ಕೊನೆಗೂ ಬರುತ್ತಿದೆ ಕನ್ನಡದ ದೊಡ್ಡ ಬಜೆಟ್ ಚಿತ್ರ, ಟೀಸರ್ ದಿನಾಂಕ ಫಿಕ್ಸ್, ಚಿತ್ರತಂಡದಿಂದ ಘೋಷಣೆ

ಬಹು ದಿನಗಳಿಂದ ಬಹಳ ಕಾತುರದಲ್ಲಿ ಇರಿಸಿದ್ದ ಕಬ್ಜ ಸಿನಿಮಾದ ಟೀಸರ್ ಲಾಂಚ್ ಡೇಟ್ ಅಂಡ್ ಟೈಮ್ ಫಿಕ್ಸ್ ಆಗಿದೆ. ಕನ್ನಡದಲ್ಲಿ ಕೆಜಿಎಫ್ ಸಿನಿಮಾದ ನಂತರ ಪ್ಯಾನ್ ಇಂಡಿಯಾ ಎರಾ ಸ್ಟಾರ್ಟ್ ಆಗಿದೆ. ಕೆಜಿಎಫ್ ಸಿನಿಮಾ ಪ್ಯಾನ್ ಇಂಡಿಯಾ ರಿಲೀಸ್ ಆಗಿ ನಿರೀಕ್ಷೆಗೂ ಮೀರಿ ಯಾರೂ ಕೂಡ ಊಹೆ ಮಾಡದಷ್ಟು ಅಪಾರ ಯಶಸ್ಸು ಜೊತೆಗೆ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿಬಿಡ್ತು.ಈ ಸಿನಿಮಾದ ಯಶಸ್ಸೇ ಇಂದು ಕನ್ನಡದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳು ತಯಾರಾಗೋದಕ್ಕೆ ಒಂದು ಭಧ್ರಬುನಾದಿ ಅಂತೇಳ್ಬೋದು. ಅದ್ರಂತೆ ಇದೀಗ ಕನ್ನಡದ ಮತ್ತೊಂದು ಅದ್ದೂರಿ ವೆಚ್ಚದ ಪ್ಯಾನ್ ಇಂಡಿಯಾ ಸಿನಿಮಾ ಅಂದ್ರೆ ಅದು ರಿಯಲ್ ಸ್ಟಾರ್ ಉಪೇಂದ್ರ ಮತ್ತು ಬಾದ್-ಶಾ ಕಿಚ್ಚ ಸುದೀಪ್ ಅಭಿನಯದ ಕಬ್ಜ ಸಿನಿಮಾ. ಈ ಕಬ್ಜ ಸಿನಿಮಾವನ್ನ ಕನ್ನಡದ ಖ್ಯಾತ ನಿರ್ದೇಶಕ ಆರ್.ಚಂದ್ರು ನಿರ್ದೇಶನ ಮಾಡುವುದರ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನ ಕೂಡ ವಹಿಸಿಕೊಂಡಿದ್ದಾರೆ.

ಕೋವಿಡ್ ಸಂಕಷ್ಟದ ನಡುವೆಯಿಂದಾನೂ ಒಂದಷ್ಟು ವರ್ಷಗಳಿಂದ ಕಬ್ಜ ಸಿನಿಮಾದ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಈ ಚಿತ್ರದಲ್ಲಿ ಉಪೇಂದ್ರ ಅವರ ಲುಕ್ ಬಹಳ ವಿಭಿನ್ನವಾಗಿದೆ. ಈಗಾಗಲೇ ಕಬ್ಜ ಚಿತ್ರದ ಪೋಸ್ಟರ್ ರಿಲೀಸ್ ಆಗಿದ್ದು, ಉಪ್ಪಿ ಮತ್ತು ಕಿಚ್ಚ ಸುದೀಪ್ ಅವರ ಗೆಟಪ್ ಸಿನಿ ಪ್ರಿಯರಲ್ಲಿ ಕುತೂಹಲ ಮೂಡಿಸಿದೆ. ಕಬ್ಜ ಸಿನಿಮಾ ಯಾವಾಗ ಬರುತ್ತೆ ಅಂತ ಬಹಳ ದಿನಗಳಿಂದ ಅಭಿಮಾನಿಗಳು ಭಾರಿ ಕಾತುರದಿಂದ ಕಾಯ್ತಿದ್ರು. ನಿರ್ದೇಶಕ ಆರ್.ಚಂದ್ರು ಅವ್ರು ಕೂಡ ಕಬ್ಜ ಚಿತ್ರದ ಬಗ್ಗೆ ಯಾವ್ದೇ ರೀತಿ ಅಪ್ ಡೇಟ್ಸ್ ನೀಡಿರ್ಲಿಲ್ಲ. ಆದ್ರೀಗ ಕೊನೆಗೂ ಕಬ್ಜ ಚಿತ್ರದ ಲೇಟೆಸ್ಟ್ ಅಪ್ ಡೇಟ್ ತಿಳಿಸಿದ್ದಾರೆ. ಅದೇನಪ್ಪಾ ಅಂದ್ರೆ ಕಬ್ಜ ಚಿತ್ರದ ಟೀಸರ್ ಅನ್ನ ಇದೇ ಸೆಪ್ಟೆಂಬರ್ 17ರಂದು ಸಂಜೆ 5ಗಂಟೆಗೆ ರಿವೀಲ್ ಮಾಡಲಾಗುತ್ತಿದೆ. ಈ ಕಬ್ಜ ಸಿನಿಮಾದ ಟೀಸರ್ ಆನಂದ್ ಆಡಿಯೋ ಮೂಲಕ ಹೊರ ಬರಲಿದೆ. ಈ ಸುದ್ದಿ ಉಪ್ಪಿ ಮತ್ತು ಕಿಚ್ಚ ಸುದೀಪ್ ಅಭಿಮಾನಿ ಬಳಗ ಸಖತ್ ಖುಷಿ ನೀಡಿದ್ದು, ಕಬ್ಜ ಸಿನಿಮಾಗೆ ಶುಭ ಹಾರೈಸಿದ್ದಾರೆ.

Leave a Reply

%d bloggers like this: