ಕೊನೆಗೂ ಬಾಲಿವುಡ್ ಚಿತ್ರರಂಗಕ್ಕೆ ಹಾರಿದ ದಕ್ಷಿಣ ಭಾರತದ ಸ್ಟಾರ್ ನಟಿ

ಹೌದು ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ನಟಿ ಸಮಂತಾ ಅವರು ಸದ್ಯಕ್ಕೆ ಭಾರಿ ಬೇಡಿಕೆಯಲ್ಲಿರೋ ನಟಿ. ಅಲ್ಲು ಅರ್ಜುನ್ ಅಭಿನಯದ ಪ್ಯಾನ್ ಇಂಡಿಯಾ ಪುಷ್ಪಾ ಸಿನಿಮಾದಲ್ಲಿನ ಹ್ಞೂಂ ಅಂತೀಯಾ ಮಾವ ಹಾಡಿನಲ್ಲಿ ಸಖತ್ ಬೋಲ್ಡ್ ಆಗಿ ಹೆಜ್ಜೆ ಹಾಕೋ ಮೂಲಕ ಭಾರತೀಯ ಚಿತ್ರರಂಗದಾದ್ಯಂತ ಅಪಾರ ಜನಪ್ರಿಯತೆ ಗಳಿಸಿದರು. ಪಡ್ಡೆ ಹುಡುಗ್ರು ಮಾತ್ರ ಸಮಂತಾ ಅವರ ಬೋಲ್ಡ್ ನಟನೆಗೆ ಫಿಧಾ ಆಗ್ಬಿಟ್ಟಿದ್ದಾರೆ. ಈ ಚಿತ್ರದ ನಂತರ ಬಾಲಿವುಡ್ ನಲ್ಲಿ ಸಮಂತಾ ಅವರು ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು಼. ಆದರೆ ಅವು ಸ್ಪಷ್ಟತೆಯನ್ನ ಹೊಂದಿರಲಿಲ್ಲ. ಆದರೆ ಇದೀಗ ನಟಿ ಸಮಂತಾ ಅವರು ಬಾಲಿವುಡ್ ಸ್ಟಾರ್ ನಟ ಆಯುಷ್ಮಾನ್ ಖುರಾನ್ ಅವರ ಜೊತೆ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಈ ಹೊಸ ಚಿತ್ರವನ್ನು ಈ ಹಿಂದೆ ಸ್ತ್ರೀ ಎಂಬ ಚಿತ್ರ ಮಾಡಿ ಗೆದ್ದಿದ್ದ ನಿರ್ದೇಶಕ ಅಮರ್ ಕೌಶಿಕ್ ಅವರು ನಿರ್ದೇಶನ ಮಾಡುತ್ತಿದ್ದಾರೆ.

ಇದೊಂದು ಹಾರರ್ ಸಿನಿಮಾ ಆಗಿದೆಯಂತೆ. ಈ ಸಿನಿಮಾದಲ್ಲಿ ಸಮಂತಾ ಅವರು ದೆವ್ವದ ಪಾತ್ರದಲ್ಲಿ ನಟಿಸಲಿದ್ದಾರಂತೆ. ಅದರ ಜೊತೆಗೆ ರಜಪೂತ ರಾಣಿಯಾಗಿಯೂ ಕೂಡ ಕಾಣಿಸಿಕೊಳ್ಳಲಿದ್ದಾರೆ ಎಂದು ಚಿತ್ರ ತಂಡದಿಂದ ತಿಳಿದು ಬಂದಿದೆ. ಇಲ್ಲಿವರೆಗೆ ಸಖತ್ ಬೋಲ್ಡ್, ಗ್ಲಾಮರ್ ಅಂಡ್ ಡಿ ಗ್ಲಾಮರ್ ಲುಕ್ ನಲ್ಲಿ ಕಾಣಿಸಿಕೊಂಡಿರೋ ಸಮಂತಾ ಅವರು ಈ ಹಾರರ್ ಸಿನಿಮಾದಲ್ಲಿ ದೆವ್ವವಾಗಿ ಯಾವ ರೀತಿ ಕಾಣಿಸಿಕೊಳ್ಳಲಿದ್ದಾರೆ ಎಂದು ಅವರ ಅಭಿಮಾನಿಗಳು ಭಾರಿ ಕಾತುರದಿಂದ ಕಾಯುತ್ತಿದ್ದಾರೆ. ಈ ಸಿನಿಮಾದ ಕಥೆ ರಾಜಸ್ತಾನದ ಹಳ್ಳಿಯೊಂದರಲ್ಲಿ ನಡೆಯಲಿದೆಯಂತೆ. ಸೌತ್ ಸಿನಿ ರಂಗದಲ್ಲಿ ಬಿಝಿ ಆಗಿದ್ದ ನಟಿ ಸಮಂತಾ ಅವರು ಇದೀಗ ಹಾರರ್ ಸಿನಿಮಾದ ಮೂಲಕ ಬಾಲಿವುಡ್ ಗೆ ಸಖತ್ ಆಗಿಯೇ ಎಂಟ್ರಿ ಕೊಡುತ್ತಿದ್ದಾರೆ. ಇನ್ನು ಇದರ ಜೊತೆಗೆ ನಟಿ ಸಮಂತಾ ಅವರು ಇತ್ತೀಚೆಗೆ ವಿಜಯ್ ದೇವರಕೊಂಡ ಅವರೊಟ್ಟಿಗೆ ಒಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.