ಕಿಚ್ಚನಿಗಾಗಿ ಹುಡಿಕಿಕೊಂಡು ಓಡಿ ಬಂದ ಭಾರತ ಚಿತ್ರರಂಗದ ಸ್ಟಾರ್ ನಿರ್ದೇಶಕ

ಮೆಗಾ ಪವರ್ ಸ್ಟಾರ್ ನಟ ರಾಮ್ ಚರಣ್ ತೇಜಾ ಅವರ ಬಹುಕೋಟಿ ವೆಚ್ಚದ ಸಿನಿಮಾದಲ್ಲಿ ಸ್ಯಾಂಡಲ್ ವುಡ್ ಬಾದ್-ಶಾ ನಟಿಸಲಿದ್ದಾರಾ..! ಭಾರತೀಯ ಚಿತ್ರರಂಗದ ಸುಪ್ರಸಿದ್ದ ನಿರ್ದೇಶಕರಾದ ಎಸ್.ಶಂಕರ್ ಅವರ ಸಿನಿಮಾ ಎಸ್.ವಿ.ಸಿ.50 ಇತ್ತೀಚೆಗೆ ತಾನೇ ಹೈದ್ರಾಬಾದ್ ನಲ್ಲಿನ ಅನ್ನಪೂರ್ಣ ಸ್ಟುಡಿಯೋದಲ್ಲಿ ಮೂಹುರ್ತ ನೇರವೇರಿಸಿಕೊಡಿದೆ‌‌, ರೋಬೊ ಚಿತ್ರದ ಮೂಲಕ ಭಾರತೀಯ ಚಿತ್ರರಂಗದಾದ್ಯಂತ ಅಪಾರ ಜನಪ್ರಿಯತೆ ಪಡೆದ ನಿರ್ದೇಶಕ ಎಸ್ ಶಂಕರ್ ಇದೀಗ ರಾಮ್ ಚರಣ್ ತೇಜ ಅವರೊಂದಿಗೆ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಪಾತ್ರ ವರ್ಗಗಳ ಕಲಾವಿದರನ್ನ ಆಯ್ಕೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ‌.ಇತ್ತೀಚೆಗೆ ತಾನೇ ಮುತ್ತಿನ ನಗರಿ ಹೈದರಾಬಾದ್ ನ ಅನ್ನಪೂರ್ಣ ಸ್ಟುಡಿಯೋ ದಲ್ಲಿ ಮೂಹುರ್ತ ನಡೆಯಿತು.ಈ ಕಾರ್ಯಕ್ರಮದಲ್ಲಿ ಬಾಲಿವುಡ್ ಸ್ಟಾರ್ ನಟ ರಣವೀರ್ ಸಿಂಗ್ ಮೆಗಸ್ಟಾರ್ ಚಿರಂಜೀವಿ ನಿರ್ಮಾಪಕ ದಿಲ್ ರಾಜು ಮತ್ತು ಸಿರೀಶ್ ಕಾರ್ಯಕ್ರಮದಲ್ಲಿ ಉಪಸ್ಥಿತಿಯಲ್ಲಿದ್ದರು.

ಶ್ರೀ ವೆಂಕಟೇಶ್ವರ ಕ್ರಿಯೆಷನ್ ಬ್ಯಾನರ್ ಅಡಿ ನಿರ್ಮಾಣವಾಗುತ್ತಿರುವ ಈ ಬಹುಕೋಟಿ ವೆಚ್ಚದ ಎಸ್.ವಿ. ಸಿ.50 ಸಿನಿಮಾದ ನಾಯಕ ನಟರಾಗಿ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ತೇಜಾ ಅಭಿನಯಿಸುತ್ತಿದ್ದಾರೆ. ಬಾಲಿವುಡ್ ಖ್ಯಾತ ನಟಿ ಕಿಯಾರಾ ಅಡ್ವಾನಿ ನಾಯಾಕನಟಿ ಯಾಗಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಮುಹೂರ್ತ ಕಾರ್ಯಕ್ರಮದಲ್ಲಿ ಬಿಡುಗಡೆಯಾದ ಚಿತ್ರದ ಪೋಸ್ಟರ್ ಸೊಷಿಯಲ್ ಮೀಡಿಯಾದಲ್ಲಿ ಬಾರಿ ಹವಾ ಕ್ರಿಯೇಟ್ ಮಾಡಿದೆ. ಇದೀಗ ಈ ಚಿತ್ರ ತಂಡದಿಂದ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಅದೇನಪ್ಪಾ ಎಂದರೆ ಈ ಎಸ್. ವಿ.ಸಿ.50 ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕನ್ನಡದ ಜನಪ್ರಿಯ ನಟರಾಗಿರುವ ಕಿಚ್ಚ ಸುದೀಪ್ ಕಾಣಿಸಿಕೊಳ್ಳಲಿದ್ದಾರೆ ಎಂಬ ವಿಚಾರ ಬಾರಿ ವೈರಲ್ ಆಗಿದೆ. ಈಗಾಗಲೇ ನಿರ್ದೇಶಕ ಎಸ್. ಶಂಕರ್ ರವರು ಕಿಚ್ಚ ಸುದೀಪ್ ರವರ ಬಳಿ ಈ ಬಗ್ಗೆ ಚರ್ಚಿಸಲಾಗಿದೆ ಎಂದು ತಿಳಿದುಬಂದಿದೆ.

ಬಲ್ಲ ಮೂಲಗಳ ಮಾಹಿತಿಯ ಪ್ರಕಾರ ಈ ಪ್ರಮುಖ ಪಾತ್ರದಲ್ಲಿ ಕಿಚ್ಚ ಸುದೀಪ್ ರವರೇ ನಟಿಸಬೇಕು ಎಂದು ನಿರ್ದೇಶಕರು ಪಟ್ಟು ಹಿಡಿದಿದ್ದಾರೆ ಎಂಬ ವಿಚಾರವು ಕೂಡ ತಿಳಿದುಬಂದಿದೆ. ಆದರೆ ಈ ಬಗ್ಗೆ ಕಿಚ್ಚ ಸುದೀಪ್ ಯಾವುದೆ ರೀತಿಯ ಸ್ಪಷ್ಟನೆ ನೀಡಿಲ್ಲ.ಒಂದಾನೊಂದು ಕಾಲದಲ್ಲಿ ಐರನ್ ಲೆಗ್ ಎಂದು ಕರೆಸಿಕೊಳ್ಳುತ್ತಿದ್ದ ಕಿಚ್ಚ ಸುದೀಪ್ ಇಂದು ಕನ್ನಡ ಮಾತ್ರವಲ್ಲದೆ ತೆಲುಗು,ತಮಿಳು ಹಾಗು ಹಿಂದಿ ಚಿತ್ರಗಳ ದಿಗ್ಗಜ ನಟರೊಂದಿಗೆ ನಟಿಸಿ ಭಾರತೀಯ ಚಿತ್ರರಂಗದಾದ್ಯಂತ ಅಪಾರ ಜನಪ್ರಿಯತೆ ಪಡೆದಿರುವುದು ಕನ್ನಡಿಗರಿಗೆ ಹೆಮ್ಮೆಯೆ ಸರಿ .

Leave a Reply

%d bloggers like this: