ಕಿಚ್ಚನಗಿಂತ 5 ಪಟ್ಟು ಚೆನ್ನಾಗಿ ಬಿಗ್ ಬಾಸ್ ನಿರೂಪಣೆ ಮಾಡಬಲ್ಲ ಏಕೈಕ ನಟ ಇವರೇ! ಯಾರು ಗೊತ್ತಾ ನೋಡಿ ಒಮ್ಮೆ

ಕನ್ನಡ ಕಿರುತರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 9 ರಲ್ಲಿ ಯಾವ ನಟ ನಿರೂಪಣೆ ಮಾಡಿದರೆ ಸೂಕ್ತ ಎಂಬ ಸೂಕ್ತ ಎಂಬ ಚರ್ಚೆಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದರೆ ಸ್ಯಾಂಡಲ್ ವುಡ್ ಬಾದ್- ಶಾ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ನಿರಂತರವಾಗಿ ಎಂಟು ಸೀಸನ್ ಗಳನ್ನ ಯಶಸ್ವಿಯಾಗಿ ನಿರ್ವಹಿಸಿಕೊಂಡು ಬಂದಿದ್ದಾರೆ. 2013 ರಲ್ಲಿ ಕನ್ನಡದಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ಆರಂಭವಾಯಿತು.ಅಂದಿನಿಂದ ಇಲ್ಲಿಯವರೆಗೆ ಎಂಟು ಸೀಸನ್ ಗಳು ನಡೆದಿದ್ದು ಕನ್ನಡ ಕಿರುತೆರೆಯಲ್ಲಿ ಅತ್ಯಂತ ಜನಪ್ರಿಯ ಶೋ ಆಗಿ ಹೆಸರು ಪಡೆದುಕೊಂಡಿದೆ. ಇಲ್ಲಿ ನಟ ಕಿಚ್ಚ ಸುದೀಪ್ ಅವರ ನಿರೂಪಣಾ ಶೈಲಿ , ಸ್ಪರ್ಧಿಗಳಿಗೆ ತಿಳಿ ಹೇಳುವ ರೀತಿ ವಾರಾಂತ್ಯದಲ್ಲಿ ಅವರನ್ನೇ ನೋಡ ಬಯಸುವ ಪ್ರೇಕ್ಷಕವರ್ಗವೇ ಬೇರೆ ಇರುತ್ತದೆ.

ವಾರಾಂತ್ಯದ ಪಂಚಾಯ್ತಿ ಕಟ್ಟೆಯಲ್ಲಿ ಕಿಚ್ಚ ಸುದೀಪ್ ಅವರು ಸ್ಪರ್ಧಿಗಳಿಗೆ ಅವರ ಸರಿ-ತಪ್ಪುಗಳ ವಿವರಿಸಿ ಅವರಿಗೆ ಸೂಕ್ತ ಸಲಹೆ ಸೂಚನೆಗಳ ಮೂಲಕ ಪ್ರೋತ್ಸಾಹ ಬೆಂಬಲ ನೀಡಿ ಮನೆ ಮಂದಿಗೆಲ್ಲಾ ಮೆಚ್ಚುಗೆ ಮಾತಗಳನ್ನಾಡುತ್ತಿರುತ್ತಾರೆ. ಬಿಗ್ ಬಾಸ್ ಶೋ ಎಲ್ಲಾ ಭಾಷೆಗಳಿಗೆ ಹೋಲಿಸಿದರೆ ಕಿಚ್ಚನ ವಿಶೇಷ ದಾಖಲೆ ಅಂದರೆ ನಿರಂತರವಾಗಿ ಕನ್ನಡದ ಬಿಗ್ ಬಾಸ್ ಎಂಟು ಆವೃತ್ತಿಗಳನ್ನು ಯಶಸ್ವಿ ಯಾಗಿ ನಿರೂಪಣೆ ಮಾಡಿರುವ ಏಕೈಕ ನಿರೂಪಕ ಎಂಬ ಹೆಸರಿಗೆ ಪಾತ್ರರಾಗಿದ್ದಾರೆ. ಕಿಚ್ಚ ಸುದೀಪ್ ಸೇರಿದಂತೆ ಕನ್ನಡದಲ್ಲಿ ಅನೇಕ ಸ್ಟಾರ್ ನಟರಾದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಗೋಲ್ಡನ್ ಸ್ಟಾರ್ ಗಣೇಶ್, ರಮೇಶ್ ಅರವಿಂದ್, ಪುನೀತ್ ರಾಜ್ ಕುಮಾರ್ ಅವರು ಕೂಡ ಫ್ಯಾಮಿಲಿ ಪವರ್,ಕೋಟ್ಯಾಧಿಪತಿ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು.

ಇದೀಗ ಬಿಗ್ ಬಾಸ್ ಶೋ ಅನ್ನು ಕಿಚ್ಚ ಸುದೀಪ್ ಅವರನ್ನು ಹೊರತು ಪಡಿಸಿದರೆ ಯಾವ ನಟ ನಿರೂಪಣೆಯ ಜವಾಬ್ದಾರಿ ಹೊರಬಹುದು ಎಂಬುದಕ್ಕೆ ಬಹುತೇಕರು ಕಿಚ್ಚ ಸುದೀಪ್ ಅವರನ್ನೇ ಆಯ್ಕೆ ಮಾಡಿದರೆ,ಉಳಿದಂತೆ ಇವರನ್ನ ಬಿಟ್ಟು ಹೇಳುವುದಾದರೆ ನಟ ರಮೇಶ್ ಅರವಿಂದ್ ಅವರನ್ನು ಆಯ್ಕೆ ಮಾಡುತ್ತಾರೆ.ಇವರ ನಂತರದ ಸ್ಥಾನದಲ್ಲಿ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರ ಹೆಸರನ್ನು ಕೂಡ ನಮೂದಿಸಿದ್ದಾರೆ. ನಟ ದರ್ಶನ್ ಮತ್ತು ಯಶ್ ಅವರು ಇದೀವರೆಗೂ ಯಾವುದೇ ರಿಯಾಲಿಟ ಶೋಗಳನ್ನು ನಿರೂಪಣೆ ಮಾಡದಿದ್ದರು ಕೂಡ ಅವರ ಗತ್ತು, ನಾಯಕತ್ವದ ಗುಣಗಳು ಅವರು ಯಶಸ್ವಿ ನಿರೂಪಕರಾಗಬಹುದು ಎಂಬ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

Leave a Reply

%d bloggers like this: