ಕೊನೆಗೂ 39ನೇ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ನಟಿ ರಮ್ಯಾ!

ಕನ್ನಡ ಚಿತ್ರರಂಗದ ಎವರ್ಗೀನ್ ಚೆಲುವೆ ಇತ್ತೀಚೆಗೆ ತಮ್ಮ ಜನ್ಮದಿನದ ಪ್ರಯುಕ್ತ ಅವರ ಅಭಿಮಾನಿಗಳಿಗೆ ಗುಡ್ ನ್ಯೂಸ್ ವೊಂದನ್ನು ನೀಡಲಿದ್ದಾರೆ ಎಂಬ ಸುದ್ದಿ ಇತ್ತು. ಹೌದು ಸ್ಯಾಂಡಲ್ ವುಡ್ ಪದ್ಮಾವತಿ ಎವರ್ಗೀನ್ ಬ್ಯೂಟಿ ಕ್ವೀನ್ ನಟಿ ರಮ್ಯಾ ಅವರು ಇತ್ತೀಚೆಗೆ ತಮ್ಮ 39 ನೇ ವರ್ಷದ ಹುಟ್ಟು ಹಬ್ಬವನ್ನು ತಮ್ಮ ಗೆಳೆಯರೊಟ್ಟಿಗೆ ಭರ್ಜರಿಯಾಗಿ ಆಚರಿಸಿಕೊಂಡಿದ್ದಾರೆ. ತಮ್ಮ ಹುಟ್ಟು ಹಬ್ಬದ ಸಂಭ್ರಮದ ಫೋಟೋಗಳನ್ನು ತಮ್ಮ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ನಟಿ ರಮ್ಯಾ ಅವರು ಸಖತ್ ಕ್ಯೂಟ್ ಆಗಿ ಕಾಣಿಸುತ್ತಿದ್ದಾರೆ. ಇಂದಿಗೂ ಕೂಡ ಅದೇ ಚಾರ್ಮ್ ಉಳಿಸಿಕೊಂಡಿರುವ ನಟಿ ರಮ್ಯಾ ಅಭಿಮಾನಿಗಳಿಗೆ ತಮ್ಮ ಜನ್ಮದಿನದಂದು ಹೊಸದೊಂದು ಶುಭ ಸುದ್ದಿ ನೀಡುತ್ತಾರೆ ಎಂದು ನಿರೀಕ್ಷೆ ಮಾಡಲಾಗಿತ್ತು. ಐದಾರು ವರ್ಷಗಳಿಂದ ಸಿನಿಮಾರಂಗದಿಂದ ದೂರ ಉಳಿದಿರುವ ರಮ್ಯಾ ಮತ್ತೆ ಬಣ್ಣ ಹಚ್ಚಬೇಕು ಎಂಬುದು ಅವರ ಫ್ಯಾನ್ಸ್ ಆಶಯ.

ರಮ್ಯಾ ರಾಜಕೀಯ ಕ್ಷೇತ್ರದ ಆಸಕ್ತಿಯಿಂದಾಗಿ ಚಿತ್ರರಂಗ ತೊರೆದು ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಕೊಂಡರು. ಆದರೆ ಒಂದಷ್ಟು ವರ್ಷಗಳ ಕಾಲ ಸಕ್ರೀಯವಾಗಿ ಇದ್ದ ರಮ್ಯಾ ತದ ನಂತರ ರಾಜಕೀಯ ಕ್ಷೇತ್ರಕ್ಕೂ ಗುಡ್ ಬಾಯ್ ಹೇಳಿ ಓದು,ವಿದೇಶ ಪ್ರವಾಸ ಅಂತ ವರ್ಷಗಳ ಕಾಲ ಸಾರ್ವಜನಿಕ ಜೀವನದ ಜೊತೆಗೆ ಎಲ್ಲಾ ಸೋಶಿಯಲ್ ಮೀಡಿಯಾಗಳಿಂದ ಅಂತರ ಕಾಯ್ದುಕೊಂಡರು. ಇದೀಗ ರಮ್ಯಾ ಮತ್ತೆ ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಆಕ್ಟಿವ್ ಆಗಿದ್ದು, ತಮ್ಮ ದೈನಂದಿನ ಚಟುವಟಿಕೆಗಳು ಮತ್ತು ಒಂದಷ್ಟು ಪ್ರಚರಿತ ಘಟನೆಗಳ ಬಗ್ಗೆ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನ ಶೇರ್ ಮಾಡಿಕೊಳ್ಳುತ್ತಾ, ತಮ್ಮ ಒಂದಷ್ಟು ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. 20 ರ ದಶಕದಲ್ಲಿ ಕನ್ನಡ ಚಿತ್ರರಂಗದ ಅತ್ಯಂತ ಜನಪ್ರಿಯತೆಯ ಉತ್ತುಂಗದಲ್ಲಿದ್ದ ನಟಿ ರಮ್ಯಾ ಇಂದಿಗೂ ಕೂಡ ಯಾವ ಸ್ಟಾರ್ ನಟನಿಗೂ ಕಮ್ಮಿ ಇಲ್ಲದಂತಹ ಫ್ಯಾನ್ ಫಾಲೋವರ್ಸ್ ಹೊಂದಿದ್ದಾರೆ.

ಇವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದಾಗಲೆಲ್ಲಾ ಅವರ ಅಭಿಮಾನಿಗಳು ಕೇಳುವ ಪ್ರಶ್ನೆ ಅಂದರೆ ನೀವು ಮತ್ತೆ ಸಿನಿಮಾಗಳಲ್ಲಿ ನಟಿಸಬೇಕು ಎಂಬುದು. ಇನ್ನು ಇತ್ತೀಚೆಗೆ ಅಪ್ಪು ಅವರ ಅಂತಿಮ ದರ್ಶನಕ್ಕೆ ಬಂದ ರಮ್ಯಾ ಅವರು ತುಂಬಾ ಭಾವುಕರಾಗಿ ನಾನು ಮತ್ತೆ ಸಿನಿಮಾರಂಗಕ್ಕೆ ಬರುವುದಾದರೆ ಅದು ಪುನೀತ್ ಅವರೊಟ್ಟಿಗೆ ಎಂದು ಅಪ್ಪು ಅವರಿಗೂ ಹೇಳಿದ್ದೆ ಎಂದು ತಮ್ಮ ಮನದಾಳದ ಇಂಗಿತವನ್ನು ವ್ಯಕ್ತಪಡಿಸಿದ್ದರು. ಅಂತೆಯೇ ಅಪ್ಪು ಅವರ ಜೊತೆ ಇದ್ದ ಉತ್ತಮ ಸ್ನೇಹ ಭಾಂಧವ್ಯವನ್ನು ಸುಧೀರ್ಘ ಪತ್ರ ಬರೆಯುವ ಮೂಲಕ ಹಂಚಿಕೊಂಡಿದ್ದರು. ಇದಾದ ನಂತರ ನಟಿ ರಮ್ಯಾ ಅವರು ಇತ್ತೀಚೆಗೆಷ್ಟೇ ಬೆಂಗಳೂರಿಗೆ ಬಂದಿಳಿದಿದ್ದರು. ಆಗ ಅವರ ಅಭಿಮಾನಿಗಳಲ್ಲಿ ಮತ್ತೆ ಸಿನಿಮಾಗಳಲ್ಲಿ ನಟಿಸಬಹುದು. ಆ ಕಾರಣಕ್ಕಾಗಿ ಸಿನಿಮಾವೊಂದರ ಮಾತುಕತೆಗಾಗಿ ಬಂದಿರಬಹುದು ಎಂದು ಊಹೆ ಮಾಡಿದ್ದರು. ಆದರೆ ಇವೆಲ್ಲಾ ಸಂಪೂರ್ಣ ಊಹಾಪೋಹಾ ಸುದ್ದಿಯಾಗಿಯೇ ಉಳಿದು ಹೋಯಿತು.