ಕಿರುತೆರೆಯಿಂದ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ಕನ್ನಡದ ಖ್ಯಾತ ಕಿರುತೆರೆ ನಟಿ

ಡಾರ್ಲಿಂಗ್ ಕೃಷ್ಣ ನಟನೆಯ ದಿಲ್ ಪಸಂದ್ ಸಿನಿಮಾ ಇದೇ ನವೆಂಬರ್ 11ಕ್ಕೆ ಅದ್ದೂರಿಯಾಗಿ ರಿಲೀಸ್ ಆಗಲಿದೆ. ಈಗಾಗಲೇ ರಿಲೀಸ್ ಆಗಿರೋ ದಿಲ್ ಪಸಂದ್ ಸಿನಿಮಾದ ಟೀಸರ್ ಅಪಾರ ಜನ ಮೆಚ್ಚುಗೆ ಪಡೆದುಕೊಂಡಿದೆ. ಆನಂದ್ ಆಡಿಯೋ ಕಂಪನಿ ದಿಲ್ ಪಸಂದ್ ಸಿನಿಮಾದ ಆಡಿಯೋ ರೈಟ್ಸ್ ಪಡೆದಿದ್ದು, ಇದೇ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ದಿಲ್ ಪಸಂದ್ ಸಿನಿಮಾದ ಟೀಸರ್ ರಿಲೀಸ್ ಆಗಿತ್ತು. ಇನ್ನು ದಿಲ್ ಪಸಂದ್ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ಅವರಿಗೆ ಇಬ್ಬರು ನಾಯಕಿಯರಿದ್ದಾರೆ. ಕಿರುತೆರೆಯ ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ನಟಿ ಮೇಘಾ ಶೆಟ್ಟಿ, ನಿಶ್ವಿಕಾ ನಾಯ್ಡು ನಟಿಸಿದ್ದಾರೆ. ನಿಶ್ವಿಕಾ ನಾಯ್ಡು ಅವರು ದಿಲ್ ಪಸಂದ್ ಸಿನಿಮಾದಲ್ಲಿ ಐಶು ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದರಲ್ಲಿ ನಿಶ್ವಿಕಾ ನಾಯ್ಡು ಭಾವನಾತ್ಮಕ ವ್ಯಕ್ತಿತ್ವ ಹೊಂದಿರುವ ಪಾತ್ರವಂತೆ. ಅದೇ ರೀತಿಯಾಗಿ ಎರಡನೇ ನಾಯಕಿಯಾಗಿ ಕಾಣಿಸಿಕೊಂಡಿರೋ ಮೇಘಾಶೆಟ್ಟಿ ದಿಲ್ ಪಸಂದ್ ಸಿನಿಮಾದಲ್ಲಿ ಮುಗ್ದ ಹುಡುಗಿಯ ಪಾತ್ರದಲ್ಲಿ ನಟಿಸಿದ್ದಾರಂತೆ. ನಾಯಕ ನಟ ಡಾರ್ಲಿಂಗ್ ಕೃಷ್ಣ ಅವರಿಗೆ ನಿರ್ದೇಶಕ ಶವತೇಜಸ್ ಕಥೆ ಹೇಳೋವಾಗ್ಲೇ ಸಖತ್ ಎಂಜಾಯ್ ಮಾಡಿದ್ರಂತೆ. ಅದ್ರಂತೆ ಸಿನಿಮಾ ಚಿತ್ರೀಕರಣದಲ್ಲಿಯೂ ಕೂಡ ಎಂಜಾಯ್ ಮಾಡ್ಕೊಂಡು ಡಬ್ಬಿಂಗ್ ಮಾಡಿದ್ದಾರಂತೆ. ಈ ದಿಲ್ ಪಸಂದ್ ಸಿನಿಮಾದಲ್ಲಿ ತಂದೆ ಮತ್ತು ಮಗನ ನಡುವೆ ಇರೋ ಭಾವನಾತ್ಮಕ ಸಂಬಂಧವನ್ನ ಹೇಳಲಾಗಿದೆಯಂತೆ.

ಒಟ್ಟಾರೆಯಾಗಿ ದಿಲ್ ಪಸಂದ್ ಸಿನಿಮಾ ಒಂದೊಳ್ಳೆ ಸದಭಿರುಚಿಯ ಸಿನಿಮಾ ಆಗಿದೆಯಂತೆ. ದಿಲ್ ಪಸಂದ್ ಸಿನಿಮಾಗೆ ಸುಮಂತ್ ಕ್ರಾಂತಿ ಬಂಡವಾಳ ಹೂಡಿದ್ದು, ಶಿವ ತೇಜಸ್ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಶಿವ ತೇಜಸ್ ಮಳೆ ಅನ್ನೋ ಲವ್ ಸ್ಟೋರಿ ಸಿನಿಮಾ ಮಾಡಿದ್ದರು. ಈಗ ದಿಲ್ ಪಸಂದ್ ಗೆ ಆಕ್ಷನ್ ಕಟ್ ಹೇಳಿದ್ದು ಶೇಖರ್ ಚಂದ್ರ ಛಾಯಾಗ್ರಹಣ, ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಮ್ಯೂಸಿಕ್ ಮಾಡಿದ್ದಾರೆ. ಇದೇ ನವೆಂಬರ್ 11ಕ್ಕೆ ದಿಲ್ ಪಸಂದ್ ಸಿನಿಮಾ ರಾಜ್ಯಾದ್ಯಂತ ಅದ್ದೂರಿಯಾಗಿ ಥಿಯೇಟರ್ ಅಂಗಳಕ್ಕೆ ಬರುತ್ತಿದೆ. ಲಕ್ಕಿ ಮ್ಯಾನ್ ಸಿನಿಮಾದ ನಂತರ ಡಾರ್ಲಿಂಗ್ ಕೃಷ್ಣ ಅವರನ್ನ ಬೆಳ್ಳಿತೆರೆಯ ಮೇಲೆ ನೋಡಲು ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ನಟಿ ಮೇಘಾ ಶೆಟ್ಟಿ ಅವರಿಗೆ ಇದು ಮೊದಲ ಕನ್ನಡ ಚಿತ್ರವಾಗಿದ್ದು ಧಾರಾವಾಹಿಯಿಂದ ಈಗ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

Leave a Reply

%d bloggers like this: