ಕೊನೆಗೂ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಎಸ್ ನಾರಾಯಣ ಮಗ ಪಂಕಜ್! ಹುಡುಗಿ ಇವರೇ ನೋಡಿ

ಕನ್ನಡ ಚಿತ್ರರಂಗದ ಸುಪ್ರಸಿದ್ದ ನಟ,ನಿರ್ದೇಶಕ ಕಲಾ ಸಾಮ್ರಾಟ್ ಖ್ಯಾತಿಯ ಎಸ್.ನಾರಾಯಣ್ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ನೋಡೋಣ. ಎಸ್ ನಾರಾಯಣ ಅವರ ಪುತ್ರ ನಟ ಪಂಕಜ್ ವೈವಾಹಿಕ ಬದುಕಿಗೆ ಹೆಜ್ಜೆ ಇಟ್ಟಿದ್ದಾರೆ. ರಕ್ಷಾ ಎಂಬುವವರನ್ನು ತಮ್ಮ ಬಾಳ ಸಂಗಾತಿಯಾಗಿ ಸ್ವೀಕರಿಸುವ ಮೂಲಕ ನಟ ಪಂಕಜ್ ಗೃಹಾಸ್ಥಾಶ್ರ‌ಮಕ್ಕೆ ಪ್ರವೇಶ ಮಾಡಿದ್ದಾರೆ. ಎಸ್.ನಾರಾಯಣ್ ಅವರಿಗೆ ಒಬ್ಬರು ಪುತ್ರಿ ಇಬ್ಬರು ಪುತ್ರರಿದ್ದಾರೆ. ಈಗಾಗಲೇ ಪುತ್ರಿ ವಿಧ್ಯಾ ಮತ್ತು ಪವನ್ ಅವರಿಗೆ ಮದುವೆ ಮಾಡಿದ್ದ ಎಸ್.ನಾರಾಯಣ್ ಅವರು ಇದೀಗ ಪಂಕಜ್ ಅವರಿಗೂ ಕೂಡ ಮದುವೆ ಮಾಡಿದ್ದಾರೆ. ತಮ್ಮ ಕುಟುಂಬಸ್ಥರ ಸಮಕ್ಷಮದಲ್ಲಿ ನವೆಂಬರ್ 22 ರಂದು ಸರಳವಾಗಿ ಮೈಸೂರಿನ ಸ್ಪೆಕ್ಟ್ರಾ ಕನ್ವೆನ್ಶನ್ ಹಾಲ್ ನಲ್ಲಿ ನಡೆಯಿತು.

ಇನ್ನು ಪಂಕಜ್ ಮತ್ತು ರಕ್ಷಾ ನವ ಜೋಡಿಗಳಿಗೆ ಶುಭ ಹಾರೈಸಲು ರಾಜಕೀಯರಂಗದ ಚೆಲುವರಾಯಸ್ವಾಮಿ ಸೇರಿದಂತೆ ಸಿನಿಮಾ ರಂಗದಲ್ಲಿ ನಟ ದರ್ಶನ್, ಚಿಕ್ಕಣ್ಣ, ವಿನೋದ್ ಪ್ರಭಾಕರ್,ಭಾರತಿ ವಿಷ್ಣುವರ್ನನ್ ಕುಟುಂಬ,ನಟಿ ಶ್ವೇತಾ ಚಂಗಪ್ಪ ಹಾಜರಿದ್ದರು. ಇನ್ನು ನಟ ಪಂಕಜ್ ತಮ್ಮ ತಂದೆಯ ಜೊತೆಗೆ ಬಾಲ್ಯದಿಂದಲೂ ಸಿನಿಮಾದ ಒಡನಾಟ ಬೆಳೆಸಿಕೊಂಡಿದ್ದರು. ಎಸ್.ನಾರಾಯಣ್ ಅವರ ನಾಯಕತ್ವದ ವಿಶಾಲಕ್ಷ್ಮಮ್ಮನ ಗಂಡ ಚಿತ್ರದಲ್ಲಿ ಪಂಕಜ್ ನಾರಾಯಣ್ ಅವರ ಮಗನ ಪಾತ್ರದಲ್ಲಿ ನಟಿಸಿದ್ದರು.

ತದ ನಂತರ ನಾಯಕ ನಟರಾಗಿ ಚೈತ್ರದ ಚಂದ್ರಮ,ಚೆಲುವಿನ ಚಿಲಿಪಿಲಿ, ದುಷ್ಟ, ದಕ್ಷ, ಸೇರಿದಂತೆ ಕಳೆದ ವರ್ಷ ತೆರೆಕಂಡ ದರ್ಶನ್ ಅಭಿನಯದ ಒಡೆಯ ಸಿನಿಮಾದಲ್ಲಿಯೂ ಕೂಡ ನಟಿಸಿದ್ದರು. ಇನ್ನು ನಟ ಪಂಕಜ್ ಸದ್ಯಕ್ಕೆ ತಮ್ಮ ಜೊತೆಯವರೊಂದಿಗೆ ಸಹಾಯಕ ನಿರ್ದೇಶಕರಾಗಿ ಹೊಸದೊಂದು ಪ್ರಾಜೆಕ್ಟ್ ನಲ್ಲಿ ತೊಡಗಿಕೊಂಡಿದ್ದಾರೆ.ಈ ಚಿತ್ರಕ್ಕೆ ನಟ ಆದಿತ್ಯ ನಾಯಕ ನಟರಾಗಿ ನಟಿಸುತ್ತಿದ್ದಾರೆ. ಇದರ ನಡುವೆ ಪಂಕಜ್ ರಕ್ಷಾ ಎಂಬುವರೊಟ್ಟಿಗೆ ಹೊಸ ಬದುಕಿಗೆ ಕಾಲಿಟ್ಟಿದ್ದಾರೆ.

Leave a Reply

%d bloggers like this: