ಕಿಚ್ಚ ಸುದೀಪ್ ಅವರ ಕುಟುಂಬದಿಂದ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟ

ಸ್ಯಾಂಡಲ್ ವುಡ್ಗೆ ಮತ್ತೊಬ್ಬ ಸೂಪರ್ ಸ್ಟಾರ್ ಸಂಬಂಧಿ ಗ್ರ್ಯಾಂಡ್ ಆಗಿ ಎಂಟ್ರಿ ನೀಡುತ್ತಿದ್ದಾರೆ. ಸದ್ಯಕ್ಕೆ ಈ ಸುದ್ದಿ ಸೋಶಿಯಲ್ ಮೀಡಿಯಾ ಸೇರಿದಂತೆ ಎಲ್ಲಾ ಕಡೆ ಸಖತ್ ವೈರಲ್ ಆಗುತ್ತಿದೆ.ಹೌದು ಹಾಗಿದ್ರೇ ಯಾರಪ್ಪಾ ಈ ಸ್ಟಾರ್ ಕುಡಿ ಅಂತ ನೀವ್ ಕುತೂಹಲ ವ್ಯಕ್ತಪಡಿಸಬಹುದು. ಈ ಕುತೂಹಲಕ್ಕೆ ಉತ್ತರ ಬೇಕಿದ್ದಲ್ಲಿ ಈ ಲೇಖನವನ್ನ ಸಂಪೂರ್ಣವಾಗಿ ಓದಿ. ಸ್ಟಾರ್ ನಟ ನಟಿಯರ ಮಕ್ಕಳು, ಅವರ ಸೋದರ ಸಂಬಂಧಿ ಮಕ್ಕಳು ಸಿನಿಮಾರಂಗಕ್ಕೆ ಹೆಜ್ಜೆ ಇಡುವುದು ಸರ್ವೇ ಸಾಮಾನ್ಯ. ಅದರಲ್ಲಿ ವಿಶೇಷ ಏನಿಲ್ಲ ಬಿಡಿ. ಈಗಾಗಲೇ ರಾಜ್ ಕುಟುಂಬದಿಂದ ಹಿಡಿದು ಬಹುತೇಕ ಹಿರಿಯ ನಟ ನಟಿಯರ ಮಕ್ಕಳು, ಮೊಮ್ಮಕ್ಕಳು ಚಂದನವನಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ಅದರಲ್ಲಿ ಕೆಲವರು ಯಶಸ್ಸು ಪಡೆದು, ಸ್ಯಾಂಡಲ್ ವುಡ್ ನಲ್ಲಿ ನೆಲೆ ಕಂಡುಕೊಂಡಿದ್ರೆ, ಇನ್ನೂ ಕೆಲವರಿಗೆ ಕಲಾ ಸರಸ್ವತಿಯ ಅನುಗ್ರಹ ದೊರಕದೇ ಬೇರೆ ಕ್ಷೇತ್ರದತ್ತ ಗಮನ ಹರಿಸಿರೋದು ಉಂಟು. ಇತ್ತೀಚೆಗೆ ಕೆಲವು ವರ್ಷಗಳ ಹಿಂದೆಯಷ್ಟೇ ರಾಜ್ ಕುಟುಂಬದಿಂದ ರಾಮ್ ಕುಮಾರ್ ಮಕ್ಕಳಾದ ಧೀರೆನ್, ಧನ್ಯಾ, ಉಪೇಂದ್ರ ಅಣ್ಣನ ಮಗನಾದ ನಿರಂಜನ್, ದೇವರಾಜ್ ಅವರ ಎರಡನೇ ಮಗ ಪ್ರಣಮ್, ಮಾಲಾಶ್ರೀ ಅವರ ಪುತ್ರಿ ರಾಧನಾ ರಾಮ್, ರಾಘಣ್ಣನ ಮಕ್ಕಳಾದ ವಿನಯ್ ರಾಜ್ ಕುಮಾರ್, ಯುವ ರಾಜ್ ಕುಮಾರ್ ಸೇರಿದಂತೆ ಅನೇಕ ಸಿನಿ ಕುಟುಂಬದ ಕುಡಿಗಳು ಚಿತ್ರರಂಗಕ್ಕೆ ಎಂಟ್ರಿಯಾಗಿ ಭರವಸೆ ಮೂಡಿಸಿದ್ದಾರೆ. ಇವರ ಸಾಲಿಗೆ ಇದೀಗ ಸ್ಯಾಂಡಲ್ ವುಡ್ ಬಾದ್-ಶಾ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಅಕ್ಕನ ಮಗ ಕೂಡ ಸೇರ್ಪಡೆ ಆಗುತ್ತಿದ್ದಾರೆ.

ಹೌದು ಸುದೀಪ್ ಅಕ್ಕನ ಮಗ ಆಗಿರುವ ಸಂಚಿತ್ ಸಂಜೀವ್ ಅವರು ಚಂದನವನಕ್ಕೆ ಎಂಟ್ರಿ ಆಗುತ್ತಿದ್ದಾರೆ. ಸಂಚಿತ್ ಸಂಜೀವ್ ಕೇವಲ ನಟನಾಗಿ ಮಾತ್ರ ಅಲ್ಲದೇ, ತಮ್ಮ ಚೊಚ್ಚಲ ಚಿತ್ರಕ್ಕೆ ತಾವೇ ಆಕ್ಷನ್ ಕಟ್ ಹೇಳಿಕೊಳ್ಳುತ್ತಿದ್ದಾರೆ. ಹೌದು ಚಿತ್ರರಂಗಕ್ಕೆ ಬರುವ ಮೊದಲು ಸಂಚಿತ್ ಸಂಜೀವ್ ಅವರು ನ್ಯುಯಾರ್ಕ್ ನಲ್ಲಿ ಆಕ್ಟಿಂಗ್, ಡೈರೆಕ್ಷನ್, ಕ್ಯಾಮೆರಾ ತರಬೇತಿ ಪಡೆದುಕೊಂಡು ಸಿನಿಮಾರಂಗದಲ್ಲಿ ಇರಬೇಕಾದ ಎಲ್ಲಾ ರೀತಿಯ ಅರ್ಹತೆ ಜೊತೆಗೆ ತರಬೇತಿಗಳನ್ನ ಪಡೆದುಕೊಂಡಿದ್ದಾರೆ. ಸಂಪೂರ್ಣ ತಯಾರಿ ಮಾಡಿಕೊಂಡಿರುವ ಸಂಚಿತ್ ಸಂಜೀವ್ ಅವರು ತಮ್ಮ ಚಿತ್ರಕ್ಕೆ ಜಿಮ್ಮೀ ಅನ್ನೋ ಟೈಟಲ್ ರೆಡಿ ಮಾಡಿಟ್ಟುಕೊಂಡಿದ್ದಾರಂತೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಚಿತ್ರಕ್ಕೆ ನಿರ್ದೇಶಕ ಜಯತೀರ್ಥ ಅವರು ಆಕ್ಷನ್ ಕಟ್ ಹೇಳಬೇಕಾಗಿತ್ತು. ಆದರೆ ಜಯತೀರ್ಥ ಅವರು ಬನಾರಸ್ ಸಿನಿಮಾದಲ್ಲಿ ಬಿಝಿ ಇದ್ದ ಕಾರಣ ಜಿಮ್ಮೀ ಚಿತ್ರಕ್ಕೆ ನಿರ್ದೇಶನ ಮಾಡಲು ಸಾಧ್ಯವಾಗಿಲ್ಲವಂತೆ. ಆದರೂ ಕೂಡ ಜಿಮ್ಮಿ ಚಿತ್ರಕ್ಕೆ ಜಯತೀರ್ಥ ಅವರ ಮಾರ್ಗದರ್ಶನದಲ್ಲಿ ಸಂಚಿತ್ ಸಂಜೀವ್ ಅವರು ನಟನೆ ಮತ್ತು ನಿರ್ದೇಶನ ಎರಡೂ ಜವಾಬ್ದಾರಿಯನ್ನ ನಿಭಾಯಿಸಲಿದ್ದಾರಂತೆ. ಇನ್ನು ಸಂಚಿತ್ ಸಂಜೀವ್ ಅವರು ಈಗಾಗಲೇ ಕಿರುಚಿತ್ರ, ಜಾಹೀರಾತು ಸೇರಿದಂತೆ ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರದಲ್ಲಿ ಕೆಲಸ ಮಾಡಿ ತಕ್ಕ ಮಟ್ಟಿಗೆ ಅನುಭವ ಪಡೆದುಕೊಂಡಿದ್ದಾರೆ. ಒಟ್ಟಾರೆಯಾಗಿ ಕನ್ನಡ ಚಿತ್ರರಂಗಕ್ಕೆ ಈಗ ಸುದೀಪ್ ಅವರ ಅಕ್ಕನ ಮಗ ಸಂಚಿತ್ ಸಂಜೀವ್ ಅವರು ಪಾದಾರ್ಪಣೆ ಮಾಡುತ್ತಿರೋದು ಒಂದು ರೀತಿಯಲ್ಲಿ ಕಿಚ್ಚನ ಅಭಿಮಾನಿಗಳಿಗೆ ಖುಷಿಯ ವಿಚಾರ ಅಂತಾನೇ ಹೇಳಬಹುದಾಗಿದೆ.

Leave a Reply

%d bloggers like this: