ಖ್ಯಾತ ನಟಿ ಬಾತರೂಂ ನಲ್ಲಿ ಸಿಕ್ಕಿತು ಹಣದ ರಾಶಿ! ಯಾರಿಕೆ? ಈ ಹಣಕ್ಕೆ ಕಾರಣವೇನು?

ಇವರು 80ರ ದಶಕದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಪಟ್ಟಿಯಲ್ಲಿ ಈಕೆಯ ಹೆಸರೂ ಸೇರಿತ್ತು ಎನ್ನಲಾಗುತ್ತಿದೆ. ಮಾಲಾ ಸಿನ್ಹಾ, ಇವರು ಬಾಲಿವುಡ್ಡಿನ ಖ್ಯಾತ ನಟಿ. ಅವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು ಎನ್ನಲಾಗಿದೆ. ಇದೇ ವೇಳೆ ಮಾಲಾ ತನ್ನ ಹಣ ಉಳಿಸಲು ಮಾಧ್ಯಮ ಹಾಗೂ ನ್ಯಾಯಾಲಯದ ಮುಂದೆ ಏನೋ ಹೇಳಿದ್ದು ಕೇಳಿ ಎಲ್ಲರೂ ಬೆಚ್ಚಿಬಿದ್ದಿದ್ದರು. ಇದು 1978ರ ಮಾತು, ಮಾಲಾ ಸಿನ್ಹಾ ಯಶಸ್ಸಿನ ಉತ್ತುಂಗದಲ್ಲಿದ್ದಾಗ ಅವರ ಜೀವನದಲ್ಲಿ ಒಂದು ಘಟನೆ ನಡೆಯಿತು. ಅದು ಅವರ ಸಂತೋಷವನ್ನು ಕಸಿದುಕೊಂಡು ಜೀವನದ ಶಾಂತಿಯನ್ನು ಕದಡಿತು. ಈ ಪ್ರಕರಣ ಆದಾಯ ತೆರಿಗೆಗೆ ಸಂಬಂಧಿಸಿದ್ದಾಗಿತ್ತು. ಮಾಧ್ಯಮ ವರದಿಗಳ ಪ್ರಕಾರ, 1978 ರಲ್ಲಿ ಮುಂಬೈನಲ್ಲಿರುವ ಮಾಲಾ ಸಿನ್ಹಾ ಅವರ ಮನೆಯ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಳಿ ವೇಳೆ ಅವರ ಸ್ನಾನಗೃಹದಲ್ಲಿ 12 ಲಕ್ಷ ಮೂಟೆಗಳು ಪತ್ತೆಯಾಗಿದ್ದವು. 

ವಕೀಲರು ಹಾಗೂ ಆಕೆಯ ತಂದೆ ಆಲ್ಬರ್ಟ್ ಸಿನ್ಹಾ ಅವರ ಮನವಿ ಮೇರೆಗೆ ವೇಶ್ಯಾವಾಟಿಕೆ ಮೂಲಕ ಈ ಹಣವನ್ನು ಸಂಪಾದಿಸಿರುವುದಾಗಿ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿದ್ದರು! ನಂ.1 ನಟಿಯ ಸ್ಥಾನ ಪಡೆದು ಕಷ್ಟಪಟ್ಟು ಸಂಪಾದಿಸಿದ ಹಣವನ್ನೆಲ್ಲಾ ಎಲ್ಲಿ ಸರ್ಕಾರ ಮುಟ್ಟುಗೋಲು ಹಾಕಿಕೊಂಡುಬಿಡುತ್ತದೆಯೋ ಎಂಬ ಆಲೋಚನೆಯಲ್ಲಿ ಮಾಲಾ ಸಿನ್ಹಾ ಬೆದರಿ ಹೋಗಿದ್ದರು. ಇದೇ ಕಾರಣಕ್ಕೆ ಕೋರ್ಟ್​ ಮುಂದೆ ಆಕೆ ಈ ಹಣದ ಮೂಲ ವೇಶ್ಯಾವಾಟಿಕೆ ಎಂದುಬಿಟ್ಟರು! ವೇಶ್ಯಾವಾಟಿಕೆ (Prostitution) ಮೂಲಕ ಈ ಹಣವನ್ನು ಸಂಪಾದಿಸಿರುವುದಾಗಿ ಹೇಳಿಕೆ ಕೊಟ್ಟರು. ಈ ಹೇಳಿಕೆಯನ್ನು ಅವರು ತಮ್ಮ ತಂದೆ ಆಲ್ಬರ್ಟ್ ಸಿನ್ಹಾ ಅವರ ಮನವಿ ಮೇರೆಗೆ ಹೇಳಿರುವುದಾಗಿ ಹೇಳಲಾಗುತ್ತಿದೆ. ಆದರೆ ಸತ್ಯ ಏನು ಎಂಬುದು ಯಾರಿಗೂ ತಿಳಿದಿಲ್ಲ.

Leave a Reply

%d bloggers like this: