಿತ್ತು. ಸದ್ಯಕ್ಕೆ ಪುನೀತ್ ಅವರು ನಟಿಸಬೇಕಾಗಿದ್ದ ಆ ಎಲ್ಲಾ ಸಿನಿಮಾಗಳು ಈಗ ಹಾಗೇ ಉಳಿದಿವೆ. ಅದರಲ್ಲಿಯೂ ಲೂಸಿಯಾ ಪವನ್ ಕುಮಾರ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದ ದ್ವಿತ್ವ ಸಿನಿಮಾದ ಪೋಸ್ಟರ್ ನಲ್ಲಿ ಅಪ್ಪು ಅವರ ಗೆಟಪ್ ಸಖತ್ ಕ್ಯೂರಿಯಾಸಿಟಿ ಹುಟ್ಟು ಹಾಕಿತ್ತು. ಇದೀಗ ಸೆಪ್ಟೆಂಬರ್ 9ರಂದು ಅಪ್ಪು ಅವರು ದೇವರ ಪಾತ್ರದಲ್ಲಿ ನಟಿಸಿರುವ ಲಕ್ಕಿ ಮ್ಯಾನ್ ಸಿನಿಮಾ ರಿಲೀಸ್ ಆಗುತ್ತಿದೆ. ಈ ಚಿತ್ರದಲ್ಲಿ ಇಂಡಿಯನ್ ಮೈಕಲ್ ಜಾಕ್ಸನ್ ಎನಿಸಿಕೊಳ್ಳೋ ಪ್ರಭುದೇವ ಅವರು ಅಪ್ಪು ಅವರ ಜೊತೆ ಮಸ್ತ್ ಡ್ಯಾನ್ಸ್ ಸ್ಟೆಪ್ ಹಾಕಿದ್ದಾರೆ. ಇದರ ಒಂದಷ್ಟು ಝಲಕ್ ಈಗಾಗಲೇ ಸಿನಿ ಪ್ರೇಕ್ಷಕರಿಗೆ ಮೋಡಿ ಮಾಡಿದೆ.

Leave a Reply

%d bloggers like this: