ಕೊನೆಗೂ ಅಧಿಕೃತವಾಗಿ ಸಿಹಿಸುದ್ದಿ ಹಂಚಿಕೊಂಡ ನಟಿ ರಮ್ಯಾ.. ನೋಡಿ ಒಮ್ಮೆ

ಹೌದು ಚಂದನವನದ ಎವರ್ಗೀನ್ ಚೆಲುವೆ ಬ್ಯೂಟಿ ಕ್ವೀನ್ ನಟಿ ರಮ್ಯಾ ಅವರು ಇತ್ತೀಚೆಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಹಾಗಂತ ಯಾವುದೇ ಸಿನಿಮಾ, ರಾಜಕೀಯ ವಿಚಾರವಾಗಿ ಮಾಧ್ಯಮಗಳೆದುರು ಬಂದಿದ್ದಾರೆ ಅಂತಲ್ಲ. ನಟಿ ರಮ್ಯಾ ಅವರು ಬಹಳ ವರ್ಷಗಳ ನಂತರ ಮಾಧ್ಯಮಗಳೆದುರು ಕಾಣಿಸಿಕೊಳ್ಳುವುದಕ್ಕೆ ಬಹು ಮುಖ್ಯ ಕಾರಣ ಅಂದರೆ ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಉದ್ಯಮಿ ದಿವಂಗತ ಅದಿಕೇಶವುಲು ಅವರ ಮೊಮ್ಮಗ ಆದಿ ಮೂಕ ಪ್ರಾಣಿ ಲಾರಾ ಎಂಬ ಶ್ವಾನದ ಮೇಲೆ ಕಾರು ಹತ್ತಿಸಿ ಅದರ ಸಾವಿಗೆ ಕಾರಣವಾಗಿದ್ದಾನೆ. ಇವನ ಈ ದುರ್ನಡತೆಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಪ್ರತಿರೋಧ ವ್ಯಕ್ತವಾಗಿತ್ತು. ಅದರಂತೆ ನಟಿ ರಮ್ಯಾ ಕೂಡ ಲಾರಾ ಎಂಬ ಈ ಶ್ವಾನದ ಸಾವಿಗೆ ಕಾರಣ ವ್ಯಕ್ತಿಯ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಆಗ್ರಹಿಸಿ ಪೋಸ್ಟ್ ಹಾಕಿದ್ದರು.

ನಟಿ ರಮ್ಯಾ ಅವರಿಗೆ ಮೊದಲಿಂದಾನೂ ಪ್ರಾಣಿಗಳ ಮೇಲೆ ಅಪಾರ ಪ್ರೀತಿಯಂತೆ. ಹಾಗಾಗಿ ಶ್ವಾನ ಲಾರಾದ ಅಂತ್ಯ ಕ್ರಿಯೆಯಲ್ಲಿ ಸ್ವತಃ ಅವರೇ ಭಾಗಿಯಾಗಿದ್ದರು. ಅಷ್ಟೇ ಅಲ್ಲದೆ ಈ ಶ್ವಾನದ ಸಾವಿಗೆ ಕಾರಣರಾದ ವ್ಯಕ್ತಿಗೆ ಶಿಕ್ಷೆಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಮಾಹಿತಿಯನ್ನ ಕೂಡ ಪಡೆದುಕೊಂಡಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿದ ರಮ್ಯಾ ಅವರು ನನಗೆ ಸೋದರ ಸೋದರಿ ಯಾರೂ ಇಲ್ಲ. ನಾನೊಬ್ಬಳೇ ಆದ ಕಾರಣ ಬಾಲ್ಯದಿಂದ ನಾನು ಮೂಕ ಪ್ರಾಣಿಯಾದ ನಾಯಿಯೊಂದಿಗೆ ವಿಶೇಷವಾದ ಭಾಂಧವ್ಯ ಬೆಳೆಸಿಕೊಂಡಿದ್ದಾನೆ. ಇವುಗಳಲ್ಲಿರುವ ಶೇಕಡ 5 ರಷ್ಟು ಮಾನವೀಯತೆ ನಿಯತ್ತು, ಕಾಳಜಿ ಮನುಷ್ಯರಾದ ನಮ್ಮಲ್ಲಿದ್ದರೆ ಜಗತ್ತು ಸುಂದರವಾಗಿರುತ್ತಿತ್ತು ಎಂದು ತಮ್ಮ ಮತ್ತು ಪ್ರಾಣಿಗಳ ನಡುವೆ ಇರುವ ಭಾಂಧವ್ಯದ ಪ್ರೀತಿಯನ್ನ ಹಂಚಿಕೊಂಡರು. ಇದರ ಜೊತೆಗೆ ಸಿನಿಮಾ ಕ್ಷೇತ್ರಕ್ಕೆ ಮತ್ತೆ ಮರಳುವ ಬಗ್ಗೆ ಉತ್ತರಿಸಿದ ನಟಿ ರಮ್ಯಾ ಅವರು ಈಗಾಗಲೇ ಸಿನಿಮಾವೊಂದರ ಕಥೆ ಕೇಳಿ ಅದರ ಚಿತ್ರಕಥೆಯನ್ನ ಓದುತ್ತಿದ್ದಾರಂತೆ.

ಮಾರ್ಚ್ ತಿಂಗಳಿನಲ್ಲಿ ಅದರ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತೇನೆ ಎಂದು ತಿಳಿಸಿದ್ದಾರೆ. ಇನ್ನು ತಮ್ಮ ನೆಚ್ಚಿನ ನಟಿ ರಮ್ಯಾ ಮತ್ತೆ ಬೆಳ್ಳಿ ಪರದೆಯಲ್ಲಿ ಕಾಣಿಸಿಕೊಳ್ಳಬೇಕು ಎಂದು ಮಹಾದಾಸೆ ಹೊಂದಿದ್ದ ಅವರ ಲಕ್ಷಾಂತರ ಅಭಿಮಾನಿಗಳು ರಮ್ಯಾ ಅವರ ಈ ಮಾತುಗಳನ್ನ ಕೇಳಿ ಫುಲ್ ಖುಷ್ ಆಗಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಬಿಝಿಯಾಗಿರುವ ರಮ್ಯಾ ಅವರು ಆಗಾಗ ಒಂದಷ್ಟು ತಮ್ಮ ಫೋಟೊಗಳನ್ನ ಶೇರ್ ಮಾಡಿಕೊಂಡು ತಮ್ಮ ದೈನಂದಿನ ಚಟುವಟಿಕೆಗಳ ಬಗ್ಗೆ ಅಪ್ ಡೇಟ್ಸ್ ನೀಡುತ್ತಿರುತ್ತಾರೆ. ಒಟ್ಟಾರೆಯಾಗಿ ನಟಿ ರಮ್ಯಾ ಅವರು ಬಣ್ಣದ ಲೋಕಕ್ಕೆ ರೀ ಎಂಟ್ರಿ ಕೊಡುತ್ತಿರುವುದು ಬೆಳ್ಳಿ ಪರದೆಯಲ್ಲಿ ಹೊಸ ಮೆರಗನ್ನು ಕಾಣಬಹುದು ಎಂಬುದು ಅವರ ಅಭಿಮಾನಿಗಳ ಅನಿಸಿಕೆ ಅಭಿಪ್ರಾಯವಾಗಿದೆ.