ಖಡಕ್ ಪೋಸ್ಟರ್ ಮೂಲಕ ಸಲಾರ್ ಚಿತ್ರದ ರಿಲೀಸ್ ಡೇಟ್ ಘೋಷಣೆ ಮಾಡಿದ ನಿರ್ದೇಶಕ ಪ್ರಶಾಂತ್ ನೀಲ್ ಅವರು

ಭಾರತೀಯ ಚಿತ್ರರಂಗದ ಮುಂದಿನ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾವಾಗಿ ಹೊರ ಹೊಮ್ಮಲಿರುವ ಪ್ರಭಾಸ್ ನಟನೆಯ ಸಲಾರ್ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಹೌದು ಸಲಾರ್ ಚಿತ್ರ ಈಗಾಗಲೇಒಂದನೇ ಹಂತದ ಶೇಕಡ ನಲವತ್ತರಷ್ಟು ಶೂಟಿಂಗ್ ಮುಗಿಸ್ಕೊಂಡು ಎರಡನೇ ಹಂತದ ಚಿತ್ರೀಕರಣಕ್ಕಾಗಿ ಹೈದರಾಬಾದ್ ನಲ್ಲಿ ಚಿತ್ರತಂಡ ಬೀಡು ಬಿಟ್ಟಿದೆ. ನಿರ್ದೇಶಕ ಪ್ರಶಾಂತ್ ನೀಲ್ ಅವರೇ ನಿರ್ದೇಶನ ಮಾಡಿದ್ದ ಉಗ್ರಂ ಚಿತ್ರದ ರೀಮೇಕೇ ಈ ಸಲಾರ್ ಸಿನಿಮಾ ಎಂದು ಹೇಳಲಾಗುತ್ತಿದೆ. ಉಗ್ರಂ ಚಿತ್ರದ ಬಹುತೇಕ ಛಾಯೆ ಈ ಸಲಾರ್ ನಲ್ಲಿ ಎದ್ದು ಕಾಣುತ್ತಿದೆ. ಉಗ್ರಂ, ಕೆಜಿಎಫ್, ಕೆಜಿಎಫ್2 ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿರೋ ರವಿ ಬಸ್ರೂರ್ ಅವರೇ ಈ ಚಿತ್ರಕ್ಕೂ ಕೂಡ ಮ್ಯೂಸಿಕ್ ನೀಡುತ್ತಿದ್ದಾರೆ. ಕೆಜಿಎಫ್ ಚಿತ್ರದಲ್ಲಿ ಕೆಲಸ ಮಾಡಿದ್ದ ತಂಡವೇ ಸಲಾರ್ ಚಿತ್ರದಲ್ಲಿ ಕೆಲಸ ಮಾಡುತ್ತಿದೆ.

ಇನ್ನೊಂದು ವಿಶೇಷ ಏನಪ್ಪಾ ಅಂದರೆ ಇದೇ ಮೊದಲ ಬಾರಿಗೆ ಪರಭಾಷಾ ನಟನೊಬ್ಬನ ಸಿನಿಮಾಗೆ ಕನ್ನಡದ ಹೆಮ್ಮೆಯ ಸಿನಿಮಾ ನಿರ್ಮಾಣ ಸಂಸ್ಥೆ ಆಗಿರುವ ಹೊಂಬಾಳೆ ಫಿಲಂಸ್ ವಿಜಯ್ ಕಿರಗಂದೂರ್ ಅವರು ಬಂಡವಾಳ ಹೂಡಿದ್ದಾರೆ. ಕೆಜಿಎಫ್2 ಚಿತ್ರದ ಮೂಲಕ ಸಾವಿರ ಕೋಟಿಗೂ ಅಧಿಕ ಲಾಭ ಮಾಡಿರೋ ನಿರ್ಮಾಪಕ ವಿಜಯ್ ಕಿರಗಂದೂರ್ ಅವರು ಸಲಾರ್ ಚಿತ್ರಕ್ಕೂ ಕೂಡ ಭಾರಿ ಮೊತ್ತದ ಬಂಡವಾಳ ಹೂಡಿದ್ದಾರೆ. ಸಲಾರ್ ಚಿತ್ರ ಆಕ್ಷನ್ ಓರಿಯೆಂಟೆಡ್ ಸಿನಿಮಾ ಆಗಿದ್ದು, ಎರಡು ಭಾಗಗಳಲ್ಲಿ ರೀಲೀಸ್ ಆಗಲಿದೆಯಂತೆ. ಈಗಾಗಲೇ ಯುರೋಪ್, ಆಫ್ರಿಕಾ ಸೇರಿದಂತೆ ಹೊರ ದೇಶಗಳಲ್ಲಿ ಶೂಟಿಂಗ್ ಮುಗಿಸಿದ್ದು, ವಿದೇಶಿ ತಂತ್ರಜ್ಞರಿಂದ ಗ್ರಾಫಿಕ್ಸ್ ಕೆಲಸ ಮಾಡಿಸಲಿದ್ದಾರಂತೆ. ಮೂಲಗಳ ಪ್ರಕಾರ ಬರೋಬ್ಬರಿ ನಾಲ್ಕು ನೂರು ಕೋಟಿ ವೆಚ್ಚದಲ್ಲಿ ಈ ಸಲಾರ್ ಸಿನಿಮಾ ತಯಾರಾಗುತ್ತಿದ್ದು.

ಇನ್ನು ಕೆಲವೇ ತಿಂಗಳಲ್ಲಿ ಶೂಟಿಂಗ್ ಮುಗಿಸಿಕೊಂಡು ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿದೆಯಂತೆ. ಕೆಜಿಎಫ್ ಚಿತ್ರದಲ್ಲಿ ಪ್ರಶಾಂತ್ ನೀಲ್ ಅವರ ಕೆಲಸ ನೋಡಿ ಅವರ ಮುಂದಿನ ಚಿತ್ರಗಳಿಗಾಗಿ ಸಿನಿ ಪ್ರೇಕ್ಷಕರು ಭಾರಿ ಕುತೂಹಲ ಇಟ್ಟುಕೊಂಡಿದ್ದಾರೆ. ಅದರಂತೆ ಪ್ರಶಾಂತ್ ನೀಲ್ ಅವರ ಈ ಸಲಾರ್ ಚಿತ್ರ ನೋಡಿಲು ಕೇವಲ ಭಾರತ ಮಾತ್ರ ಅಲ್ಲದೇ ವರ್ಲ್ಡ್ ವೈಡ್ ಎಲ್ಲಾ ಸಿನಿ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಇತ್ತೀಚೆಗೆ ಸಲಾರ್ ಚಿತ್ರತಂಡ ಪೋಸ್ಟರ್ ಒಂದನ್ನ ರಿಲೀಸ್ ಮಾಡಿ ಮುಂದಿನ ವರ್ಷ ಅಂದರೆ ಸೆಪ್ಟೆಂಬರ್ 28, 2023ಕ್ಕೆ ಸಲಾರ್ ಸಿನಿಮಾ ವರ್ಲ್ಡ್ ವೈಡ್ ರಿಲೀಸ್ ಆಗಲಿದೆ ಎಂದು ಅಧಿಕೃತವಾಗಿ ನಿರ್ದೇಶಕ ಪ್ರಶಾಂತ್ ನೀಲ್ ತಮ್ಮ ಟ್ವಿಟರ್ ಖಾತೆಯಲ್ಲಿ ತಿಳಿಸಿದ್ದಾರೆ. ಇದು ಪ್ರಭಾಸ್ ಅಭಿಮಾನಿಗಳಿಗೆ ಮತ್ತು ಪ್ರಶಾಂತ್ ನೀಲ್ ಅವರ ಅಭಿಮಾನಿಗಳಿಗೆ ಸಖತ್ ಖುಷಿಯ ವಿಚಾರವಾಗಿದೆ.

Leave a Reply

%d bloggers like this: