ಕಿಚ್ಚನ ಬರ್ತಡೇ ದಿನ ಕಿಚ್ಚನ ಕಡೆಯಿಂದ ಅಕುಲ್ ಅವರಿಗೆ ಸಿಕ್ತು ದುಬಾರಿ ಬೆಲೆಯ ಬೈಕ್

ಕನ್ನಡ ಕಿರುತೆರೆಯ ಖ್ಯಾತ ನಿರೂಪಕ ಕಮ್ ನಟ ಅಕುಲ್ ಬಾಲಾಜಿ ಅವರಿಗೆ ಕಿಚ್ಚ ಸುದೀಪ್ ಅವರು ತಮ್ಮ ಜನ್ಮ ದಿನದ ಅಂಗವಾಗಿ ದುಬಾರಿ ಬೆಲೆಯ ಬೈಕ್ ವೊಂದನ್ನ ಉಡುಗೊರೆಯಾಗಿ ನೀಡಿದ್ದಾರೆ. ಕಿಚ್ಚ ಸುದೀಪ್ ಅವರು ನೀಡಿದ ಈ ಬೈಕ್ ನೋಡಿ ಅಕುಲ್ ಬಾಲಾಜಿ ಅತೀವ ಸಂತೋಷ ವ್ಯಕ್ತಪಡಿಸಿದ್ದಾರೆ. ಹೌದು ಸೆಪ್ಟೆಂಬರ್2 ರಂದು ನಟ, ನಿರ್ದೇಶಕ, ನಿರ್ಮಾಪಕ, ಗಾಯಕ ಹೀಗೆ ಬಹುಮುಖ ಪ್ರತಿಭೆ ಹೊಂದಿರೋ ಸುದೀಪ್ ಅವರು 49ನೇ ವಸಂತಕ್ಕೆ ಹೆಜ್ಜೆ ಇಟ್ಟಿದ್ದಾರೆ. ಈ ಸಂಭ್ರಮದ ಹಿನ್ನೆಲೆಯಲ್ಲಿ ನಾಡಿನಾದ್ಯಂತ ಇರುವ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ಮನೆ ಬಳಿ ಬಂದು ರಾತ್ರಿಯಿಂದಾನೇ ಜೈಕಾರ ಕೂಗಿ ಕೇಕ್ ಕಟ್ ಮಾಡಿಸಿ ಸಂಭ್ರಮಾಚರಣೆ ಮಾಡಿದ್ದಾರೆ‌. ಅದರ ಜೊತೆಗೆ ಕಿಚ್ಚನಿಗೆ ಬರ್ಥ್ ಡೇ ವಿಶ್ ಮಾಡಲು ಸಿನಿ ರಂಗದ ಅವರ ಆಪ್ತಗೆಳೆಯರು ಕೂಡ ಮಧ್ಯ ರಾತ್ರಿಲೇ ಆಗಮಿಸಿ ಬರ್ಥ್ ಡೇ ವಿಶ್ ಮಾಡಿದ್ದಾರೆ.

ಅದ್ರಂತೆ ಕನ್ನಡ ಖ್ಯಾತ ನಿರೂಪಕ ಕಮ್ ನಟ ಅಕುಲ್ ಬಾಲಾಜಿ ಅವರು ಸಹ ಕಿಚ್ಚ ಸುದೀಪ್ ಅವರ ಮನೆಗೆ ಮಧ್ಯರಾತ್ರಿಲಿ ಭೇಟಿ ನೀಡಿ ಕಿಚ್ಚ ಬ್ರೋ ಅಂತಾನೇ ಕರೆಯೋ ಸುದೀಪ್ ಅವ್ರಿಗೆ ಬರ್ಥ್ ಡೇ ವಿಶ್ ಮಾಡಿದ್ದಾರೆ. ಅದಕ್ಕೆ ಪ್ರತಿಯಾಗಿ ಕಿಚ್ಚ ಸುದೀಪ್ ಅವರು ತಮ್ಮ ಆಪ್ತ ಬಳಗಕ್ಕೆ ನೀಡೋ ರೀತಿಲಿ ಅಕುಲ್ ಬಾಲಾಜಿ ಅವರಿಗೂ ಕೂಡ ಪ್ರೀತಿಯಿಂದ ಬೈಕ್ ವೊಂದನ್ನ ಉಡುಗೊರೆಯಾಗಿ ನೀಡಿದ್ದಾರೆ. ಕೆಂಪು ಬಣ್ಣದ ಬಿಎಂಡಬ್ಲ್ಯೂ ಜಿ310 ಬೈಕ್ ಅನ್ನ ಅಕುಲ್ ಬಾಲಾಜಿ ಅವರು ಸುದೀಪ್ ಅವರಿಂದ ಗಿಫ್ಟ್ ಪಡೆದಿದ್ದಾರೆ. ಗಿಫ್ಟ್ ಪಡೆದು ಸಂತೋಷ ಪಟ್ಟ ಅಕುಲ್ ಬಾಲಾಜಿ ಅವರು ಬೈಕ್ ಮುಂದೆ ಕಿಚ್ಚನ ಜೊತೆ ನಿಂತು ವೀಡಿಯೋ ಮಾಡಿ ನಾವು ಈಗಷ್ಟೇ ಗಣೇಶೋತ್ಸವ ಮಾಡಿದ್ವು. ಅದ್ರಂತೆ ಇದೀಗ ಕಿಚ್ಚೋತ್ಸವ ಮಾಡ್ತಿದ್ದೇವೆ‌.

ಸಾಮಾನ್ಯಾವಾಗಿ ಬರ್ಥ್ ಡೇ ಗೆ ನಾವು ಗಿಫ್ಟ್ ಕೊಡ್ತಿವಿ ಆದ್ರೇ ಕಿಚ್ಚ ಬ್ರೋ ಸುದೀಪ್ ಅವರು ನನಗೆ ಈ ಬೈಕ್ ಗಿಫ್ಟ್ ನೀಡಿದ್ದಾರೆ. ನನಗೆ ತುಂಬಾ ಸಂತೋಷ ಆಗ್ತಿದೆ ಸುದೀಪ್ ಅವರಿಗೆ ತುಂಬಾ ಹೃತ್ಪೂರ್ವಕ ಧನ್ಯವಾದಗಳು ಎಂದು ಹೇಳಿ ಈ ವೀಡಿಯೋವನ್ನ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇನ್ನು ಅಕುಲ್ ಬಾಲಾಜಿ ಅವರು ಸುದೀಪ್ ಅವರಿಂದ ಗಿಫ್ಟ್ ಪಡೆದ ಈ ಬಿಎಂಡಬ್ಲ್ಯೂ ಜಿ310 ಬೈಕ್ ಎಕ್ಸ್ ಶೋ ರೂಂನ ಆರಂಭಿಕ ಬೆಲೆಯು 2.70 ಲಕ್ಷರೂ ಎಂದು ತಿಳಿದು ಬಂದಿದೆ. ಈ ಬೈಕ್ ಹೆಡ್ ಲ್ಯಾಂಪ್, ಟರ್ನ್ ಸಿಗ್ನಲ್ ಗಳು ಅಂಡ್ ಟೈಲ್ ಲ್ಯಾಂಪ್ ಗಾಗಿ ಎಲ್ಇಡಿ ಲೈಟ್ ಗಳನ್ನ ಆಲ್ಟ್ರೇಶನ್ ಮಾಡಿಸಲಾಗಿದೆ. ಕಿಚ್ಚ ಸುದೀಪ್ ಅವರು ಈ ಹಿಂದೆ ತಮ್ಮ ಅಂಗರಕ್ಷಕ ಸಾಯಿ ಕಿರಣ್ ಅವರಿಗೂ ಕೂಡ ಅವರ ಬರ್ಥ್ ಡೇ ದಿನದಂದು ರಾಯಲ್ ಎನ್ ಫೀಲ್ಡ್ ಬುಲೆಟ್ ಬೈಕ್ ವೊಂದನ್ನ ಗಿಫ್ಟ್ ಆಗಿ ನೀಡಿದ್ರು. ಅದೇ ರೀತಿಯಾಗಿ ಇದೀಗ ತಮ್ಮ ಆಪ್ತ ಗೆಳೆಯ ಅಕುಲ್ ಬಾಲಾಜಿ ಅವ್ರಿಗೂ ಕೂಡ ಈ ಬೈಕ್ ಗಿಫ್ಟ್ ನೀಡಿದ್ದಾರೆ.

Leave a Reply

%d bloggers like this: