ಕೊಹ್ಲಿ ಮನೆಗಿಂತ ದುಬಾರಿ ಮನೆ ಖರೀದಿಸಿದ ಏಕೈಕ ಕ್ರಿಕೆಟ್ ಆಟಗಾರ ಇವರೇ, ಯಾವ ಅರಮನೆಗೂ ಕಮ್ಮಿ ಇಲ್ಲ

ನಮಸ್ಕಾರ ಸ್ನೇಹಿತರೆ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ನೋಡೋಣ. ಸಾಮಾನ್ಯವಾಗಿ ಈ ಸಿನಿಮಾ ಸೆಲೆಬ್ರಿಟಿಗಳು,ಉದ್ಯಮಿಗಳು,ರಾಜಕೀಯ ವ್ಯಕ್ತಿಗಳು ಹತ್ತು ಹಲವು ಆದಾಯದ ಮೂಲಗಳನ್ನು ಹೊಂದಿರುತ್ತಾರೆ.ಅದರಲ್ಲಿಯೂ ಕ್ರೀಡಾ ಕ್ಷೇತ್ರದಲ್ಲಿರುವ ಬಹುತೇಕ ಕ್ರೀಡಾಪಟುಗಳು ಕ್ರೀಡೆಯಲ್ಲಿ ಸಂಪಾದಿಸುವುದರ ಜೊತೆಗೆ ಅನೇಕ ಪ್ರಾಡಕ್ಟ್ ಗಳ ಪ್ರಮೋಶನ್ ಮಾಡುವುದು ಅಥವಾ ಪ್ರತ್ಯೇಕವಾಗಿ ಒಂದು ಕಂಪನಿಯ ರಾಯಭಾರಿಯಾಗಿ ಕೋಟ್ಯಾಂತರ ರೂ.ಗಳ ಸಂಭಾವನೆ ಪಡೆಯುತ್ತಾರೆ.ಸದ್ಯಕ್ಕೆ ಕ್ರಿಕೆಟ್ ಜಗತ್ತಿನಲ್ಲಿ ಅಪಾರ ಜನಪ್ರಿಯತೆ ಮತ್ತು ಹೆಚ್ಚು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಕ್ರಿಕೆಟಿಗ ಅಂದರೆ ಅದು ವಿರಾಟ್ ಕೊಹ್ಲಿ.ವಿರಾಟ್ ಕೊಹ್ಲಿ ವಾರ್ಷಿಕವಾಗಿ ನೂರಾರು ಕೋಟಿ ವರಮಾನ ಹೊಂದಿದ್ದಾರೆ.ಅವರ ಜೀವನ ಶೈಲಿ ಕೂಡ ಐಷಾರಾಮಿ ಆಗಿದ್ದು,ದುಬಾರಿ ಬೆಲೆಯ ಬೃಹತ್ ಐಷಾರಾಮಿ ಬಂಗಲೆಯಲ್ಲಿ ವಾಸ ಮಾಡುತ್ತಿರುತ್ತಾರೆ.

ಆದರೆ ಇವರನ್ನು ಕೂಡ ಮೀರಿಸುವಂತಹ ಭಾರತದ ಖ್ಯಾತ ಕ್ರಿಕೆಟಿಗ ಸಿಕ್ಸರ್ ಸಿಂಗ್ ಎಂದೇ ಕರೆಯಲ್ಪಡುವ ಯುವರಾಜ್ ಸಿಂಗ್ ಅವರು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಐಷಾರಾಮಿ ಬಂಗಲೆಯನ್ನು ಕೂಡ ಮೀರಿಸುವಂತಹ ಬಂಗಲೆಯನ್ನು ಹೊಂದಿದ್ದಾರೆ.ಕ್ಯಾನ್ಸರ್ ಕಾಯಿಲೆಯಿಂದ ಗೆದ್ದು ಬಂದಿರುವ ಯುವರಾಜ್ ಸಿಂಗ್ ಇದೀಗ ಮತ್ತೆ ಒಂದಷ್ಟು ಜಾಹೀರಾತುಗಳಲ್ಲಿ ತೊಡಗಿಸಿಕೊಂಡಿದ್ದಾರೆ.ಯುವರಾಜ್ ಸಿಂಗ್ ಅವರು ವಿಶ್ವಕಪ್ ಕ್ರಿಕೆಟ್ ನಲ್ಲಿ ಅಮೋಘ ಪ್ರದರ್ಶನ ನೀಡಿ ಪ್ಲೇಯರ್ ಆಫ್ ದ ಟೂರ್ನಮೆಂಟ್ ಪ್ರಶಸ್ತಿಯನ್ನು ಪಡೆದಿದ್ದಾರೆ.ಯುವರಾಜ್ ಸಿಂಗ್ ಅವರು ಪ್ರಸ್ತುತ ತಮ್ಮ ಪೋಷಕರ ಜೊತೆ ಇಲ್ಲ.ತಮ್ಮ ಪತ್ನಿಯೊಂದಿಗೆ ಮುಂಬೈನ ವರ್ಲಿಯಲ್ಲಿರುವ ಓಂಕಾರಂ 1973 ಟವರ್ಸ್ ಅಪಾರ್ಟ್ಮೆಂಟ್ ಎಂಬಲ್ಲಿ ನೆಲೆಸಿದ್ದಾರೆ.

ಇದೇ ಅಪಾರ್ಟ್ಮೆಂಟ್ ನ 35 ನೇ ಮಹಡಿಯಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಶರ್ಮಾ ವಾಸಿಸುತ್ತಿದ್ದಾರೆ.ಯುವಿ 29 ನೇ ಮಹಡಿಯಲ್ಲಿ ನೆಲೆಸಿದ್ದು ಇದು ವಿರಾಟ್ ಕೊಹ್ಲಿ ಅವರ ಮನೆಗಿಂತ ಅತ್ಯದ್ಭುತವಾಗಿದೆಯಂತೆ.ಈ ವಿಂಗ್ ನಲ್ಲಿ ಎರಡು ಫ್ಲಾಟ್ ಗಳನ್ನು ನಿರ್ಮಾಣ ಮಾಡಲಾಗಿದೆಯಂತೆ.2015 ರಲ್ಲಿ ಯುವರಾಜ್ ಸಿಂಗ್ ಅವರು ಬರೋಬ್ಬರಿ 64 ಕೋಟಿ ರೂ.ಗೆ ಖರೀದಿ ಮಾಡಿದ್ದಾರಂತೆ.ವಿರಾಟ್ ಕೊಹ್ಲಿ ಮೂವತ್ತು ಕೋಟಿ ಬೆಲೆಯ ಮನೆಯನ್ನು ಕೊಂಡರೆ ಯುವರಾಜ್ ಸಿಂಗ್ ಅದಕ್ಕಿಂತ ಬೃಹತ್ ಮನೆಯನ್ನು ದುಪ್ಪಟ್ಟು ಹಣ ನೀಡಿ ಕೊಂಡುಕೊಂಡಿದ್ದಾರೆ.

Leave a Reply

%d bloggers like this: